“25 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
2025ರ ವೇಳಗೆ ಭಾರತ ಕ್ಷಯರೋಗ ಮುಕ್ತ
ಸುದ್ಧಿಯಲ್ಲಿ ಏಕಿದೆ ?2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
- ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದಲ್ಲಿ 1 ಕೋಟಿ ಕ್ಷಯ ರೋಗಿಗಳಿದ್ದು, ಆ ಪೈಕಿ ಭಾರತದಲ್ಲೇ 27 ಲಕ್ಷ ಜನರಿದ್ದಾರೆ.
- ರಾಜ್ಯದಲ್ಲಿ ಆರೋಗ್ಯ ಇಲಾಖೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 2017ರಲ್ಲಿ 67 ಸಾವಿರ ಜನರಲ್ಲಿ ಟಿಬಿ ಪತ್ತೆ ಹಚ್ಚಲಾಗಿತ್ತು. ಶೇ.85 ಮಂದಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 2018ರಲ್ಲಿ 83,707 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದ್ದು, 12.21 ಕೋಟಿ ರೂ. ಖರ್ಚಿನಲ್ಲಿ ಶೇ.88 ಮಂದಿಗೆ ಚಿಕಿತ್ಸೆ ನೀಡಲಾಗಿದೆ.
- ರಾಜ್ಯದಲ್ಲಿ 284 ಕ್ಷಯರೋಗ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
- ವಿಶ್ವ ಆರೋಗ್ಯ ಸಂಸ್ಥೆ ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮಾ.24ಕ್ಕೆ ವಿಶ್ವ ಕ್ಷಯರೋಗ ದಿನ ಆಚರಿಸುತ್ತಿದೆ.
ರೋಗ ಲಕ್ಷಣಗಳು
- 2 ವಾರಕ್ಕಿಂತ ಅಧಿಕ ಸಮಯ ಕೆಮ್ಮು
- ಸಂಜೆಯಾದಂತೆ ಜ್ವರ ಹೆಚ್ಚಾಗುವುದು
- ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು
- ತೂಕ ಕಡಿಮೆಯಾಗುವುದು.
- ಹಸಿವೆ ಇಲ್ಲದಿರುವುದು
- ಸುಸ್ತು-ನಿರಾಸಕ್ತಿ ಉಂಟಾಗುವುದು
- ಹರಡಲಿದೆ ಸೋಂಕು
- ಕ್ಷಯ ರೋಗಾಣು ಗಾಳಿಯಲ್ಲಿ ಹರಡುತ್ತದೆ.
- ಟಿಬಿ ಲಕ್ಷಣಗಳು ಕಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಇರುತ್ತದೆ.
- ಶ್ವಾಸಕೋಶ, ಮಿದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕ ಆಗುತ್ತದೆ. ನಿರ್ದಿಷ್ಟ ಲಕ್ಷಣದ ಮೂಲಕ ಟಿಬಿ ಪತ್ತೆ ಮಾಡಬಹುದು. ಕಫ-ರಕ್ತ ಪರೀಕ್ಷೆ ಮತ್ತು ಎಕ್ಸ್ರೇ ಮೂಲಕ ರೋಗ ಪತ್ತೆ ಮಾಡಲು ಸಾಧ್ಯವಿದೆ.
ನಿಯಂತ್ರಣಕ್ಕೆ ಕ್ರಮಗಳು
- ಬೆಂಗಳೂರು, ಮಂಗಳೂರು, ಹುಣಸೂರು, ಬಳ್ಳಾರಿ, ಕಲಬುರಗಿ, ಧಾರವಾಡದಲ್ಲಿ ಡ್ರಗ್ರೆಸಿಸ್ಟಿವ್ ಟಿಬಿ ಸೆಂಟರ್ ಸ್ಥಾಪನೆ.
- ತಲಾ 5 ಲಕ್ಷ ಜನರಿಗೆ ಒಂದರಂತೆ 248 ಕ್ಷಯರೋಗ ಘಟಕ
- 699 ನಿಯೋಜಿತ ಸೂಕ್ಷ್ಮದರ್ಶಕ ಕೇಂದ್ರ ಸ್ಥಾಪನೆ, 65 ಜೀನ್ ಎಕ್ಸ್ಪರ್ಟ್ ಮಷಿನ್ಗಳ ಅಳವಡಿಕೆ
- ಕೇಂದ್ರ ಸರ್ಕಾರದಿಂದ ಟಿಬಿ ಪತ್ತೆಗಾಗಿ 45 ಮೆಡಿಕಲ್ ಮೊಬೈಲ್ ವ್ಯಾನ್.
ಮಾಸಿಕ –ಠಿ;500 ಗೌರವಧನ
- 15ರಿಂದ 45 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕ್ಷಯರೋಗ ಪತ್ತೆ ಆಗುತ್ತಿದೆ. ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
- ಟಿಬಿ ಇರುವುದು ವ್ಯಕ್ತಿಗೆ ದೃಢಪಟ್ಟಲ್ಲಿ ನಿಕ್ಷಯ್ ಪೋಷಣಾ ಯೋಜನೆಯಡಿ ಪೌಷ್ಠಿಕಾಂಶ ಕೊರತೆ ನೀಗಿಸಲು 500 ರೂ. ಸಹಾಯಧನ ನೀಡಲಾಗುತ್ತಿದೆ.
- ಚಿಕಿತ್ಸೆ ಪ್ರಾರಂಭಿಸಿದ ಅವಧಿಯಿಂದ ಚಿಕಿತ್ಸೆ ಮುಗಿಯುವ ತನಕ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.
- ಗುಡ್ಡಗಾಡು ಪ್ರದೇಶಗಳಲ್ಲಿ ಕ್ಷಯರೋಗಿಗಳಿಗೆ 750 ರೂ. ಪಾವತಿಸಲಾಗುತ್ತದೆ. ಕ್ಷಯ ರೋಗಿಯನ್ನು ಗುರುತಿಸಿದವರಿಗೂ ಸರ್ಕಾರ 500 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಡಿಎಸ್ಟಿಬಿ ಚಿಕಿತ್ಸೆ ಬಳಿಕ ಸಾವಿರ ರೂ. ಸಂದಾಯ ಆಗಲಿದೆ.
ಕ್ಯಾನ್ಸರ್ಪೀಡಿತರಿಗೆ ಕುಳಿತಲ್ಲೇ ಮಾರ್ಗದರ್ಶನ
ಸುದ್ಧಿಯಲ್ಲಿ ಏಕಿದೆ ?ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳು ಕ್ಯಾನ್ಸರ್ಗೆ ಸಂಬಂಧಿತ ಸಂದೇಹ-ಚಿಕಿತ್ಸೆ ಬಗ್ಗೆ ಕುಳಿತಲ್ಲೇ ದೇಶದ ತಜ್ಞ ವೈದ್ಯರಿಂದ ಅಗತ್ಯ ಮಾರ್ಗದರ್ಶನ ಪಡೆಯುವ ಕಾಲ ಸನ್ನಿಹಿತವಾಗಿದೆ.
- ಬಡ-ಮಧ್ಯಮ ವರ್ಗದ ರೋಗಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆ ಸಂಜೀವಿನಿಯಾಗಿದ್ದು, 5 ಲಕ್ಷ ರೂ. ವರೆಗೆ ಫಲಾನುಭವಿಗಳಿಗೆ ಚಿಕಿತ್ಸೆ ಸಿಗುತ್ತಿದೆ.
- ಆಸ್ಪತ್ರೆಗೆ ರೋಗಿಗಳ ಅಲೆದಾಟ ತಪ್ಪಿಸಲು ಈ ಯೋಜನೆಯಡಿ ಕಾರ್ಯಯೋಜನೆ ರೂಪಿಸಲಾಗಿದ್ದು, ದೇಶದ ತಜ್ಞ ಕ್ಯಾನ್ಸರ್ ವೈದ್ಯರಿಂದ ಸುಲಭವಾಗಿ ಆನ್ಲೈನ್ ಮೂಲಕ ಸೂಕ್ತ ಸಲಹೆ ಪಡೆಯಬಹುದು.
- ಈ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವರ್ಚುವಲ್ ಟ್ಯೂಮರ್ ಬೋರ್ಡ್ ನಡೆಸುವ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ ಜತೆ ಪಾಲುದಾರಿಕೆ ವಿಚಾರವಾಗಿ ಮಾತುಕತೆ ಆರಂಭಿಸಿದೆ.
- 400 ಕೋಟಿ ರೂ. ಮೀಸಲು: ಫಲಾನುಭವಿಗಳು ಕ್ಯಾನ್ಸರ್ ಬಗ್ಗೆ ತಜ್ಞ ವೈದ್ಯರಿಂದ ಅಗತ್ಯ ಸಲಹೆ ಪಡೆದು ಗುಣಮಟ್ಟದ ಚಿಕಿತ್ಸೆ ಪಡೆಯಬಹುದು.
- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ (ಪಿಎಂಜೆಎವೈ) ಶೇ.30 ತೃತೀಯ ಹಂತದ ಕ್ಯಾನ್ಸರ್ ಪ್ರಕರಣಗಳಿಗೆ ಈಗಾಗಲೇ ಚಿಕಿತ್ಸೆ ಒದಗಿಸಲಾಗಿದೆ. ಜತೆಗೆ ಕ್ಯಾನ್ಸರ್ ಕೇರ್ಗಾಗಿ ಕೇಂದ್ರ ಸರ್ಕಾರ 400 ಕೋಟಿ ರೂ. ಮೀಸಲಿಟ್ಟಿದೆ.
- ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ 1574 ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 438 ಆಸ್ಪತ್ರೆಗಳು ಬಹುಮಾದರಿ ಚಿಕಿತ್ಸೆ ಒದಗಿಸುತ್ತಿವೆ.
ಆಯುಷ್ಮಾನ್ ಭಾರತ್ ಯೋಜನೆ
- ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಐ) ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಅಥವಾ ಮೋದಿಕೇರ್ 2018 ರಲ್ಲಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ಪ್ರಾರಂಭಿಸಲ್ಪಡುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆ ವ್ಯವಸ್ಥೆಗಳಲ್ಲಿ ಮಧ್ಯಸ್ಥಿಕೆಗಳನ್ನು ಮಾಡುವಲ್ಲಿ ಈ ಯೋಜನೆಯು ಗುರಿಯನ್ನು ಹೊಂದಿದೆ, ಇದು ಆರೋಗ್ಯ ರಕ್ಷಣೆಗಾಗಿ ಆರೋಗ್ಯ ನಿಭಾಯಿಸುವ ಮತ್ತು ಉತ್ತೇಜಿಸುವುದನ್ನು ಒಳಗೊಂಡಿದೆ. ಇದು ಆರೋಗ್ಯ ಕೇಂದ್ರಗಳು ಮತ್ತು ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (NHPS) ಎಂಬ ಎರಡು ಪ್ರಮುಖ ಆರೋಗ್ಯ ಉಪಕ್ರಮಗಳ ಒಂದು ಬೃಹತ್ ಯೋಜನೆಯಾಗಿದೆ.
- ಆಯುಷ್ಮಾನ್ ಭಾರತ್ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ.
1.ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ
- ಅಯೋಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ, ಇದು ಸುಮಾರು 10 ಕೋಟಿ (ನೂರು ಮಿಲಿಯನ್) ಬಡ ಮತ್ತು ದುರ್ಬಲ ಕುಟುಂಬಗಳನ್ನು (ಸುಮಾರು 50 ಕೋಟಿ (ಐದು ನೂರು ಮಿಲಿಯನ್) ಫಲಾನುಭವಿಗಳಿಗೆ ಒಳಗೊಳ್ಳುತ್ತದೆ) ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ($ 7,100) ಮತ್ತು ತೃತೀಯ ಆರೈಕೆ ಆಸ್ಪತ್ರೆ ಖರ್ಚನ್ನು ನೀಡುತ್ತದೆ .
- ಯೋಜನೆಯ ಪ್ರಯೋಜನಗಳು ದೇಶಾದ್ಯಂತ ಪೋರ್ಟಬಲ್ ಆಗಿರುತ್ತವೆ ಮತ್ತು ಈ ಯೋಜನೆಗೆ ಒಳಪಡುವ ಫಲಾನುಭವಿಗೆ ದೇಶದಾದ್ಯಂತ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಎಂಪನೇಲ್ ಆಸ್ಪತ್ರೆಗಳಿಂದ ಹಣವಿಲ್ಲದ ಪ್ರಯೋಜನಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ.
- ಸಾಮಾಜಿಕ-ಆರ್ಥಿಕ ಜಾತಿ ಗಣತಿ ದತ್ತಸಂಚಯದಲ್ಲಿನ ಅಭಾವ ಮಾನದಂಡದ ಆಧಾರದ ಮೇಲೆ ಅರ್ಹತೆಯೊಂದಿಗೆ ಅರ್ಹತೆ ಆಧಾರಿತ ಯೋಜನೆಯನ್ನು ಇದು ನಿರ್ಧರಿಸುತ್ತದೆ. ಇದು 74 ಕೋಟಿ ಬಡ, ವಂಚಿತ ಗ್ರಾಮೀಣ ಕುಟುಂಬಗಳನ್ನು ಗುರಿಯಾಗೀಸಲಿದೆ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡ ಇತ್ತೀಚಿನ ಸಾಮಾಜಿಕ-ಆರ್ಥಿಕ ಜಾತಿ ಗಣತಿ (SECC) ಮಾಹಿತಿಯ ಪ್ರಕಾರ ಔದ್ಯೋಗಿಕ ವರ್ಗ ನಗರ ಕಾರ್ಮಿಕರ ಕುಟುಂಬಗಳನ್ನು ಗುರುತಿಸುತ್ತದೆ.
- ಆಯುಷ್ಮಾನ್ ಭಾರತ್ – ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಶನ್ನ ಪ್ರಮುಖ ತತ್ವಗಳೆಂದರೆ ಸಹಕಾರ ಫೆಡರಲಿಸಂ ಮತ್ತು ರಾಜ್ಯಗಳಿಗೆ ನಮ್ಯತೆ.
- ಕೇಂದ್ರ ಮತ್ತು ರಾಜ್ಯಗಳ ನಡುವೆ ನೀತಿ ನಿರ್ದೇಶನಗಳನ್ನು ಮತ್ತು ಸಮನ್ವಯವನ್ನು ಹೆಚ್ಚಿಸಲು, ಅಯುಷ್ಮಾನ್ ಭಾರತ್ ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಷನ್ ಕೌನ್ಸಿಲ್ (ಎಬಿ-ಎನ್ಹೆಚ್ಪಿಎಂಸಿ) ಯನ್ನು ತುರ್ತು ಮಟ್ಟದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನೇತೃತ್ವದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ರಾಜ್ಯವನ್ನು ರಾಜ್ಯ ಹೆಲ್ತ್ ಏಜೆನ್ಸಿ (SHA) ಯೋಜನೆಯನ್ನು ಜಾರಿಗೆ ತರಬೇಕು.
- ಬಹುತೇಕ ಎಲ್ಲಾ ದ್ವಿತೀಯ ಮತ್ತು ಅನೇಕ ತೃತೀಯ ಆಸ್ಪತ್ರೆಗಳನ್ನು ಒಳಗೊಂಡಿರುತ್ತದೆ. (ನಕಾರಾತ್ಮಕ ಪಟ್ಟಿ ಹೊರತುಪಡಿಸಿ)
2. ಸ್ವಾಸ್ಥ್ಯ ಕೇಂದ್ರಗಳು
- ಈ 5 ಲಕ್ಷ ಕೇಂದ್ರಗಳಲ್ಲಿ ಸಮಗ್ರ ಆರೋಗ್ಯ ಕಾಳಜಿಯನ್ನು ಒದಗಿಸಲು ಸಜ್ಜುಗೊಳಿಸಲಾಗುವುದು. ಇದರಲ್ಲಿ ಅಸಂಘಟಿತ ಕಾಯಿಲೆಗಳು ಮತ್ತು ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆಗಳೂ ಸೇರಿದಂತೆ, ಔಷಧಗಳು ಮತ್ತು ರೋಗನಿರ್ಣಯದ ಸೇವೆಗಳು. ಪ್ರಸ್ತುತ ಆರೋಗ್ಯ ಕೇಂದ್ರಗಳನ್ನು ಸರ್ಕಾರವು ಸ್ವಾಸ್ಥ್ಯ ಕೇಂದ್ರಗಳಿಗೆ ಅಪ್ಗ್ರೇಡ್ ಮಾಡುತ್ತದೆ. 2018 ರ ಆಗಸ್ಟ್ 15 ರಂದು ಕಲ್ಯಾಣ ಯೋಜನೆ ಹೊರಬಂದಿದೆ. ಈ ಕೇಂದ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಿಎಸ್ಆರ್ ಮತ್ತು ಲೋಕೋಪಕಾರಿ ಸಂಸ್ಥೆಗಳ ಮೂಲಕ ಖಾಸಗಿ ವಲಯಗಳ ಕೊಡುಗೆ ಸಹ ನಿರೀಕ್ಷಿತವಾಗಿದೆ. ಆರೋಗ್ಯ ಮತ್ತು ಆರೋಗ್ಯ ಕೇಂದ್ರದಲ್ಲಿ ಒದಗಿಸುವ ಸೇವೆಗಳ ಪಟ್ಟಿ:
- ಗರ್ಭಧಾರಣೆಯ ಆರೈಕೆ ಮತ್ತು ತಾಯಿಯ ಆರೋಗ್ಯ ಸೇವೆಗಳು
- ನಿಯೋನಾಟಲ್ ಮತ್ತು ಶಿಶು ಆರೋಗ್ಯ ಸೇವೆಗಳು
- ಮಕ್ಕಳ ಆರೋಗ್ಯ
- ದೀರ್ಘಕಾಲದ ಸಂವಹನ ರೋಗಗಳು
- ಸಂವಹನ ಮಾಡದ ರೋಗಗಳು
- ಮಾನಸಿಕ ಅಸ್ವಸ್ಥತೆಯ ನಿರ್ವಹಣೆ
- ಹಲ್ಲಿನ ಆರೈಕೆ
- ಜೆರಿಯಾಟ್ರಿಕ್ ಕೇರ್ ಎಮರ್ಜೆನ್ಸಿ ಮೆಡಿಸಿನ್
ಹೊಸ ವಾಹನಗಳಿಗೆ ಎಚ್ಎಸ್ಆರ್ಪಿ ಕಡ್ಡಾಯ
ಸುದ್ಧಿಯಲ್ಲಿ ಏಕಿದೆ ?ನಕಲಿ ನಂಬರ್ಪ್ಲೇಟ್ಗಳಿಗೆ ಕಡಿವಾಣ ಹಾಕಲು ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಯಾಗಲಿದೆ. ಏ.1ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ವಾಹನ ಉತ್ಪಾದಕರೇ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್ (ಎಚ್ಎಸ್ಆರ್ಪಿ) ಅಳವಡಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ತಿದ್ದುಪಡಿ ಏನು ?
- ಎಚ್ಎಸ್ಆರ್ಪಿ ಕಡ್ಡಾಯದ ಬಗ್ಗೆ 2018 ಡಿ.6ರಂದು ಅಧಿಸೂಚನೆ ಪ್ರಕಟಿಸಲಾಗಿದ್ದು, ಅದಕ್ಕೆ ಫೆ.25ರಂದು ಸಚಿವಾಲಯ ತಿದ್ದುಪಡಿ ತಂದಿದೆ. ಹಿಂದಿನ ಅಧಿಸೂಚನೆಯಲ್ಲಿದ್ದ ‘ಏ.1ರಿಂದ ಮಾರಾಟವಾಗುವ ವಾಹನ’ ಎಂಬ ವಾಕ್ಯದ ಬದಲಾಗಿ ‘ಏ.1ರಿಂದ ಉತ್ಪಾದನೆಯಾಗುವ ವಾಹನ’ ಎಂದು ತಿದ್ದುಪಡಿ ತರಲಾಗಿದೆ. ಹೀಗಾಗಿ ಮುಂಬರುವ ಒಂದೆರಡು ತಿಂಗಳ ಬಳಿಕ ಹೊಸ ಮಾದರಿ ನಂಬರ್ಪ್ಲೇಟ್ಗಳುಳ್ಳ ವಾಹನ ರಸ್ತೆಯಲ್ಲಿ ಕಾಣಬಹುದು.
ಸೂಚನೆಗಳೇನು?:
- ಅಧಿಸೂಚನೆ ಅನ್ವಯ 3ನೇ ರಿಜಿಸ್ಟ್ರೇಷನ್ ಮಾರ್ಕ್ ಸಹಿತ ವಾಹನದ ಮುಂಭಾಗ ಮತ್ತು ಹಿಂಭಾಗದ ಎಚ್ಎಸ್ಆರ್ಪಿಯನ್ನು ವಾಹನ ಉತ್ಪಾದಕರೇ ಡೀಲರ್ಗಳಿಗೆ ನೀಡಬೇಕು. ಡೀಲರ್ಗಳು ಮಾರಾಟದ ಸಂದರ್ಭ ಪ್ಲೇಟ್ಗಳಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ವಾಹನಗಳಿಗೆ ಅಳವಡಿಸಬೇಕು. ಇದಕ್ಕಾಗಿ ಪ್ರತ್ಯೇಕ ಶುಲ್ಕ ತೆಗೆದುಕೊಳ್ಳದೆ ಹೊಸ ವಾಹನ ದರದಲ್ಲೇ ಎಚ್ಎಸ್ಆರ್ಪಿ ಶುಲ್ಕವನ್ನೂ ಜೋಡಿಸಬೇಕು ಎಂದು ವಾಹನ ಉತ್ಪಾದಕರಿಗೆ ತಿಳಿಸಲಾಗಿದೆ.
- ಕಾಯ್ದೆ ಅನ್ವಯ ವಾಹನ ಉತ್ಪಾದಕರು ಅಥವಾ ಎಚ್ಎಸ್ಆರ್ಪಿ ತಯಾರಕರು ನವದೆಹಲಿಯ ಕೇಂದ್ರ ರಸ್ತೆ ಸಂಶೋಧನೆ ಸಂಸ್ಥೆ ಅಥವಾ ಕೇಂದ್ರ ಮೋಟಾರು ವಾಹನ ಕಾಯ್ದೆ 1989 ನಿಯಮ 126ರಡಿ ಅಧಿಕೃತವಾಗಿ ಗುರುತಿಸಲ್ಪಟ್ಟ ಪರೀಕ್ಷಾ ಕೇಂದ್ರಗಳಿಂದ ಎಚ್ಎಸ್ಆರ್ಪಿ ತಯಾರಿಕೆ ಪ್ರಮಾಣಪತ್ರ ಪಡೆಯಲೇಬೇಕು. ಹಳೇ ನಂಬರ್ಪ್ಲೇಟ್ಗಳನ್ನು ಡೀಲರ್ ವಶಕ್ಕೆ ಪಡೆದ ಬಳಿಕವಷ್ಟೇ ಹೊಸ ಎಚ್ಎಸ್ಆರ್ಪಿ ನೀಡಬೇಕು ಎಂದು ಸೂಚಿಸಲಾಗಿದೆ.
- ಸುಪ್ರೀಂಕೋರ್ಟ್ನಲ್ಲಿ ಅಧಿಸೂಚನೆ: ವಾಹನ ಉತ್ಪಾದಕರಿಗೆ ಎಚ್ಎಸ್ಆರ್ಪಿ ತಯಾರಿಕೆಗೆ ಅನುಮತಿ ನೀಡಿರುವ ಕುರಿತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. 2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಎಚ್ಎಸ್ಆರ್ಪಿ ತಯಾರಿಗೆ ಒಂದು ರಾಜ್ಯದಲ್ಲಿ ಒಂದು ಉತ್ಪಾದಕನಷ್ಟೇ ಇರಬೇಕು ಎಂದು ಸೂಚಿಸಲಾಗಿತ್ತು. ಆದರೆ 2018 ಡಿಸೆಂಬರ್ನಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ವಾಹನ ಉತ್ಪಾದಕರಿಗೆ ಎಚ್ಎಸ್ಆರ್ಪಿ ತಯಾರಿಕೆ ಅನುಮತಿ ನೀಡಲಾಗಿದೆ . ಈ ಕುರಿತು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ಕೋರ್ಟ್ ನೋಟಿಸ್ ನೀಡಿದೆ.
- ಹಳೇ ವಾಹನಕ್ಕೆ ಅನ್ವಯಿಸುವುದಿಲ್ಲ: ಅಧಿಸೂಚನೆ ಅನ್ವಯ ಹಳೇ ವಾಹನಗಳು ನಂಬರ್ಪ್ಲೇಟ್ ಬದಲಿಸುವ ಅಗತ್ಯವಿಲ್ಲ ರಾಜ್ಯದಲ್ಲಿ 2008ರಲ್ಲಿ ಎಚ್ಎಸ್ಆರ್ಪಿ ಅನುಷ್ಠಾನಕ್ಕೆ ಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು.
- ಹಳೇ ವಾಹನಕ್ಕೂ ಎಚ್ಎಸ್ಆರ್ಪಿ ಕಡ್ಡಾಯಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಇಲ್ಲಿಯವರೆಗೂ ಸಾರಿಗೆ ಇಲಾಖೆ ಆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಎಚ್ಎಸ್ಆರ್ಪಿ ವೈಶಿಷ್ಟ್ಯತೆ
- ಸುರಕ್ಷತಾ ಅಂಶಗಳಿರುವ ನಂಬರ್ಪ್ಲೇಟ್
- ಪ್ಲೇಟ್ ತೆಗೆಯಲು ಆಗದ ‘ಸ್ನಾ್ಯಪ್ ಲಾಕ್ ವ್ಯವಸ್ಥೆ’
- ಮಾರಾಟವಾದ ರಿಜಿಸ್ಟ್ರೇಷನ್ ಪ್ಲೇಟ್ ಬಗ್ಗೆ ಉತ್ಪಾದಕರು ದಾಖಲೆ ಹೊಂದುವುದು ಕಡ್ಡಾಯ
- ನಂಬರ್ಪ್ಲೇಟ್ನಲ್ಲಿ ಕನಿಷ್ಠ 10 ಸಂಖ್ಯೆಯ ಶಾಶ್ವತ ಗುರುತು ಸಂಖ್ಯೆ (ಲೇಸರ್ ಬ್ರಾ್ಯಂಡೆಡ್)
- ‘ಚಕ್ರ’ದ ಹೋಲೋಗ್ರಾಂ (ಪ್ರತಿಫಲಿಸುವ ಗುರುತು) ಹಾಗೂ ನೀಲಿ ಬಣ್ಣದಲ್ಲಿ ಇಂಡಿಯಾ ಎಂದು ಮುದ್ರೆ (ಹಾಟ್ ಸ್ಟಾ್ಯಂಪಿಂಗ್)
- ಡೀಸೆಲ್ ವಾಹನಕ್ಕೆ ಕಿತ್ತಳೆ, ಪೆಟ್ರೋಲ್-ಸಿಎನ್ಜಿಗೆ ನೀಲಿ ಹಾಗೂ ಇತರ ಇಂಧನದ ವಾಹನಗಳಿಗೆ ಬೂದು ಬಣ್ಣದ ಹೋಲೋಗ್ರಾಂ
- ನೋಂದಣಿ ಸಂಖ್ಯೆ ಮತ್ತು ಶಾಶ್ವತ ಸಂಖ್ಯೆ ಜೋಡಿಸಲಾಗುವುದು
- 15 ವರ್ಷ ಬಾಳಿಕೆ ಬರಲಿರುವ ನಂಬರ್ಪ್ಲೇಟ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಸುದ್ಧಿಯಲ್ಲಿ ಏಕಿದೆ ?ರೈತರಿಗೆ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2ನೇ ಕಂತನ್ನು ಕೇಂದ್ರ ಸರಕಾರವು ಮುಂದಿನ ತಿಂಗಳು ವಿತರಿಸಲಿದೆ. ಏಪ್ರಿಲ್ನಲ್ಲಿ ಸುಮಾರು 4.74 ಕೋಟಿ ಸಣ್ಣ ಮತ್ತು ಮಧ್ಯಮ ರೈತರಿಗೆ ಎರಡನೇ ಕಂತಿನಲ್ಲಿ ತಲಾ 2,000 ರೂ. ವಿತರಣೆಯಾಗಲಿದೆ.
ಪಿಎಂ-ಕಿಸಾನ್ ಸಮ್ಮಾನ್ ಯೋಜನೆ
- ಯೋಜನೆಗೆ ಫೆ.24ರಂದು ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, 1.01 ಕೋಟಿ ರೈತರಿಗೆ 2,021 ಕೋಟಿ ರೂ.ಗಳನ್ನು ವಿತರಿಸಲಾಗಿತ್ತು.
- ಮಧ್ಯಂತರ ಬಜೆಟ್ನಲ್ಲಿ 75,000 ಕೋಟಿ ರೂ.ಗಳ ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಕಟಿಸಲಾಗಿತ್ತು. ಎರಡು ಹೆಕ್ಟೇರ್ವರೆಗೆ ಜಮೀನು ಹೊಂದಿರುವ ದೇಶದ ಸಣ್ಣ ಮತ್ತು ಮಧ್ಯವರ್ಗದ 12 ಕೋಟಿ ರೈತರಿಗೆ ಈ ಯೋಜನೆ ತಲುಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.
- ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.
- ದೇಶದ 12 ಕೋಟಿ ರೈತರಿಗೆ ತಲಾ ವಾರ್ಷಿಕ 6,000 ರೂ. ನೀಡುವ ಗುರಿಯನ್ನು ಕೇಂದ್ರ ಹೊಂದಿದೆ.
- ಎರಡನೇ ಕಂತಲ್ಲಿ 74 ಕೋಟಿ ಫಲಾನುಭವಿಗಳನ್ನು ಗುರ್ತಿಸಲಾಗಿದ್ದು, ಎರಡನೇ ಕಂತು ವಿತರಣೆಯಾಗಲಿದೆ.
- ಉತ್ತರ ಪ್ರದೇಶದಲ್ಲಿ 1 ಕೋಟಿ ರೈತರು ನೋಂದಣಿ. ಹೆಚ್ಚುವರಿಯಾಗಿ 66 ಲಕ್ಷ ರೈತರ ಮಾಹಿತಿ ಸಂಗ್ರಹ.
- ಪಂಜಾಬ್ ಮತ್ತು ಹರಿಯಾಣಾದಲ್ಲಿ ಶೇ.80ರಷ್ಟು ಫಲಾನುಭವಿಗಳ ನೋಂದಣಿ.
- ಪಶ್ಚಿಮ ಬಂಗಾಳ, ದಿಲ್ಲಿ, ಸಿಕ್ಕಿಂ ರಾಜ್ಯಗಳು ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಿಲ್ಲ, ಹೀಗಾಗಿ ಹಣ ವರ್ಗಾವಣೆಯಾಗಿಲ್ಲ.
- ಕರ್ನಾಟಕದಲ್ಲೂ ಆಮೆಗತಿಯಲ್ಲಿ ನೋಂದಣಿ ಪ್ರಕ್ರಿಯೆ.