“01 ಮೇ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ರಾಣಿ ಅಬ್ಬಕ್ಕ ಫೋರ್ಸ್’
ಸುದ್ಧಿಯಲ್ಲಿ ಏಕಿದೆ ? ಮಹಿಳೆಯರ ಕುರಿತ ಪ್ರಕರಣಗಳನ್ನು ಮಹಿಳೆಯರೇ ವ್ಯವಸ್ಥಿತವಾಗಿ ಎದುರಿಸಿ ಕ್ರಮ ಕೈಗೊಳ್ಳುವ ಉದ್ದೇಶದ ‘ರಾಣಿ ಅಬ್ಬಕ್ಕ ಫೋರ್ಸ್’ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಸಂದೀಪ್ ಪಾಟೀಲ್ ಚಾಲನೆ ನೀಡಿದರು.
- 50 ಮಹಿಳಾ ಪೊಲೀಸರ ಈ ಪಡೆಗೆ ಚಾಲನೆ ನೀಡಿ ಮಾತನಾಡಿದ ಆಯುಕ್ತರು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಮಹಿಳಾ ಪಡೆ ರಚಿಸಲಾಗಿದ್ದು, ನಗರದ ಮಹಿಳಾ ಪಡೆಗೆ 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ದಿಟ್ಟ ಹೋರಾಟ ಮಾಡಿದ ರಾಣಿ ಅಬ್ಬಕ್ಕ ಹೆಸರನ್ನಿಡಲಾಗಿದೆ ಎಂದರು.
- ಎಸ್ಐ ದರ್ಜೆ ಮಹಿಳಾ ಅಧಿಕಾರಿ ತಂಡದ ನೇತೃತ್ವ ವಹಿಸುತ್ತಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಮಾಲ್ಗಳು, ಕಾಲೇಜು, ಪಾರ್ಕ್, ಬೀಚ್, ರೈಲ್ವೆ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
- ಕಮಿಷನರೇಟ್ ವ್ಯಾಪ್ತಿಯಲ್ಲಿ 50ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಂದೊಂದು ಪಾಯಿಂಟ್ಗಳಲ್ಲಿ 3ರಿಂದ 5ಮಂದಿ ಕಾರ್ಯನಿರ್ವಹಿಸಲಿದ್ದಾರೆ
- ರಫ್ ಆ್ಯಂಡ್ ಟಫ್ ಮೆರುಗು: ಪೊಲೀಸ್ ಸಮವಸ್ತ್ರಕ್ಕಿಂತ ಭಿನ್ನವಾಗಿ ಕೆಮೊಫ್ಲಾಜ್ ವರ್ಣದ ಪ್ಯಾಂಟ್ ಹಾಗೂ ರಾಣಿ ಅಬ್ಬಕ್ಕ ಪಡೆ ಎಂದು ಬರೆದಿರುವ ಕಪ್ಪು ಟಿ-ಶರ್ಟ್ಗಳನ್ನು ಈ ಪಡೆಗೆ ಒದಗಿಸಲಾಗಿದೆ. ಪೊಲೀಸ್ ಪಡೆಗೆ ರಫ್ ಆ್ಯಂಡ್ ಟಫ್ ಮೆರುಗನ್ನು ಇದು ನೀಡಿದೆ.
ರಾಣಿ ಅಬ್ಬಕ್ಕ
- ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ತುಳುನಾಡಿನ ರಾಣಿಯಾಗಿದ್ದಳು. ಇವರು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು.
- ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು.
- ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿಎಂದು ಹೆಸರಾಗಿದ್ದಳು ವಸಾಹಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.
ಕಾರ್ವಿುಕ ಕಲ್ಯಾಣ ಯೋಜನೆ
ಸುದ್ಧಿಯಲ್ಲಿ ಏಕಿದೆ ?ಕಾರ್ವಿುಕ ಕಲ್ಯಾಣ ಯೋಜನೆದೇಶದ ಆರ್ಥಿಕ ಅಭಿವೃದ್ಧಿ ಅಲ್ಲಿನ ಕಾರ್ವಿುಕ ವರ್ಗವನ್ನು ಅವಲಂಬಿಸಿರುತ್ತದೆ. ಕಾರ್ವಿುಕ ದಿನದ ಅಂಗವಾಗಿ ಕಾರ್ವಿುಕರಿಗಿರುವ ಪ್ರಮುಖ ಯೋಜನೆಗಳ ಮಾಹಿತಿ ಒದಗಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್:
- ಅಸಂಘಟಿತ ವಲಯ ಕಾರ್ವಿುಕರಿಗೆ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ 10 ಕೋಟಿ ಕಾರ್ವಿುಕರನ್ನು ತಲುಪುವ ಗುರಿ ಹೊಂದಿದೆ.
- ಮಾಸಿಕ 15 ಸಾವಿರ ರೂ. ವೇತನ ಪಡೆಯುವ ಉದ್ಯೋಗಿಗಳಿಗೆ ಇದು ಅನ್ವಯವಾಗುತ್ತದೆ. 29 ವರ್ಷದ ಉದ್ಯೋಗಿಯು ಮಾಸಿಕ 100 ರೂ. ತನ್ನ 60ನೇ ವಯಸ್ಸಿನವರೆಗೆ ಪಾವತಿಸುತ್ತ ಹೋದರೆ ಬಳಿಕ 3 ಸಾವಿರ ರೂ. ಪಿಂಚಣಿ ಸಿಗಲಿದೆ. 18 ವರ್ಷದ ಉದ್ಯೋಗಿಗಳು ಮಾಸಿಕ 55 ರೂ. ಪಾವತಿಸಿಸಬೇಕು.
- ಒಟ್ಟು ಮೊತ್ತದ ಶೇ.50 ಕಾರ್ವಿುಕರು ಮತ್ತು ಉಳಿದ ಶೇ.50 ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಒಂದು ವೇಳೆ ಕೆಲಸ ಮಾಡುವ ವೇಳೆ ಕಾರ್ವಿುಕ ಮೃತಪಟ್ಟರೆ ಆ ಖಾತೆಯನ್ನು ಪತ್ನಿ ಮುಂದುವರಿಸಬಹುದು. ಆದರೆ, ಪತ್ನಿಗೆ 1,500 ರೂ. ಮಾತ್ರ ಪಿಂಚಣಿ ಸಿಗುತ್ತದೆ.
ಅಮ್ ಆದ್ಮಿ ಬಿಮಾ ಯೋಜನೆ:
- ದೇಶದಲ್ಲಿ ಶೇ. 90 ಅಸಂಘಟಿತ ಕಾರ್ವಿುಕರು ವಿವಿಧ ವಲಯದಲ್ಲಿದ್ದು, ಸಾಮಾಜಿಕ ಭದ್ರತೆ ಕಲ್ಪಿಸಲು ಆಮ್ ಆದ್ಮಿ ಬಿಮಾ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದೆ. ಕಾರ್ವಿುಕರು ಮತ್ತು ಆತನ ಕುಟುಂಬ ಸದಸ್ಯರು ಈ ಯೋಜನೆಯಡಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.
- ಸಮಸ್ಯೆ ಇತ್ಯರ್ಥಕ್ಕೆ ವಿವಿಧ ಮಂಡಳಿ: ಕಾರ್ವಿುಕ ಇಲಾಖೆಯಲ್ಲಿ ಕಟ್ಟಡ ಮತ್ತು ಇತರೆ ಕಾರ್ವಿುಕ ಮಂಡಳಿ, ಅಸಂಘಟಿತ ಕಾರ್ವಿುಕ ಮಂಡಳಿ ಮತ್ತು ಕರ್ನಾಟಕ ಕಾರ್ವಿುಕ ಕಲ್ಯಾಣ ಮಂಡಳಿಗಳಿವೆ. ಕಟ್ಟಡ ಮತ್ತು ಇತರೆ ಕಾರ್ವಿುಕ ಮಂಡಳಿಯಲ್ಲಿ 15 ಸಾಮಾಜಿಕ ಭದ್ರತೆ ಸೌಲಭ್ಯಗಳಿವೆ.
- ಅಸಂಘಟಿತ ಕಾರ್ವಿುಕ ಮಂಡಳಿಯಲ್ಲಿ 42 ವಿವಿಧ ಉದ್ದಿಮೆಗಳನ್ನು ಗುರುತಿಸಲಾಗಿದೆ ಹಾಗೂ ಕರ್ನಾಟಕ ಕಾರ್ವಿುಕ ಕಲ್ಯಾಣ ಮಂಡಳಿಯಲ್ಲಿ ಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿವವರಿಗೆ ವಿವಿಧ ಸಾಮಾಜಿಕ ಭದ್ರತೆ ಸೌಲಭ್ಯಗಳಿವೆ. ಕಾರ್ವಿುಕರ ಕಲ್ಯಾಣ ಮಂಡಳಿ 7 ಸಾವಿರ ಕೋಟಿ ರೂ. ನಿಧಿ ಹೊಂದಿದೆ. ಇದರಿಂದ ಮಂಡಳಿ ಸದಸ್ಯರಾದವರಿಗೆ ವಿವಿಧ ಸೌಲಭ್ಯ ನೀಡಲಾಗುತ್ತದೆ.
- ಪುನರ್ವಸತಿ ಯೋಜನೆ: ಜೀತದಾಳು ಕಾರ್ವಿುಕರ ಅನುಕೂಲಕ್ಕಾಗಿ ಈ ಯೋಜನೆ. ದೇಶದಲ್ಲಿ ಒಟ್ಟು 80 ಲಕ್ಷ ಜೀತದಾಳು ಕಾರ್ವಿುಕರಿದ್ದಾರೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ. ಫಲಾನುಭವಿಗಳಿಗೆ 20 ಸಾವಿರ ರೂ. ಅನುದಾನ ನೀಡಲಾಗುತ್ತದೆ.
ರಾಜ್ಯ ಸರ್ಕಾರದ ಇತರೆ ಸೌಲಭ್ಯ
- ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ವಿುಕರಿಗೆ ಶಿಶುಪಾಲನಾ ಕೇಂದ್ರ
- ಕೆಲಸ ಮಾಡುವಾಗ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ
- ಕಟ್ಟಡ ನಿರ್ಮಾಣ ಕಾರ್ವಿುಕರು, ಅವಲಂಬಿತರಿಗೆ ಶ್ರಮಿಕ ಸೌರಭ ಯೋಜನೆಯಡಿ ಪ್ರತಿ ಮನೆ ನಿರ್ವಣಕ್ಕೆ 5 ಲಕ್ಷ ರೂ. ಮುಂಗಡ ಹಣ
- ಕಾರ್ವಿುಕ ಆರೋಗ್ಯ ಭಾಗ್ಯದಡಿ 5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಮರುಪಾವತಿ
- ಕಾರ್ವಿುಕ ಮಕ್ಕಳಲ್ಲಿ ಸ್ವಯಂ ಉದ್ಯೋಗ ಉತ್ತೇಜಿಸಲು -ಠಿ;50 ಸಾವಿರ ಬಡ್ಡಿರಹಿತ ಸಹಾಯಧನ
- ಆಟೋ, ಟ್ಯಾಕ್ಸಿ ಚಾಲಕರಿಗೆ ಗುಂಪು ವಿಮೆ ಸೌಲಭ್ಯ
- ಅಪಘಾತರಹಿತ ಚಾಲಕರಿಗೆ 25 ಸಾವಿರ ರೂ. ಬಹುಮಾನ
- ಬೆಂಗಳೂರು ಆಟೋ, ಟ್ಯಾಕ್ಸಿ ಚಾಲಕರಿಗೆ ‘ಸಾರಥಿಯ ಸೂರು’ಬಾಡಿಗೆ ಆಧಾರಿತ ವಸತಿ ಯೋಜನೆ
ಹಿಮಾಲಯದಲ್ಲಿ ಹಿಮಮಾನವನ ಹೆಜ್ಜೆ
ಸುದ್ಧಿಯಲ್ಲಿ ಏಕಿದೆ ?ನೇಪಾಳದ ಮಕಾಲು ಬೇಸ್ ಕ್ಯಾಂಪ್ ಬಳಿ ಪೌರಾಣಿಕ ಜೀವಿ ‘ಯೇತಿ’ಯ ಹೆಜ್ಜೆ ಗುರುತುಗಳನ್ನು ಕಂಡಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.
- ಪರ್ವತಾರೋಹಣ ತಂಡದ ಜತೆಗೆ ಯಾತ್ರೆ ವೇಳೆ 32×15 ಇಂಚು ಗಾತ್ರದ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದು ಪ್ರಾಚೀನ ಜೀವಿ ಯೇತಿಯದೇ ಇರಬೇಕು ಎಂದು ಸೇನೆ ನಂಬಿದೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.
- ಮಕಾಲು ಬೇಸ್ ಕ್ಯಾಂಪ್ ಬಳಿ 2019ರ ಏಪ್ರಿಲ್ 9ರಂದು ಈ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ನಿಗೂಢ ಹಿಮ ಮಾನವನ ಹೆಜ್ಜೆ ಗುರುತುಗಳು ಮಕಾಲು- ಬರುನ್ ನ್ಯಾಷನಲ್ ಪಾರ್ಕ್ ಬಳಿ ಮಾತ್ರ ಈ ಮೊದಲು ಪತ್ತೆಯಾಗಿತ್ತು
ಯಾರಿದು ಹಿಮಮಾನವ?
- ಯೇತಿ ಅಥವಾ ಹಿಮಮಾನವ ಎಂದು ಕರೆಯಲ್ಪಡುವ ಈ ಜೀವಿ, ಮಂಗಗಳ ಮುಖಲಕ್ಷಣ ಹೊಂದಿದ್ದು ಮನುಷ್ಯರಿಗಿಂತ ಎತ್ತರವಾಗಿರುತ್ತವೆ. ಇವುಗಳ ಇರುವಿಕೆ ಕುರಿತ ಸಾಕ್ಷಿಗಳು ಸೈಬೀರಿಯಾ ಮತ್ತು ಪೂರ್ವ ಏಷ್ಯಾದಲ್ಲಿ ಕಂಡುಬಂದಿವೆ. ಈ ಹಿಂದೆ ಅನೇಕ ಸಂಶೋಧನಕಾರರು ಹಾಗೂ ಪರ್ವತಾರೋಹಿಗಳು ಯೇತಿಗಳನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾರೆ. ಅವುಗಳ ಹೆಜ್ಜೆಗುರುತುಗಳ ಫೋಟೋಗಳು ಸಹ ಚರ್ಚೆಗೆ ಗ್ರಾಸವಾಗಿದ್ದವು.
ಇದೇ ಮೊದಲಲ್ಲ
- 1932ರಲ್ಲಿ ಭಿಯೆಚ್ ಹೋಜ್ಶಾನ್ ಎಂಬ ಪರ್ವತಾರೋಹಿ ಮೊದಲ ಬಾರಿಗೆ ಬಂಗಾಳದ ಏಷಿಯಾಟಿಕ್ ಸೊಸೈಟಿ ಜರ್ನಲ್ನಲ್ಲಿ ಯೇತಿ ಬಗ್ಗೆ ಉಲ್ಲೇಖಿಸಿದ್ದ. ಪರ್ವತಾರೋಹಣದಲ್ಲಿ ಹಿಮಕರಡಿಯಂತಹ ದೊಡ್ಡ ಜೀವಿಯೊಂದು ಕಂಡಿದ್ದು, ಅದು ಮನುಷ್ಯನಂತೆ ನಡೆದಾಡುತ್ತಿತ್ತು ಎಂದು ಹೇಳಿಕೊಂಡಿದ್ದ.
- ಬಳಿಕ 1889ರಲ್ಲಿ ಪರ್ವತಾರೋಹಿಗಳ ಒಂದು ಗುಂಪು ಯೇತಿ ಹೆಜ್ಜೆ ಗುರುತುಗಳನ್ನು ನೋಡಿದ್ದಾಗಿ ಹೇಳಿತ್ತು. 1974ರಲ್ಲಿ ಎವರೆಸ್ಟ್ ಬಳಿಯ ಗ್ರಾಮವೊಂದರಲ್ಲಿ ಯಾಕ್ ಪ್ರಾಣಿಗಳನ್ನು ಮೇಯಿಸುತ್ತಿದ್ದ ವ್ಯಕ್ತಿಗೆ ಹಿಮಮಾನವ ಕಾಣಿಸಿದ್ದನಂತೆ. ಅದು ತನ್ನ ಎರಡು ಯಾಕ್ ಪ್ರಾಣಿಗಳನ್ನು ಎತ್ತಿಕೊಂಡು ಹೋಯಿತು.
- ಆಗ ತಾನು ಜೋರಾಗಿ ಚೀರಿದ್ದಕ್ಕೆ ಕೋಪಗೊಂಡ ಹಿಮಮಾನವ ತನ್ನನ್ನು ಅನತಿ ದೂರದವರೆಗೆ ಎತ್ತಿ ಬಿಸಾಕಿತ್ತು ಎಂದು ಆತ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾಗ ಅಲ್ಲಿ ದೈತ್ಯ ಮಾನವನ ಹೆಜ್ಜೆಗುರುತುಗಳು ಪತ್ತೆಯಾಗಿದ್ದವು. ಇತ್ತೀಚಿನವರೆಗೂ ದೈತ್ಯ ಹಿಮಮಾನವನ ಇರುವಿಕೆಯ ಬಗ್ಗೆ ಅನೇಕ ಸುಳಿವು ಲಭಿಸಿದ್ದರೂ, ಅವುಗಳ ಅಸ್ತಿತ್ವ ಕುರಿತ ಸಾಕ್ಷ್ಯ ಸಿಕ್ಕಿಲ್ಲ.
ಭಾರತದ ಮೂಲಭೂತ ಕೈಗಾರಿಕೆ ಉತ್ಪಾದನೆ
ಸುದ್ಧಿಯಲ್ಲಿ ಏಕಿದೆ ?ಸಿಮೆಂಟ್ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
- 8 ಕೋರ್ ಕೈಗಾರಿಕೆಗಳ ಒಟ್ಟಾರೆ ಸೂಚ್ಯಂಕ 2018-19ರ ಏಪ್ರಿಲ್ನಿಂದ ಮಾರ್ಚ್ ಅವಧಿಗೆ ಶೇ. 32ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.
- ಮಾರ್ಚ್ 2019ರಲ್ಲಿ ಕಲ್ಲಿದ್ದಲ್ಲು ಉತ್ಪಾದನೆ ಶೇ.1ರಷ್ಟು ಏರಿಕೆ ಕಂಡಿದೆ. ಕಚ್ಚಾ ತೈಲ ಉತ್ಪಾದನೆ ಶೇ.6.2ರಷ್ಟು ಕುಸಿದಿದೆ. 2018-19ರ ಅವಧಿಯ ಇದರ ಸಮಗ್ರ ಸೂಚ್ಯಂಕ ಶೇ.4.1ರಷ್ಟು ಇಳಿಕೆಯಾಗಿದೆ.
- ಅಡುಗೆ ಅನಿಲ ಉತ್ಪಾದನೆ ಶೇ.4ರಷ್ಟು ಏರಿಕೆ ಕಂಡಿದ್ದು, 2018-19ರ ಅವಧಿಯಲ್ಲಿ ಶೇ.0.8ರಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವಾಲಯ ಹೇಳಿದೆ.
ಎಂಟು ಕೋರ್ ಸೆಕ್ಟರ್ಸ್
- ಪ್ರಮುಖ ಉದ್ಯಮವನ್ನು ಮುಖ್ಯ ಉದ್ಯಮ ಎಂದು ವ್ಯಾಖ್ಯಾನಿಸಬಹುದು. ಹೆಚ್ಚಿನ ದೇಶಗಳಲ್ಲಿ, ಎಲ್ಲಾ ಉದ್ಯಮಗಳ ಬೆನ್ನೆಲುಬಾಗಿರುವ ಒಂದು ನಿರ್ದಿಷ್ಟ ಉದ್ಯಮವಿದೆ ಮತ್ತು ಇದು ಪ್ರಮುಖ ಉದ್ಯಮವಾಗಿ ಅರ್ಹತೆ ಪಡೆಯುತ್ತದೆ.
- ಭಾರತದಲ್ಲಿ, ಎಂಟು ಪ್ರಮುಖ ವಲಯಗಳಿವೆ
- ಶುದ್ಧೀಕರಣ ಉತ್ಪನ್ನಗಳು (04%)
- ವಿದ್ಯುತ್ (85%)
- ಸ್ಟೀಲ್ (92%)
- ಕಲ್ಲಿದ್ದಲು (33%)
- ಕಚ್ಚಾ ತೈಲ (98%)
- ನೈಸರ್ಗಿಕ ಅನಿಲ (88%)
- ಸಿಮೆಂಟ್ (37%)
- ರಸಗೊಬ್ಬರಗಳು (63%)
- ಈ ಎಂಟು ಕೋರ್ ಇಂಡಸ್ಟ್ರೀಸ್ ಇಂಡಸ್ಟ್ರಿ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ) ನಲ್ಲಿ ಒಳಗೊಂಡಿರುವ ಅಂಶಗಳ ತೂಕದ ಸುಮಾರು 27% ನಷ್ಟು ಭಾಗವನ್ನು ಒಳಗೊಂಡಿದೆ, ಇದು ಫ್ಯಾಕ್ಟರಿ ಔಟ್ಪುಟ್ ಅನ್ನು ಅಳೆಯುತ್ತದೆ.
- ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು ಎಂಟು ಕೋರ್ ಇಂಡಸ್ಟ್ರೀಸ್ನ ಸೂಚಿಯನ್ನು ಬಿಡುಗಡೆ ಮಾಡಿದೆ.
ಪಿಎನ್ಬಿ ಜೊತೆ 2 ಬ್ಯಾಂಕ್ ವಿಲೀನ ಸಂಭವ
ಸುದ್ಧಿಯಲ್ಲಿ ಏಕಿದೆ ?ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ಗಳ ಮಹಾವಿಲೀನದ ಬಳಿಕ, ಈಗ ಎರಡನೇ ಸುತ್ತಿನಲ್ಲಿ ಇನ್ನೊಂದು ಮಹಾವಿಲೀನಕ್ಕೆ ಸಿದ್ಧತೆಗಳು ನಡೆದಿವೆ.
- ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ(ಬಿಒಐ) ಸೇರಿದಂತೆ ಇತರೆ ಬ್ಯಾಂಕ್ಗಳ ಮುಖ್ಯಸ್ಥರನ್ನು ವಿಲೀನ ಸಂಬಂಧ ಸರಕಾರವು ಆಹ್ವಾನಿಸಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ವಿಲೀನ ಕುರಿತಾಗಿ ಬ್ಯಾಂಕ್ಗಳು ಪೂರಕ ಅಭಿಪ್ರಾಯ ನೀಡದೇ ಹೋದರೆ, ಈ ಬಗ್ಗೆ ತಜ್ಞರ ಸಮಿತಿಯು(ಎಎಂ) ಸಲಹೆ ನೀಡಲಿದೆ.
- ಪ್ರಸಕ್ತ ವರ್ಷದ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ವಿಲೀನ ಸಾಧ್ಯತೆಗಳನ್ನು ಚರ್ಚಿಸುವ ಸಭೆಗಳು ನಡೆಯಲಿವೆ.
- 2018ರ ಅಕ್ಟೋಬರ್ನಲ್ಲಿ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ಗಳನ್ನು ವಿಲೀನ ಮಾಡಲು ಪ್ರಸ್ತಾವನೆ ರೂಪಿಸಿತ್ತು. 2019ರ ಏಪ್ರಿಲ್ 1ರಿಂದ ಈ ಬೃಹತ್ ಬ್ಯಾಂಕ್ ರೂಪುಗೊಂಡಿದ್ದು, ದೇಶದ ಮೂರನೇ ದೊಡ್ಡ ಬ್ಯಾಂಕ್ ಆಗಿದೆ.
ಅಜರ್ ‘ಜಾಗತಿಕ ಉಗ್ರ’ ಘೋಷಣೆ ಸನ್ನಿಹಿತ
ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸುವ ಪ್ರಸ್ತಾವಕ್ಕೆ ಒಡ್ಡಿರುವ ತಾಂತ್ರಿಕ ತಡೆಯನ್ನು ಚೀನಾ ಹಿಂತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
- ಪುಲ್ವಾಮಾ ದಾಳಿಯ ಬೆನ್ನಲ್ಲೇ ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರು ಸೇರ್ಪಡೆಗೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸದಾಗಿ ಪ್ರಸ್ತಾಪ ಸಲ್ಲಿಸಿದ್ದವು. ಇದಕ್ಕೆ ತಾಂತ್ರಿಕ ಕಾರಣ ಒಡ್ಡಿ ನಾಲ್ಕನೇ ಬಾರಿಯೂ ಪ್ರಸ್ತಾವಕ್ಕೆ ಚೀನಾ ಅಡ್ಡಗಾಲು ಹಾಕಿತ್ತು. ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದಂತೆ ಕಾಣುತ್ತಿರುವ ಚೀನಾ ತನ್ನ ತಾಂತ್ರಿಕ ತಡೆಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.
- 2001ರಲ್ಲಿ ಭಾರತದ ಸಂಸತ್ ಮೇಲಿನ ದಾಳಿ, ಅದೇ ವರ್ಷ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಮೇಲೆ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ ಸೇರಿದಂತೆ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಸರಣಿ ದಾಳಿಗಳ ಹಿಂದೆ ಅಜರ್ ಪ್ರಮುಖ ಪಾತ್ರ ವಹಿಸಿದ್ದಾನೆ.
ಘೋಷಣೆಯಿಂದ ಏನಾಗುತ್ತದೆ?
- ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದರೆ ಅಜರ್ಗೆ ಅಂತಾರಾಷ್ಟ್ರೀಯ ಸಂಚಾರ ಸಾಧ್ಯವಾಗುವುದಿಲ್ಲ.
- ಜೆಇಎಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಹಣಕಾಸು ನೆರವಿಗೆ ಕಡಿವಾಣ ಬೀಳಲಿದೆ.