“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಸಿ ಬೋಫೋರ್ಸ್ ಫಿರಂಗಿ
ಸುದ್ಧಿಯಲ್ಲಿ ಏಕಿದೆ ?ದೇಸಿ ನಿರ್ಮಿತ ಮೊದಲ ಬೋಫೋರ್ಸ್ ಫಿರಂಗಿಗಳು ಇದೇ 26ರಂದು ಸೇನೆಗೆ ಸೇರ್ಪಡೆಯಾಗಲಿವೆ ಎಂದು ಸೇನಾ ಮೂಲಗಳು ಹೇಳಿವೆ.
- ಮೂಲ ಬೋಫೋರ್ಸ್ ಫಿರಂಗಿಯ ತಂತ್ರಜ್ಞಾನವನ್ನೇ ಉನ್ನತೀಕರಿಸಿ ಶೇಕಡ 81ರಷ್ಟು ದೇಸಿ ಉತ್ಪನ್ನ ಬಳಸಿ ಅಭಿವೃದ್ಧಿಪಡಿಸಿದ 155 ಎಂಎಂ/45 ಕ್ಯಾಲಿಬರ್ನ ಸ್ವಯಂ ಚಾಲಿತ ಗನ್ ವ್ಯವಸ್ಥೆ ಹೊಂದಿರುವ ಐದು ‘ಧನುಷ್ ಅರ್ಟಿಲರಿ ಗನ್ಸ್‘ ಫಿರಂಗಿಗಳು ಮೊದಲ ಹಂತದಲ್ಲಿ ಸೇನೆಗೆ ಸೇರ್ಪಡೆಯಾಗಲಿವೆ.
- ದೇಶದ ಮೊದಲ ಲಾಂಗ್ ರೇಂಜ್ ಆರ್ಟಿಲರಿ ಗನ್ ಎನಿಸಿಕೊಂಡಿರುವ ಧನುಷ್ ಫಿರಂಗಿಗಳು 38 ಕಿಲೋಮೀಟರ್ ದೂರದವರೆಗಿನ ಗುರಿಯನ್ನು ಹೊಡೆದುರುಳಿಸುವ ತಾಕತ್ತು ಹೊಂದಿದೆ.
- ಸತತ ಆರು ವರ್ಷಗಳ ಪರೀಕ್ಷಾರ್ಥ ಪ್ರಯೋಗದ ಬಳಿಕ ಈಗ ಸೇನೆಗೆ ನಿಯೋಜನೆಗೊಳ್ಳುತ್ತಿವೆ. 114 ಫಿರಂಗಿಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಜಬಲ್ಪುರದ ಗನ್ ಕ್ಯಾರಿಯೇಜ್ ಫ್ಯಾಕ್ಟರಿಯಲ್ಲಿ ಇವು ಉತ್ಪಾದನೆಯಾಗುತ್ತಿವೆ ಎಂದು ಸೇನಾ ಮೂಲಗಳು ಹೇಳಿವೆ.
ಧನುಷ್ (ಹೊವಿಟ್ಜರ್)
- ಧನುಷ್ ಭಾರತೀಯ ಸೈನ್ಯವು ಬಳಸಿದ 155 ಮಿಮೀ ಟವಡ್ ಹೊವಿಟ್ಜರ್. ಈ ವಿನ್ಯಾಸವು ಬೊಫೋರ್ಸ್ ಹ್ಯೂಬಿಟ್ಸ್ FH77 ಅನ್ನು ಆಧರಿಸಿದೆ, ಇದನ್ನು 1980 ರ ದಶಕದಲ್ಲಿ ಭಾರತ ಸ್ವಾಧೀನಪಡಿಸಿಕೊಂಡಿತು.
- 2018 ರಲ್ಲಿ ಗನ್ ಅಭಿವೃದ್ಧಿಯ ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು 2019 ರಲ್ಲಿ ಸರಣಿಯ ನಿರ್ಮಾಣಕ್ಕೆ ಅಂಗೀಕರಿಸಲ್ಪಟ್ಟಿತು.
- ಭಾರತೀಯ ಸೇನೆಯು 114 ಬಂದೂಕುಗಳನ್ನು ಆದೇಶಿಸಿತು ಮತ್ತುಅದರ ಒಟ್ಟು ಗಾತ್ರವು 414 ಗನ್ಗಳಿಗೆ ಏರಿಕೆಗೊಳ್ಳಬಹುದು.
ಚಿನೋಕ್ ಹೆಲಿಕಾಪ್ಟರ್ಗಳು
ಸುದ್ಧಿಯಲ್ಲಿ ಏಕಿದೆ ?ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ಮಿತ 4 ಚಿನೋಕ್ ಹೆಲಿಕಾಪ್ಟರ್ಗಳು ಮಾ.25ರಂದು ವಿದ್ಯುಕ್ತವಾಗಿ ಭಾರತೀಯ ವಾಯುಪಡೆಯ (ಐಎಎಫ್) ಸೇವೆಗೆ ಸೇರ್ಪಡೆಗೊಳ್ಳಲಿವೆ.
- ಚಂಡಿಗಢದಲ್ಲಿರುವ ವಾಯುಪಡೆ ಕೇಂದ್ರದಲ್ಲಿ ನೆಲೆಗೊಂಡಿರುವ ಸ್ಕ್ವಾಡರ್ನ್ ನಂ.126 ಹೆಲಿಕಾಪ್ಟರ್ ಫ್ಲೈಟ್ಗೆ (ಫೆದರ್ವೇಟ್ಸ್) ಶಕ್ತಿಶಾಲಿ ಸಿಎಚ್-47ಎಫ್ (ಐ) ಚಿನೋಕ್ ಹೆಲಿಕಾಪ್ಟರ್ಗಳು ಸೇರ್ಪಡೆಗೊಳ್ಳಲಿವೆ.
- ಅಮೆರಿಕ ನಿರ್ಮಿತ ಚಿನೋಕ್ ಹೆಲಿಕಾಪ್ಟರ್ಗಳು ಫೆಬ್ರವರಿಯಲ್ಲೇ ಗುಜರಾತ್ನ ಮುಂದ್ರಾ ಬಂದರು ತಲುಪಿದ್ದವು. ಅರೆಬರೆಯಾಗಿ ಸಿದ್ಧಗೊಂಡಿದ್ದ ಇವುಗಳ ಬಿಡಿಭಾಗಗಳನ್ನು ಭಾರತದಲ್ಲಿ ಜೋಡಣೆ ಮಾಡಿ, ಯಶಸ್ವಿ ಪರೀಕ್ಷಾರ್ಥ ಹಾರಾಟ ಕೈಗೊಂಡ ಬಳಿಕ ಇವುಗಳನ್ನು ವಾಯುಪಡೆ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲು ನಿರ್ಧರಿಸಲಾಗಿತ್ತು.
- ಸದ್ಯ ಸ್ಕ್ವಾಡನ್ರ್ ನಂ.126 ರಷ್ಯಾ ನಿರ್ಮಿತ 4 ಮಿಲ್ ಎಂಐ-26ಎಸ್ ಹೆಲಿಕಾಪ್ಟರ್ಗಳನ್ನು ಹೊಂದಿದೆ. ಚಿನೋಕ್ಗಳ ಸೇರ್ಪಡೆಯೊಂದಿಗೆ ಈ ಹೆಲಿಕಾಪ್ಟರ್ಗಳ ಮೇಲಿನ ಕಾರ್ಯದೊತ್ತಡ ಕಡಿಮೆಯಾಗಲಿದೆ.
ಕಾಶ್ಮೀರ, ಈಶಾನ್ಯ ಭಾಗಗಳ ಗಡಿ ರಕ್ಷಣೆಗೆ ಬಳಕೆ
- ಸಿಎಚ್-47ಎಫ್ (ಐ) ಚಿನೋಕ್ ಹೆಲಿಕಾಪ್ಟರ್ಗಳನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಈಶಾನ್ಯ ಭಾರತದ ಗಡಿಭಾಗಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.
ಸಿಎಚ್–47ಎಫ್ (ಐ) ಚಿನೋಕ್ ಹೆಲಿಕಾಪ್ಟರ್ಗಳ ಬಗ್ಗೆ
- ಭಾರತದಲ್ಲಿರುವ ಡೈನಾಮಾಟಿಕ್ಸ್ ಎಂಬ ಸಂಸ್ಥೆ ಸೇರಿ ಹಲವು ಪಾಲುದಾರಿಕಾ ಸಂಸ್ಥೆಗಳು ಸಿಎಚ್-47ಎಫ್ (ಐ) ಚಿನೋಕ್ ಹೆಲಿಕಾಪ್ಟರ್ಗಳನ್ನು ಮರುಜೋಡಣೆ ಮಾಡುತ್ತಿವೆ.
- ಬಹುಕಾರ್ಯ ನಿರ್ವಹಿಸಬಹುದಾದ ಅತ್ಯಾಧುನಿಕ ಚಿನೋಕ್ ಹೆಲಿಕಾಪ್ಟರ್ಗಳನ್ನು ಅಮೆರಿಕ ಸೇರಿ ವಿಶ್ವದ 18 ರಾಷ್ಟ್ರಗಳು ಬಳಸುತ್ತಿವೆ
- ವಿವಿಧ ಬಗೆಯ ಹವಾಮಾನ, ಭೌಗೋಳಿಕ ಪರಿಸ್ಥಿತಿಯಲ್ಲೂ ಇವು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲವು
- ಕಳೆದ ವರ್ಷ ಭಾರತೀಯ ಸೇನಾಪಡೆ ಸೇವೆಗೆ ಸೇರ್ಪಡೆಗೊಂಡಿರುವ ಎಂ777 ಲೈಟ್ವೇಟ್ ಹೋವಿಟ್ಜರ್ಗಳನ್ನು ಎತ್ತಿಕೊಂಡು ಹೋಗುವ ಸಾಮರ್ಥ್ಯ ಈ ಹೆಲಿಕಾಪ್ಟರ್ಗಳಿಗಿವೆ
- ಇವು 10 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲವಾಗಿವೆ
- ಕಡಿದಾದ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಉತ್ತರ ಮತ್ತು ಈಶಾನ್ಯ ಭಾರತದ ಪ್ರದೇಶಗಳಿಗೆ ಯೋಧರನ್ನು, ಶಸ್ತ್ರಾಸ್ತ್ರಗಳನ್ನು, ರಸ್ತೆ ನಿರ್ಮಾಣ ಸಾಮಗ್ರಿಗಳನ್ನು ಮತ್ತು ಉಪಕರಣಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಸಿಎಚ್-47ಎಫ್ (ಐ) ಚಿನೋಕ್ ಹೆಲಿಕಾಪ್ಟರ್ಗಳಿಗಿದೆ.
ಭಾರತದ ಆರ್ಥಿಕತೆಗೆ ಐಎಂಎಫ್ ಮೆಚ್ಚುಗೆ
ಸುದ್ಧಿಯಲ್ಲಿ ಏಕಿದೆ ?ಕಳೆದ ಐದು ವರ್ಷಗಳಲ್ಲಿ ವಿಶ್ವದ ಅತಿ ವೇಗದ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಐಎಂಎಫ್(ಇಂಟರ್ನ್ಯಾಷನಲ್ ಮೊನಿಟರಿ ಫಂಡ್) ಹೇಳಿದೆ.
- ಏಪ್ರಿಲ್ನಲ್ಲಿ ಐಎಂಎಫ್ ವಾರ್ಷಿಕ ಮುನ್ನೋಟ (WEO)ಬಿಡುಗಡೆಯಾಗಲಿದ್ದು, ಭಾರತ ಹಾಗೂ ವಿಶ್ವ ಆರ್ಥಿಕತೆ ಕುರಿತು ಇನ್ನಷ್ಟು ವಿವರ ಬಿಡುಗಡೆಯಾಗಲಿದೆ.
- ಭಾರತೀಯ ಸಂಜಾತೆ ಗೀತಾ ಗೋಪಿನಾಥ್ ಅವರು ಐಎಂಎಎಫ್ನ ಮುಖ್ಯಸ್ಥೆಯಾದ ಬಳಿಕ ಇದೇ ಮೊದಲ ಬಾರಿಗೆ ಈ ವರದಿ ಬರುತ್ತಿದೆ. ಚುನಾವಣೆವ ಹೊಸ್ತಿಲಲ್ಲಿ ಈ ವರದಿ ಭಾರತದ ಮಟ್ಟಿಗೆ ಮಹತ್ವದ್ದಾಗಲಿದೆ.
- ನೀತಿ ಆದ್ಯತೆಗಳ ನಡುವೆ WEO ಬ್ಯಾಂಕುಗಳು ಮತ್ತು ಕಾರ್ಪೊರೇಟ್ ಬ್ಯಾಲೆನ್ಸ್ ಶೀಟ್ಗಳನ್ನು ಸ್ವಚ್ಛಗೊಳಿಸುವುದು, ಹಣಕಾಸಿನ ಬಲವರ್ಧನೆ, ಕೇಂದ್ರ ಮತ್ತು ರಾಜ್ಯಗಳೆರಡೂ, ಫ್ಯಾಕ್ಟರ್ ಮಾರುಕಟ್ಟೆಗಳಲ್ಲಿ ವಿಶಾಲ ರಚನಾತ್ಮಕ ಸುಧಾರಣೆಗಳ ದೃಷ್ಟಿಯಿಂದ ಸುಧಾರಣೆಯ ವೇಗವನ್ನು ನಿರ್ವಹಿಸುವುದು, ಕಾರ್ಮಿಕ, ಭೂ ಸುಧಾರಣೆ ಮತ್ತು ಮತ್ತಷ್ಟು ವೇಗವಾಗಿ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆ ಸಾಧಿಸಲು ವ್ಯಾಪಾರದ ವಾತಾವರಣವನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತದೆ
ವಿಶ್ವ ಆರ್ಥಿಕ ದೃಷ್ಟಿಕೋನ
- ವರ್ಲ್ಡ್ ಎಕನಾಮಿಕ್ ಔಟ್ಲುಕ್ (WEO) ಎನ್ನುವುದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನಡೆಸಿದ ಸಮೀಕ್ಷೆ. ಇದು ವರ್ಷಕ್ಕೆ ಎರಡು ಬಾರಿ ಭಾಗಶಃ ಪ್ರಕಟಗೊಳ್ಳುತ್ತದೆ ಮತ್ತು ಭಾಗಶಃ ನವೀಕರಿಸಲ್ಪಡುತ್ತದೆ. ಮುಂದಿನ ಮತ್ತು ಮಧ್ಯಮ ಸಂದರ್ಭಗಳಲ್ಲಿ ಇದು ವಿಶ್ವದ ಆರ್ಥಿಕತೆಯನ್ನು ಚಿತ್ರಿಸುತ್ತದೆ, ಭವಿಷ್ಯದವರೆಗೆ ನಾಲ್ಕು ವರ್ಷಗಳ ವರೆಗಿನ ಪ್ರಕ್ಷೇಪಗಳ ಜೊತೆ.
- WEO ಮುನ್ಸೂಚನೆಗಳು GDP, ಹಣದುಬ್ಬರ, ಪ್ರಸಕ್ತ ಖಾತೆ ಮತ್ತು ಜಗತ್ತಿನಾದ್ಯಂತದ 180 ಕ್ಕಿಂತ ಹೆಚ್ಚು ದೇಶಗಳ ಹಣಕಾಸಿನ ಸಮತೋಲನದಂತಹ ಪ್ರಮುಖ ಬೃಹತ್ ಆರ್ಥಿಕ ಸೂಚಕಗಳನ್ನು ಒಳಗೊಂಡಿವೆ. ಇದು ಪ್ರಮುಖ ಆರ್ಥಿಕ ನೀತಿಯ ಸಮಸ್ಯೆಗಳನ್ನೂ ಸಹ ವ್ಯವಹರಿಸುತ್ತದೆ
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ
- ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಯು (IMF ) ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ತನ್ನ ಸದಸ್ಯ ರಾಷ್ಟ್ರಗಳ ಬೃಹದಾರ್ಥಿಕ ಕಾರ್ಯನೀತಿಗಳು, ಅದರಲ್ಲಿಯೂ ಮುಖ್ಯವಾಗಿ ವಿನಿಮಯ ದರಗಳು ಹಾಗೂ ಬಾಕಿಇರುವ ಹಣಸಂದಾಯಗಳ ಮೇಲೆ ಪರಿಣಾಮ ಬೀರುವಂತಹ ಜಾಗತಿಕ ವಿತ್ತೀಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ.
- ಅಂತರರಾಷ್ಟ್ರೀಯ ವಿನಿಮಯ ದರಗಳನ್ನು ಸಬಲಗೊಳಿಸಿ ಅಭಿವೃದ್ಧಿಯನ್ನು ಮತ್ತಷ್ಟು ಸುಲಭ ಮಾಡುವ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಾಪಿಸಲಾಗಿರುವ ಸಂಸ್ಥೆಯಾಗಿದೆ.
- ಹಲವು ಬಡ ರಾಷ್ಟಗಳಿಗೆ ಹೆಚ್ಚಿನ ಮಟ್ಟದ ಹತೋಟಿಯೊಂದಿಗೆ ಅಗತ್ಯ ಇರುವಷ್ಟು ಸಾಲವನ್ನು ನೀಡುತ್ತಿದೆ. ಇದರ ಕೇಂದ್ರ ಕಾರ್ಯಾಲಯವು ಅಮೇರಿಕ ಸಂಯುಕ್ತ ಸಂಸ್ಥಾನದ ವಾಷಿಂಗ್ಟನ್, ಡಿ.ಸಿ.ಯಲ್ಲಿದೆ