“22 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೊಯ್ನಾದಿಂದ ಕುಡಿಯುವ ನೀರು
ಸುದ್ಧಿಯಲ್ಲಿ ಏಕಿದೆ ?ಬರಗಾಲ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಗತ್ಯಕ್ಕಾಗಿ ತಕ್ಷ ಣ ಕೊಯ್ನಾ ಹಾಗೂ ಉಜ್ಜನಿ ಜಲಾಶಯದಿಂದ ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೆರೆಯ ಮಹಾರಾಷ್ಟ್ರ ಸಿಎಂಗೆ ಮನವಿ ಮಾಡಿದ್ದಾರೆ.
ಕೋಯ್ನಾ ಡ್ಯಾಮ್
- ಕೊಯ್ನಾ ಅಣೆಕಟ್ಟು ಭಾರತದ ಮಹಾರಾಷ್ಟ್ರದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು ಕೊಯ್ನಾ ನದಿಯ ಮೇಲೆ ಕಟ್ಟಿದ ಕಲ್ಲುಮಣ್ಣು-ಕಾಂಕ್ರೀಟ್ ಅಣೆಕಟ್ಟು, ಇದು ಮಹಾಬಲೇಶ್ವರ, ಸಹ್ಯಾದ್ರಿ ವ್ಯಾಪ್ತಿಯಲ್ಲಿರುವ ಒಂದು ಗಿರಿಧಾಮದಲ್ಲಿದೆ .
- ಇದು ಚಿಪ್ಲುನ್ ಮತ್ತು ಕರದ್ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕೊಯ್ನಾ ನಗರ, ಸತಾರ ಜಿಲ್ಲೆಯಲ್ಲಿ ನೆಲೆಸಿದೆ, . ಅಣೆಕಟ್ಟಿನ ಮುಖ್ಯ ಉದ್ದೇಶವು ನೆರೆಯ ಪ್ರದೇಶಗಳಲ್ಲಿ ಕೆಲವು ನೀರಾವರಿ ಮತ್ತು ಜಲವಿದ್ಯುತ್ತ್ವವನ್ನು ಒದಗಿಸುವುದು . ಇಂದು ಕೋಯ್ನಾ ಹೈಡ್ರೊಎಲೆಕ್ಟ್ರಿಕ್ ಪ್ರಾಜೆಕ್ಟ್ ಭಾರತದಲ್ಲಿ ಅತೀ ದೊಡ್ಡ ಪೂರ್ಣಗೊಂಡ ಜಲವಿದ್ಯುತ್ ಸ್ಥಾವರವಾಗಿದೆ. ಒಟ್ಟು 1,920 ಮೆವ್ಯಾ ಸಾಮರ್ಥ್ಯದ ಸಾಮರ್ಥ್ಯ ಹೊಂದಿದೆ. ಅದರ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಕಾರಣ ಕೊಯ್ನಾ ನದಿಯನ್ನು ‘ಮಹಾರಾಷ್ಟ್ರದ ಜೀವ ನದಿ’ ಎಂದು ಪರಿಗಣಿಸಲಾಗಿದೆ.
ಉಜ್ಜೈನಿ ಅಣೆಕಟ್ಟು
- ಭೀಮಾ ನದಿ ಅಥವಾ ಭೀಮಾ ನೀರಾವರಿ ಯೋಜನೆ ಎಂದೂ ಕರೆಯಲ್ಪಡುವ ಉಜ್ಜೈನಿ ಅಣೆಕಟ್ಟು ಕೃಷ್ಣಾ ನದಿಯ ಉಪನದಿಗೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಾಧಾ ತಾಲ್ಲೂಕಿನಲ್ಲಿರುವ ಉಜ್ಜೈನಿ ಗ್ರಾಮದ ಸಮೀಪವಿರುವ ಭೂಕುಸಿತ ಕಲ್ಲಿನ ಕಲ್ಲುಗುಡ್ಡೆ ಗುರುತ್ವಾಕರ್ಷಣೆ ಅಣೆಕಟ್ಟುಆಗಿದೆ .
- ಪಶ್ಚಿಮ ಘಟ್ಟದ ಭೀಮಾಶಂಕರದಲ್ಲಿ ಹುಟ್ಟುವ ಭೀಮಾ ನದಿ, ಮತ್ತು ಅದರ ಉಪನದಿಗಳು ಮತ್ತು ತೊರೆಗಳೊಂದಿಗೆ ಭೀಮಾ ಕಣಿವೆಯನ್ನು ರೂಪಿಸುತ್ತದೆ, ಇದು ಇಪ್ಪತ್ತೆರಡು ಅಣೆಕಟ್ಟುಗಳನ್ನು ನಿರ್ಮಿಸಿದೆ ಮತ್ತು ಉಜ್ಜೈನಿ ಅಣೆಕಟ್ಟು ನದಿಯ ಟರ್ಮಿನಲ್ ಅಣೆಕಟ್ಟಾಗಿದೆ ಮತ್ತು ಇದು ಅತಿದೊಡ್ಡ 14,858 ಕಿ.ಮಿ 2 ನ ಕ್ಯಾಚ್ಮೆಂಟ್ ಪ್ರದೇಶವನ್ನು ಪ್ರತಿಬಂಧಿಸುವ ಕಣಿವೆ ಆಗಿದೆ .
ಪಕ್ಷಾಂತರ ನಿಷೇಧ ಕಾಯ್ದೆ
ಸುದ್ಧಿಯಲ್ಲಿ ಏಕಿದೆ ?ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಲಬುರಗಿ ಎಸ್ಸಿ ಕ್ಷೇತ್ರದಿಂದ ಸ್ಪರ್ಧಿಸಲು ಉಮೇಶ್ ಜಾಧವ್ಗೆ ಟಿಕೆಟ್ ದೊರೆತಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ನೋಟಿಸ್ ಜಾರಿ ಮಾಡಿದ್ದಾರೆ.
ಪಕ್ಷಾಂತರ ವಿರೋಧಿ ಕಾನೂನು
- ಪಕ್ಷಾಂತರ ವಿರೋಧಿ ಕಾನೂನನ್ನು 1985 ರಲ್ಲಿ ಸಂಸತ್ತು ಅಂಗೀಕರಿಸಿತು ಮತ್ತು 2002 ರಲ್ಲಿ ಬಲಪಡಿಸಿತು. ಸಂವಿಧಾನದ 52 ನೇ ತಿದ್ದುಪಡಿಯು 10 ನೇ ವೇಳಾಪಟ್ಟಿ ಯನ್ನು ಒಳಗೊಂಡಿತ್ತು, ಈ ಕೆಳಗಿನ ವಿಧಾನಗಳಲ್ಲಿ ಶಾಸಕರನ್ನು ಅನರ್ಹಗೊಳಿಸಬಹುದು:
- ಪಾರ್ಲಿಮೆಂಟ್ ಅಥವಾ ರಾಜ್ಯ ಶಾಸನಸಭೆಯ ಸದಸ್ಯರು ತಾವು ಸ್ವಯಂಪ್ರೇರಣೆಯಿಂದ ತಮ್ಮ ಪಕ್ಷದಿಂದ ರಾಜೀನಾಮೆ ನೀಡುತ್ತಿದ್ದರೆ ಅಥವಾ ಪಕ್ಷದ ನಾಯಕತ್ವದ ನಿರ್ದೇಶನಗಳನ್ನು ಮತದಾನದ ಮೇಲೆ ಅನುಸರಿಸದಿದ್ದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಯಿತು.
- ಅಂತಹ ಪಕ್ಷದ ಯಾವುದೇ ನಿರ್ದೇಶನಕ್ಕೆ ವಿರುದ್ಧವಾಗಿ ಹೌಸ್ನಲ್ಲಿ ಸದಸ್ಯರು ಮತ ಚಲಾಯಿಸಿದಾಗ.
- ಸ್ವತಂತ್ರ ಸದಸ್ಯರು ರಾಜಕೀಯ ಪಕ್ಷದಲ್ಲಿ ಸೇರಿಕೊಂಡರೆ.
- ನಾಮನಿರ್ದೇಶಿತ ಸದಸ್ಯರು ಆರು ತಿಂಗಳಲ್ಲಿ ಒಂದು ಪಕ್ಷವನ್ನು ಸೇರಲು ಆಯ್ಕೆ ಮಾಡಬೇಕು.
- 6 ತಿಂಗಳ ನಂತರ, ಅವರು ಸ್ವತಂತ್ರ ಸದಸ್ಯರಾಗಿ ಅಥವಾ ಪಕ್ಷದ ಸದಸ್ಯರಾಗಿ ಪರಿಗಣಿಸಲ್ಪಟ್ಟಿದ್ದರು.
ಹೈ ಟೆಕ್ ಬಸ್
ಸುದ್ಧಿಯಲ್ಲಿ ಏಕಿದೆ ?ಭಯೋತ್ಪಾದನೆಯ ವಿರುದ್ಧ ನಿಖರ ಕಾರ್ಯಾಚರಣೆಗೆ ಮುಂದಾಗಿರುವ ದಿಲ್ಲಿ ಪೊಲೀಸ್, ಉಗ್ರರ ನಿಗ್ರಹಕ್ಕೆ ಹೈ-ಟೆಕ್ ಬಸ್ ಸಿದ್ಧಪಡಿಸಿದೆ.
- ರಾಷ್ಟ್ರ ರಾಜಧಾನಿಯ ಭಯೋತ್ಪಾದನೆಯ ಕರಿನೆರಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ದಿಲ್ಲಿ ಪೊಲೀಸ್, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಬಸ್ ಖರೀದಿಸಿದೆ. ಮೊಬೈಲ್ ಕಂಟ್ರೋಲ್ ರೂಮ್ ರೀತಿಯಲ್ಲೇ ಇದು ಕೆಲಸ ನಿರ್ವಹಿಸಲಿದೆ.
ಪ್ರಯೋಜನಗಳು
- ಸುಸಜ್ಜಿತವಾದ ಈ ಮೊಬೈಲ್ ಬಸ್ಸಿನಿಂದಲೇ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ನಿಯಂತ್ರಿಸಬಹುದಾಗಿದೆ.
- ಈ ಮೂಲಕ ಮುಂಬೈ ದಾಳಿಯಂತಹ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗಲಿದೆ.
- ತುರ್ತು ಪರಿಸ್ಥಿತಿ ಎದುರಾದಾಗ ಸೆಂಟ್ರಲ್ ಕಮಾಂಡ್ ಸೆಂಟರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ. ಸರಕಾರಿ ಕಾರ್ಯಕ್ರಮ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಅಥವಾ ಹಿಂಸಾಚಾರ ಸಂದರ್ಭಗಳಲ್ಲಿ ವಿಐಪಿಗಳಿಗೆ ಸುರಕ್ಷತೆ ಒದಗಿಸಲು ಈ ಬಸ್ ಬಳಕೆ ಮಾಡಬಹುದಾಗಿದೆ.
- ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ವಿಕೋಪ ನಿರ್ವಹಣೆ ರೂಪದಲ್ಲೂ ನೆರವಿಗೆ ಬರಲಿದೆ.
ಬಸ್ಸಿನ ವಿಶೇಷತೆಗಳು
- ಸುರಕ್ಷತಾ ಪಡೆಯ ಅನುಗುಣವಾಗಿ ಆರು ತಿಂಗಳುಗಳ ಅವಧಿಯಲ್ಲಿ ಬಸ್ ಅಭಿವೃದ್ಧಿಪಡಿಸಲಾಗಿದ್ದು, ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾನ್ಫೆರನ್ಸ್ ರೂಮ್, ಓಪರೇಷನ್ ಸೆಂಟರ್, ಸಾಧನ ವಿಭಾಗ, ಕಣ್ಗಾವಲು ಹಾಗೂ ಸಂವಹನ ವ್ಯವಸ್ಥೆಗಳಿರಲಿದೆ.
- ಏರೋಡೈನಾಮಿಕ್ ದೇಹ ವಿನ್ಯಾಸ, ಅತ್ಯಾಮೋಘ ಇಂಟಿರಿಯರ್, ಕಸ್ಟಮೈಸ್ಡ್ ಎಸಿ, ಕಂಟ್ರೋಲ್ ರೂಂ, ವಾಯ್ಸ್ ಲಾಗರ್ಸ್, ಇಂಟೆಗ್ರೇಟಡ್ ಕಮ್ಯೂನಿಕೇಷನ್ ಸಿಸ್ಟಂ, ವೈರ್ಲೆಸ್ ರೇಡಿಯೋ ಆಪರೇಟರ್, ಟೆಲಿವಿಷನ್, ಡೈ-ನೈಟ್ ಕ್ಯಾಮೆರಾ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಕಾನ್ಫೆರನ್ಸ್ ರೂಮ್ನಲ್ಲಿ 5 ಸೀಟುಗಳ ಸೋಫಾ ಟೇಬಲ್, 42 ಇಂಚುಗಳ ಎಚ್ಡಿ ಡಿಸ್ಪ್ಲೇ ಹಾಗೂ ಲೈವ್ ಡಿಟಿಎಚ್ ಆಳವಡಿಸಲಾಗಿದೆ.
- ಅಂದ ಹಾಗೆ ಬೆಂಗಳೂರು ತಳಹದಿಯ ಮಿಸ್ಟ್ರಾಲ್ ಸಂಸ್ಥೆ ನಿರ್ಮಿಸಿರುವ ಬಸ್ 7 ಕೋಟಿ ರೂ.ಗಳಷ್ಟು ಬೆಲೆ ಬಾಳುತ್ತದೆ.
ಎಐ ಕೌಶಲ್ಯ
ಸುದ್ಧಿಯಲ್ಲಿ ಏಕಿದೆ ?ಭಾರತದಲ್ಲಿ ಕೇವಲ ಶೇ.3.84ರಷ್ಟು ಎಂಜಿನಿಯರ್ಗಳಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತಹ(ಎಐ) ಆಧುನಿಕ ಕೌಶಲ್ಯಗಳು ಗೊತ್ತಿವೆ ಎಂದು ಆಸ್ಪೈರಿಂಗ್ ಮೈಂಡ್ಸ್ ಕಂಪನಿಯ ಸಮೀಕ್ಷೆ ತಿಳಿಸಿದೆ.
ವರದಿಯ ಸಾರಾಂಶ
- ಶæೕ.89 ರಷ್ಟು ಭಾರತೀಯ ಎಂಜಿನಿಯರ್ಗಳು ಜ್ಞಾನಾಧಾರಿತ ಎಕಾನಮಿಯಲ್ಲಿ, ಅಂದರೆ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಯಾವುದೇ ಹುದ್ದೆಗಳಿಗೆ ಅರ್ಹರಲ್ಲ ಎಂದು ಈ ಸಮೀಕ್ಷೆ ಹೇಳಿದೆ.
- ಭಾರತೀಯರಿಗೆ ಹೋಲಿಸಿದರೆ ಅಮೆರಿಕದಲ್ಲಿ ನಾಲ್ಕು ಪಟ್ಟು ಹೆಚ್ಚು ಎಂಜಿನಿಯರ್ಗಳು ಇತ್ತೀಚಿನ ತಂತ್ರಜ್ಞಾನದಲ್ಲಿ ಪರಿಣತರಾಗಿದ್ದಾರೆ.
- ಸಾಫ್ಟ್ವೇರ್ ಸಂಬಂಧಿತ ಸ್ಟಾರ್ಟಪ್ಗಳಲ್ಲಿ ಬೇಕಾಗುವ ತಾಂತ್ರಿಕ ನೈಪುಣ್ಯತೆ, ಲಾಂಗ್ವೇಜ್ ಸ್ಕಿಲ್ ಕೇವಲ ಶೇ.84 ಭಾರತೀಯ ಎಂಜಿನಿಯರ್ಗಳಿಗೆ ಇದೆ.
- ಆರ್ಟಿಫಿಶಿಯಲ್ ಇಂಟಲಿಜೆನ್ಸ್ , ಮೆಶೀನ್ ಲರ್ನಿಂಗ್, ಡೇಟಾ ಸೈನ್ಸ್, ಮೊಬೈಲ್ ಡೆವಲಪ್ಮೆಂಟ್ ಇತ್ಯಾದಿ ವಿಚಾರಗಳಲ್ಲಿ ಪರಿಣತಿ ಅತ್ಯಲ್ಪ.
- ಅಮೆರಿಕ, ಚೀನಾ, ಭಾರತದಲ್ಲಿ 7 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಸಮೀಕ್ಷೆಯ ನಂತರ ಈ ಅಂಕಿ ಅಂಶ ಸಿದ್ಧಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
- ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ನಿರೀಕ್ಷಿಸುತ್ತಿರುವವರಲ್ಲಿ ಶೇ.8ರಷ್ಟು ಮಂದಿ ಎಂಜಿನಿಯರ್ಗಳು ಸಾಫ್ಟ್ವೇರ್ ಕೋಡ್ ಬರೆಯಬಲ್ಲರು. ಆದರೆ ಭಾರತದಲ್ಲಿ ಕೇವಲ ಶೇ.4.7 ಮಂದಿಗೆ ಈ ಸಾಮರ್ಥ್ಯ ಇದೆ. ಆದರೆ ಚೀನಿ ಎಂಜಿನಿಯರ್ಗಳಿಗಿಂತ ಭಾರತೀಯ ಎಂಜಿನಿಯರ್ಗಳು ವಾಸಿ ಎಂದು ತಿಳಿಸಿದೆ.
ಕಾರಣವೇನು?
- ಭಾರತದಲ್ಲಿ ಎಂಜಿನಿಯರ್ಗಳಿಗೆ ಕೋರ್ಸ್ ಹೊರತುಪಡಿಸಿ ಇಂಟರ್ನ್ಶಿಪ್ ಹಾಗೂ ಇತರ ಪ್ರಾಜೆಕ್ಟ್ ವರ್ಕ್ಗಳಲ್ಲಿ ತೊಡಗಿಸಿಕೊಂಡ ಅನುಭವ ಕಡಿಮೆಯಾಗಿರುವುದು ಈ ಸಮಸ್ಯೆಗೆ ಕಾರಣ ಎಂದು ಸಮೀಕ್ಷೆ ತಿಳಿಸಿದೆ.
- ಕೇವಲ ಶೇ.40ರಷ್ಟು ಎಂಜಿನಿಯರಿಂಗ್ ಪದವೀಧರರು ಇಂಟರ್ನ್ಶಿಪ್ ತೆಗೆದುಕೊಳ್ಳುತ್ತಾರೆ. ಶೇ.36ರಷ್ಟು ಮಂದಿ ಮಾತ್ರ ಕೋರ್ಸ್ ಹೊರತುಪಡಿಸಿ ಪ್ರಾಜೆಕ್ಟ್ ವರ್ಕ್ಗಳಲ್ಲಿ ತೊಡಗಿಸಿದ ಅನುಭವ ಹೊಂದುತ್ತಾರೆ.
- ಎಂಜಿನಿಯರಿಂಗ್ ಬೋಧಕರಲ್ಲಿ ಶೇ.60ರಷ್ಟು ಮಂದಿ ಉದ್ಯಮ ವಲಯದ ಪರಿಕಲ್ಪನೆಗಳ ಬಗ್ಗೆ ಕಲಿಸುವುದಿಲ್ಲ. ಹೀಗಾಗಿ ಕೋರ್ಸ್ ಪಠ್ಯಗಳಿಗೆ ಸೀಮಿತವಾಗಿರುತ್ತದೆ.
- ಪ್ರಾಯೋಗಿಕ ಅನುಭವದ ಕೊರತೆ ಕಾಡುತ್ತದೆ. ಎಂಜಿನಿಯರಿಂಗ್ ಕೇವಲ ಓದುವಿಕೆಯಿಂದ ಕಲಿಯುವಂಥದ್ದಲ್ಲ, ಪ್ರಾಯೋಗಿಕತೆ ಮುಖ್ಯ ಎಂದು ಸಮೀಕ್ಷೆ ತಿಳಿಸಿದೆ.
ಭಾರತ 140ನೇ ಸಂತುಷ್ಟ ರಾಷ್ಟ್ರ
ಸುದ್ಧಿಯಲ್ಲಿ ಏಕಿದೆ ?ವಿಶ್ವ ಸಂತುಷ್ಟ ರಾಷ್ಟಗಳ ಪಟ್ಟಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ 140ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪಟ್ಟಿಯಲ್ಲಿ ಭಾರತದ 7 ಸ್ಥಾನ ಕುಸಿತ ಕಂಡಿದೆ.
- 2018ರಲ್ಲಿ 133ನೇ ಸ್ಥಾನದಲ್ಲಿತ್ತು. 2012ರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾ.20ನ್ನು ವಿಶ್ವ ಸಂತೋಷ ದಿನವೆಂದು ಘೋಷಿಸಲಾಗಿದ್ದು, ಹಿನ್ನೆಲೆಯಲ್ಲಿ ವಿಶ್ವದ ಸಂತುಷ್ಟ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
- ಸತತ ಎರಡು ವರ್ಷಗಳಿಂದ ಫಿನ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಡೆನ್ಮಾರ್ಕ್, ನಾರ್ವೆ, ಐಸ್ಲೆಂಡ್ ಮತ್ತು ನೆದರ್ಲೆಂಡ್ ಕ್ರಮ ವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
- ಆದಾಯ, ಸ್ವಾತಂತ್ರ್ಯ, ನಂಬಿಕೆ, ಆರೋಗ್ಯ ಯುತ ಜೀವಿತಾವಧಿ, ಸಾಮಾಜಿಕ ಬೆಂಬಲ ಮತ್ತು ಔದಾರ್ಯ ಅಂಶಗಳನ್ನು ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಜನರ ಖುಷಿ ಪ್ರಮಾಣ ಇಳಿಕೆಯಾಗುತ್ತಿರುವುದು ಕಂಡುಬಂದಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.
- 156 ರಾಷ್ಟ್ರಗಳನ್ನಾಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಪಾಕಿಸ್ತಾನ 67ನೇ ಸ್ಥಾನ, ಬಾಂಗ್ಲಾ ದೇಶ 125 ಮತ್ತು ಚೀನಾ 93ನೇ ಸ್ಥಾನದಲ್ಲಿದೆ. ದಕ್ಷಿಣ ಸುಡಾನ್ ಕೊನೆಯ ಸ್ಥಾನದಲ್ಲಿದ್ದರೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (155), ಅಫ್ಘಾನಿಸ್ತಾನ (154), ತಾಂಜಾನಿಯ(153) ಮತ್ತು ರುವಾಂಡ (152) ಸ್ಥಾನದಲ್ಲಿವೆ. ಅಮೆರಿಕ 19ನೇ ಸ್ಥಾನದಲ್ಲಿದೆ.
ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್
- ಜಾಗತಿಕ ಸಂತೋಷದ ಸ್ಥಿತಿಯ ಒಂದು ಹೆಗ್ಗುರುತು ಸಮೀಕ್ಷೆ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್. ವಿಶ್ವ ಹ್ಯಾಪಿನೆಸ್ ರಿಪೋರ್ಟ್ 2018 ಅವರ ಸಂತೋಷ ಮಟ್ಟದಿಂದ 156 ದೇಶಗಳನ್ನು ಹೊಂದಿದೆ, ಮತ್ತು ತಮ್ಮ ವಲಸಿಗರ ಸಂತೋಷದಿಂದ 117 ದೇಶಗಳನ್ನು ಗುರುತಿಸಿದೆ .
- ವಿಶ್ವ ಸಂತೋಷದ ವರದಿ ವಿವಿಧ ರಾಷ್ಟ್ರಗಳ ಸಂತೋಷದ ಅಳತೆಯಾಗಿದೆ.
- ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಅನ್ನು ಪ್ರಕಟಿಸುತ್ತದೆ.
- ಇದರ ವರದಿ 2012 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು.
- ಈ ವರದಿಯು ಸಾಮಾಜಿಕ ಬೆಂಬಲ, ಜೀವನದ ಆಯ್ಕೆಗಳು, ಜೀವಿತಾವಧಿಯನ್ನು ಮತ್ತು ಜಿಡಿಪಿ ತಲಾವಾರು ಮಾಡಲು ಸ್ವಾತಂತ್ರ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ವರದಿಯಲ್ಲಿ, ಸಂತೋಷದ ಸೂಚಕವಾಗಿ ಪರಿಗಣಿಸಲಾಗುತ್ತದೆ.
- ಆ ಸಮೀಕ್ಷೆಗಳಲ್ಲಿ, ಜನರು 1 ರಿಂದ 10 ರವರೆಗಿನ ಸ್ಕೋರ್ಗಳನ್ನು ನೀಡುತ್ತಾರೆ, ಏನಾದರೂ ತಪ್ಪಾದರೆ, ಅವರು ತಮ್ಮ ಸ್ವಂತ ಜೀವನ ಆಯ್ಕೆಗಳನ್ನು ಮಾಡಲು ತಮ್ಮ ಸ್ವಾತಂತ್ರ್ಯವನ್ನು, ತಮ್ಮ ಸಮಾಜವನ್ನು ಹೇಗೆ ಭ್ರಷ್ಟಗೊಳಿಸುತ್ತಿದ್ದಾರೆ ಮತ್ತು ಎಷ್ಟು ಉದಾರರಾಗಿದ್ದಾರೆ ಎಂಬುವುದರ ಬಗ್ಗೆ ಅವರು ಎಷ್ಟು ಸಾಮಾಜಿಕ ಬೆಂಬಲವನ್ನು ನೀಡುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿದೆ.
ನವೋಮಿ ಅಮೆರಿಕ ಜಡ್ಜ್
ಸುದ್ಧಿಯಲ್ಲಿ ಏಕಿದೆ ?ಭಾರತೀಯ ಮೂಲದ ನವೋಮಿ ಜಹಾಂಗೀರ್ ರಾವ್ ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್ನ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
- ಅಮೆರಿಕದ ಸುಪ್ರೀಂಕೋರ್ಟ್ ಗಿಂತ ಕೆಳಹಂತದಲ್ಲಿರುವ ಪ್ರಭಾವಿ ಸರ್ಕ್ಯುಟ್ ಕೋರ್ಟ್ನ ನ್ಯಾಯಾಧೀಶೆ ಸ್ಥಾನಕ್ಕೇರಿದ ಭಾರತೀಯ ಮೂಲದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.
- ಈ ಹಿಂದೆ ಒಬಾಮ ಅಧಿಕಾರದಲ್ಲಿದ್ದಾಗ ಭಾರತೀಯ ಮೂಲದ ಶ್ರೀನಿವಾಸನ್ ಈ ಸ್ಥಾನಕ್ಕೇರಿದ್ದರು.
- 45 ವರ್ಷದ ನವೋಮಿ ಶ್ವೇತಭವನದ ರೂಸ್ವೆಲ್ಟ್ ರೂಂನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಬೈಬಲ್ ಸಾಕ್ಷಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ವಿವಾದಿತ ನ್ಯಾಯಮೂರ್ತಿ ಬ್ರೆಟ್ ಕವನಾಗ್ ಸ್ಥಾನ ತುಂಬಲಿದ್ದಾರೆ.
ವಿಶ್ವ ಜಲ ದಿನ
ಸುದ್ಧಿಯಲ್ಲಿ ಏಕಿದೆ ?ಮಾರ್ಚ್ 22ರ ವಿಶ್ವ ಜಲ ದಿನದ ಅಂಗವಾಗಿ ಭೂಮಿಯ ಮೇಲ್ಮೈನಿಂದ ಕೆಳಗಿರುವ ಜಲದ ಸ್ಥಿತಿಗತಿ ವಿವರಣೆಯಿರುವ ವರದಿಯನ್ನು ಸಿದ್ಧ ಪಡಿಸಿದ್ದಾಗಿದೆ.
- ನೀರಿಗೆ ಕೊರತೆಯಿರುವ ಪ್ರದೇಶಗಳಲ್ಲಿ ಸುಮಾರು 100 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಇವರ ಪೈಕಿ 60 ಕೋಟಿ ಮಂದಿ ತೀವ್ರ ನೀರಿನ ಕೊರತೆಯಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗವಾಗಿದೆ.
- ಕಳೆದ ಕೆಲವು ವರ್ಷಗಳಿಂದ ವಿಶ್ವಾದ್ಯಂತ ಸುಮಾರು 400 ಕೋಟಿ ಮಂದಿ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಅಧಿಕಗೊಳ್ಳುವ ಸಂಭವವಿದೆ ಎಂದು ವರದಿ ತಿಳಿಸಿದೆ. ನೀರಿಗೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ವಸಿಸುತ್ತಿರುವವರ ಸಂಖ್ಯೆ 2050ಕ್ಕೆ 500 ಕೋಟಿ ಮೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳ, ನೀರಿನ ಮೂಲಗಳ ಮೇಲೆ ಹೆಚ್ಚಿ ಪ್ರಮಾಣದ ಹಿಡಿತ, ಹವಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಅಂತರ್ಜಲ ಬರ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
- 2040ರ ವೇಳೆಗೆ ವಿಶ್ವದ 33 ರಾಷ್ಟ್ರಗಳು ತೀವ್ರ ನೀರಿನ ಕೊರತೆ ಎದುರಿಸಲಿವೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ವಿಶ್ವ ಜಲ ದಿನ ೨೦೧೯: ಥೀಮ್ ಮತ್ತು ಪ್ರಾಮುಖ್ಯತೆ
- ಪ್ರಪಂಚದಾದ್ಯಂತ 22 ನೇ ಮಾರ್ಚ್ನಲ್ಲಿ ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಇದು ನೀರಿನ ಪ್ರಾಮುಖ್ಯತೆ ಮತ್ತು ಅದನ್ನು ಹೇಗೆ ಸಂರಕ್ಷಿಸುವುದು ಎಂಬುದರ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತದೆ.
- ನೀರು ಜೀವಕ್ಕೆ ಅಗತ್ಯವೆಂದು ನಾವು ತಿಳಿದಿರುವಂತೆ, ನೀರು ಇಲ್ಲದೆ ನಾವು ಬದುಕಲಾರವು. ಮಾನವ ವಯಸ್ಕ ದೇಹದ 60% ವರೆಗೆ ನೀರು ತುಂಬಿದೆ . ಎಲ್ಲಾ ಸಸ್ಯಗಳು ಮತ್ತು ಪ್ರಾಣಿಗಳು ಬದುಕಲು ನೀರಿನ ಅಗತ್ಯವಿದೆ. ನೀರು ಇಲ್ಲದಿದ್ದರೆ ಭೂಮಿಯಲ್ಲಿ ಯಾವುದೇ ಜೀವವಿಲ್ಲ.
ಥೀಮ್ ಏನು?
- ವಿಶ್ವ ವಾಟರ್ ಡೇ 2019 ರ ವಿಷಯವು ‘ಹಿಂದೆ ಉಳಿಯಲು ಯಾರನ್ನು ಬಿಡುವುದಿಲ್ಲ ‘. ಇದು 2030 ರ ಸುಸ್ಥಿರ ಅಭಿವೃದ್ಧಿಯ ಅಜೆಂಡಾದ ಕೇಂದ್ರ ವಾಗ್ದಾನವನ್ನು ರೂಪಾಂತರಿಸುವುದು: ಸುಸ್ಥಿರ ಅಭಿವೃದ್ಧಿ ಮುಂದುವರೆದಂತೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು.
ಅದು ನೀರಿಗೆ ಹೇಗೆ ಸಂಬಂಧಿಸಿದೆ?
- ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ 6 (ಎಸ್ಡಿಸಿ 6) 2030 ರ ಹೊತ್ತಿಗೆ ಎಲ್ಲರಿಗೂ ನೀರಿನ ಲಭ್ಯತೆ ಮತ್ತು ಸಮರ್ಥನೀಯ ನಿರ್ವಹಣೆಯನ್ನು ಖಾತ್ರಿಪಡಿಸುವ ಉದ್ದೇಶ ಹೊಂದಿದೆ. ವ್ಯಾಖ್ಯಾನದಂತೆ, ಇದರ ಅರ್ಥ ಯಾರೂ ಹಿಂದೆ ಹೋಗುವುದಿಲ್ಲ.
ಶಿಶುಗಳ ಜೀವ ಉಳಿಸುವ ಬ್ರೇಸ್ಲೆಟ್
ಸುದ್ಧಿಯಲ್ಲಿ ಏಕಿದೆ ?ಅಮೆರಿಕದ ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿರುವ ನರೇನ್ ‘ಬೆಂಪು’ ಹೆಸರಿನಲ್ಲಿ 8 ಗ್ರಾಂ ತೂಕದ ಬ್ರೇಸ್ಲೆಟ್ ಮಾದರಿಯ ಸಾಧನ ಅಭಿವೃದ್ಧಿಪಡಿಸಿದ್ದು ಇದು ದೂರದ ಪಪುವಾ ನ್ಯೂ ಗಿನಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಸಾವಿರಾರು ಕಂದಮ್ಮಗಳ ಜೀವ ಉಳಿಸುತ್ತಿದೆ.
- ಈ ಬ್ರೇಸ್ಲೆಟ್ ಹೆಪೋಥರ್ಮಿಯಾದಿಂದ ಬಳಲುತ್ತಿರುವ ಕಡಿಮೆ ತೂಕದ ನವಜಾತ ಶಿಶುಗಳ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
‘ಬೆಂಪು‘ ಬ್ರೇಸ್ಲೆಟ್ ಬಗ್ಗೆ
- ಅತಿಯಾದ ಶೀತ ವಾತಾವರಣದಲ್ಲಿ ನವಜಾತ ಶಿಶುಗಳ ದೇಹದಲ್ಲಿ ದಿಢೀರ್ ಕುಸಿತ ಉಂಟಾಗುವುದು ಸಾಮಾನ್ಯ. ಅದರಲ್ಲೂ ಕಡಿಮೆ ತೂಕದ ಕಂದಮ್ಮಗಳಲ್ಲಿ ಇದು ಹೆಚ್ಚು. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಹೈಪೋಥರ್ಮಿಯಾ ಎನ್ನಲಾಗುತ್ತದೆ.
- ಪಪುವಾ ನ್ಯೂ ಗಿನಿಯಾದಲ್ಲಿ ಕಡಿಮೆ ತೂಕದ ನವಜಾತ ಶಿಶುಗಳಲ್ಲಿ ಉಷ್ಣಾಂಶ ಕುಸಿಯುವುದು ಸಾಮಾನ್ಯವಾಗಿದ್ದು, ‘ಬೆಂಪು’ ಸಾಧನ ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಯೂನಿಸೆಫ್ ಸಂಸ್ಥೆ ತಿಳಿಸಿದೆ. ಇದುವರೆಗೂ 5 ಕೆ.ಜಿ.ಗೂ ಕಡಿಮೆ ತೂಕದ 1,300 ಶಿಶುಗಳ ಆರೈಕೆಯಲ್ಲಿ ಇದನ್ನು ಬಳಸಲಾಗಿದೆ
- ಬ್ರೇಸ್ಲೆಟ್ ರೀತಿಯ ಈ ಸಾಧನವನ್ನು ಕಂದಮ್ಮಗಳ ಕೈಗೆ ಕಟ್ಟಲಾಗುತ್ತದೆ. ಶಿಶುವಿನ ದೇಹದ ಉಷ್ಣಾಂಶ ಸರಾಸರಿ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಪ್ರಮಾಣಕ್ಕೆ ಕುಸಿದಾಗ ತಕ್ಷಣವೇ ಪುಟಾಣಿ ಲೈಟ್ ಕಿತ್ತಳೆ ವರ್ಣದೊಂದಿಗೆ ಬೆಳಗಿ ಅಲಾರಾಂನೊಂದಿಗೆ ಎಚ್ಚರಿಸುತ್ತದೆ. ತುರ್ತು ವೈದ್ಯಕೀಯ ಆರೈಕೆಗೆ ಇದು ನೆರವಾಗಲಿದೆ.