“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್ ಕ್ವಾಲಿಟಿ ಆಫ್ ಲಿವಿಂಗ್ ರ್ಯಾಂಕ್ ಪಟ್ಟಿ
ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್ ಕ್ವಾಲಿಟಿ ಆಫ್ ಲಿವಿಂಗ್ ರ್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ಮತ್ತು ಭಾರತದಲ್ಲಿ 2ನೇ ಸ್ಥಾನವನ್ನು ಪಡೆದಿದೆ.
- ವಿಶ್ವದಾದ್ಯಂತ 231 ನಗರಗಳಲ್ಲಿ ನಡೆಸಿದ ಅಧ್ಯಯನದ ಫಲವಾಗಿರುವ ಈ ವರದಿಗೆ ಜಾಗತಿಕ ಮಾನ್ಯತೆ ಇದ್ದು, ಆಸ್ಟ್ರಿಯಾದ ವಿಯೆನ್ನಾ ಮೊದಲ ಸ್ಥಾನದಲ್ಲಿದೆ.
- ಭಾರತದ ನಗರಗಳ ಪೈಕಿ ಹೈದರಾಬಾದ್ ಮತ್ತು ಪುಣೆ ಜಾಗತಿಕವಾಗಿ ಜಂಟಿಯಾಗಿ 142 ರ್ಯಾಂಕ್ ಪಡೆದು ದೇಶದಲ್ಲಿ ಮೊದಲ ಸ್ಥಾನ ಪಡೆದಿವೆ. 2018ರ ಸೆಪ್ಟೆಂಬರ್ನಿಂದ ನವೆಂಬರ್ ನಡುವೆ ಈ ಸಮೀಕ್ಷೆ ನಡೆದಿದೆ. ದೇಶದ 7 ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ಬೆಂಗಳೂರು ನಗರವು ಶಿಕ್ಷಣ, ವೈದ್ಯಕೀಯ ಸವಲತ್ತುಗಳು, ವಸತಿ, ಮನೋರಂಜನೆ, ಆರ್ಥಿಕ ಸ್ಥಿತಿಗಳಲ್ಲಿ ಉನ್ನತ ಮಟ್ಟದಲ್ಲಿದ್ದು, ಉತ್ತಮ ಪರಿಸರವನ್ನೂ ಹೊಂದಿರುವುದು ರಾರಯಂಕಿಂಗ್ ಪಡೆಯಲು ಅನುಕೂಲವಾಗಿದೆ.
ಭಾರತದ ಟಾಪ್ 7 ನಗರ
- ಹೈದರಾಬಾದ್ ,ಪುಣೆ ,ಬೆಂಗಳೂರು ,ಚೆನ್ನೈ ,ಮುಂಬಯಿ, ಕೋಲ್ಕೊತಾ ,ದಿಲ್ಲಿ ,
ಪರಿಗಣಿಸುವ ಅಂಶಗಳು
- ಸಾಮಾಜಿಕ-ಸಾಂಸ್ಕೃತಿ ಪರಿಸರ ,ಶಾಲೆಗಳು ಮತ್ತು ಶಿಕ್ಷಣ , ವೈದ್ಯಕೀಯ ಮತ್ತು ಆರೋಗ್ಯ ,ಮನೋರಂಜನೆ , ವಸತಿ, ಸಾರ್ವಜನಿಕ ಸಾರಿಗೆ ,ಆರ್ಥಿಕ, ನೈಸರ್ಗಿಕ ಪರಿಸರ ,ರಾಜಕೀಯ, ಸಾಮಾಜಿಕ ವಾತಾವರಣ
ವೈಯಕ್ತಿಕ ಭದ್ರತೆ: 4ನೇ ಸ್ಥಾನ
- ವೈಯಕ್ತಿಕ ಭದ್ರತೆಯಲ್ಲಿ ದೇಶದಲ್ಲಿ ಬೆಂಗಳೂರಿಗೆ 3ನೇ ಸ್ಥಾನವಿದೆ. ಚೆನ್ನೈ, ಪುಣೆ, ಹೈದರಾಬಾದ್ ಮೊದಲ ಮೂರು ಸ್ಥಾನಗಳಲ್ಲಿವೆ.
- 2011ರಲ್ಲಿ ದೇಶದಲ್ಲೇ ನಂ.1 ಪಟ್ಟ ಪಡೆದಿದ್ದ ಬೆಂಗಳೂರು, ಕಳೆದ ವರ್ಷವೂ 2ನೇ ಸ್ಥಾನದಲ್ಲಿತ್ತು.
- 231 ರಾಷ್ಟ್ರಗಳ ಪೈಕಿ ಇರಾಕ್ನ ಬಾಗ್ದಾದ್ ಕೊನೆಯ ಸ್ಥಾನದಲ್ಲಿದ್ದರೆ, ಕರಾಚಿ 201ನೇ ಸ್ಥಾನದಲ್ಲಿದೆ.
ವಿಶ್ವದ ಟಾಪ್ 10 ನಗರಗಳು
- ವಿಯೆನ್ನಾ ಆಸ್ಟ್ರಿಯಾ 2. ಜ್ಯೂರಿಚ್ ಸ್ವಿಜರ್ಲೆಂಡ್ 3. ವ್ಯಾಂಕೋವರ್ ಕೆನಡಾ 4. ಮ್ಯೂನಿಚ್ ಜರ್ಮನಿ
- ಆಕ್ಲೆಂಡ್ ನ್ಯೂಜಿಲ್ಯಾಂಡ್ 6. ಡಸ್ಸೆಲ್ಡಾರ್ಫ್ ಜರ್ಮನಿ 7. ಫ್ರಾಂಕ್ಫರ್ಟ್ ಜರ್ಮನಿ 8. ಕೋಪನ್ಹೇಗನ್ ಡೆನ್ಮಾರ್ಕ್
- ಜಿನೇವಾ ಸ್ವಿಜರ್ಲೆಂಡ್ 10. ಬಾಸೆಲ್ ಸ್ವಿಜರ್ಲೆಂಡ್
ಐಡಬ್ಲ್ಯೂಜಿ ಗ್ಲೋಬರ್ ವರ್ಕ್ಸ್ಪೇಸ್ ಸಮೀಕ್ಷೆ
ಸುದ್ಧಿಯಲ್ಲಿ ಏಕಿದೆ ?ಐಡಬ್ಲ್ಯೂಜಿ ಗ್ಲೋಬರ್ ವರ್ಕ್ಸ್ಪೇಸ್ ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ. 61 ರಷ್ಟು ಕೆಲಸಗಾರರು ತಮ್ಮ ಕೆಲಸದ ವೇಳೆಯೊಂದಿಗೆ ಆಫೀಸ್ಗೆ ಬಂದು ಹೋಗುವ ಸಮಯವನ್ನೂ ಸೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಶೇ. 41ರಷ್ಟು ಕೆಲಸಗಾರರು ಆಫೀಸ್ಗೆ ಹೋಗುವುದು ಮತ್ತು ವಾಪಸ್ಬರುವುದು ಕೆಲಸದ ಭಾಗವಾಗಿದ್ದು, ಈ ಪ್ರಯಾಣದ ಅವಧಿಯನ್ನು ನಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.
- ಮೈಂಡ್ಮೆಟ್ರೆ ರಿಸರ್ಚ್ ಈ ಸಮೀಕ್ಷೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದೆ ಮತ್ತು ಈ ಮಾದರಿಯು ಹಿರಿಯ ವ್ಯವಸ್ಥಾಪಕರು ಮತ್ತು ಮಾಲೀಕರಿಂದ ಹೆಚ್ಚು ವಿವಿಧ ಪ್ರತಿನಿಧಿಗಳನ್ನು ಹೊಂದಿದೆ, ಜಗತ್ತಿನಾದ್ಯಂತದ ವ್ಯವಹಾರಗಳಲ್ಲಿ ವಿವಿಧ ಕೈಗಾರಿಕೆಗಳು ವ್ಯಾಪಿಸಿವೆ.
- ಐಡಬ್ಲ್ಯೂಜಿ ಗ್ಲೋಬರ್ ವರ್ಕ್ಸ್ಪೇಸ್ 80 ದೇಶಗಳಲ್ಲಿ 15 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಿ ವರದಿಯನ್ನು ಸಿದ್ಧಪಡಿಸಿದೆ.
- ಭಾರತೀಯರಂತೆ ವಿಶ್ವಮಟ್ಟದಲ್ಲೂ ಶೇ. 42 ರಷ್ಟು ಜನರು ಆಫೀಸ್ಗೆ ತೆರಳುವ ಪ್ರಯಾಣದ ಅವಧಿಯನ್ನು ಕೆಲಸದ ಸಮಯದೊಂದಿಗೆ ಸೇರಿಸಬೇಕು. ಏಕೆಂದರೆ ಅದು ನಮ್ಮ ಫ್ರೀ ಟ್ರೈ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
- ಪ್ರಯಾಣದ ಅವಧಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಕೆಲಸಗಾರರಿಗೆ ತಮ್ಮ ಇಚ್ಛೆಯ ಕೆಲಸದ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಹಲವು ವಾರದಲ್ಲಿ ಕನಿಷ್ಠ 2-3 ದಿನ ಆಫೀಸ್ನಿಂದ ಹೊರಗೆ ಕೆಲಸ ಮಾಡಲು ಇಚ್ಛಿಸುವುದಾಗಿ ತಿಳಿಸಿದ್ದರು
ಕ್ಷಿಪಣಿ ಪರೀಕ್ಷೆ ಯಶಸ್ವಿ
ಸುದ್ಧಿಯಲ್ಲಿ ಏಕಿದೆ ?ಯುದ್ಧ ಟ್ಯಾಂಕ್ಗಳನ್ನು ಹೊಡೆದುರುಳಿಸಬಲ್ಲ ಸ್ವದೇಶಿ ನಿರ್ಮಿತ ಪೊರ್ಟೆಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಾಜಸ್ಥಾನದ ಪೋಖ್ರಣ್ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಕ್ಷಿಪ್ಪಣಿ ವಿಶೇಷತೆಗಳು
- ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಯೋಧರು ಬೇಕಾದ ಕಡೆ ಒಯ್ದು, ತಮ್ಮ ಭುಜದ ಮೇಲೆ ಇರಿಸಿಕೊಂಡು ಫೈರ್ ಮಾಡುವ ಮೂಲಕ ಯುದ್ಧ ಟ್ಯಾಂಕ್ಗಳನ್ನು ಹೊಡೆದುರುಳಿಸಬಹುದಾಗಿದೆ.
- 5 ಕಿಲೋಮೀಟರ್ನಷ್ಟು ದೂರದ ಗುರಿಯನ್ನು ಹೊಡೆದುರುಳಿಸಬಲ್ಲದು.
- ಇಂಟಿಗ್ರೇಟೆಡ್ ಎವಿಯೋನಿಕ್ಸ್ ವ್ಯವಸ್ಥೆ ಹಾಗೂ ಅಲ್ಟ್ರಾ ಮಾರ್ಡನ್ ಇಮೇಜಿಂಗ್ ಇನ್ಫ್ರಾರೆಡ್ ರೇಡಾರ್ಗಳನ್ನು ಹೊಂದಿದೆ.
- ಇನ್ನೂ ಒಂದಷ್ಟು ಪರೀಕ್ಷೆಗಳ ಬಳಿಕ 2021ರಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ.