“11 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರ್ನಾಟಕ ಹೈಕೋರ್ಟ್ ಸಿಜೆ
ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿದೆ.
- ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಕೊಲಿಜಿಯಂ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ
- ಸಿಜೆ ಸ್ಥಾನಕ್ಕೆ ಬಾಂಬೆ ಹೈಕೋರ್ಟ್ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಆಗಿರುವ ಎ.ಎಸ್.ಓಕಾ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಕೇಂದ್ರದ ಕಾನೂನು ಸಚಿವಾಲಯ ರಾಷ್ಟ್ರಪತಿ ಭವನಕ್ಕೆ ಕಡತ ಕಳುಹಿಸಲಿದ್ದು, ರಾಷ್ಟ್ರಪತಿಗಳು ಅಧಿಕೃತ ನೇಮಕ ಆದೇಶ ಹೊರಡಿಸುವರು.
- ಎಸ್.ಓಕಾ 1960 ಮೇ 25ರಂದು ಜನಿಸಿದ್ದು, ಬಾಂಬೆ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಹಾಗೂ ಎಲ್ ಎಲ್ ಎಂ ಪಡೆದಿದ್ದಾರೆ. 1983ರಲ್ಲಿ ವಕೀಲಿಕೆ ಆರಂಭಿಸಿದ ಅವರು, ತಮ್ಮ ತಂದೆ ಶ್ರೀನಿವಾಸ ಓಕಾ ಬಳಿ ಕಿರಿಯ ವಕೀಲರಾಗಿ ಸೇವೆ ಆರಂಭಿಸಿದರು. ನಂತರ ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿದ್ದ ವಿ.ಟಿ.ಟಿಪ್ನಿಸ್ ಅವರ ಚೇಂಬರ್ ಸೇರಿ ವಕೀಲಿಕೆ ಮಾಡುತ್ತಿದ್ದರು. ಹಲವು ಮಹತ್ವದ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಾದ ಮಂಡಿಸಿ ಪಾಂಡಿತ್ಯ ಪಡೆದಿದ್ದ ಇವರನ್ನು 2003ರಲ್ಲಿ ಬಾಂಬೆ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ನಂತರ 2005ರಲ್ಲಿ ಅವರ ಸೇವೆ ಕಾಯಂ ಆಗಿತ್ತು.
ಹೈಕೋರ್ಟ್ಗಳ ನ್ಯಾಯಾಧೀಶರ ನೇಮಕ
- ಭಾರತದ ಹೈಕೋರ್ಟ್ಗಳ ನ್ಯಾಯಾಧೀಶರನ್ನು ನೇಮಕ ಮಾಡುವ ಪ್ರಕ್ರಿಯೆಯು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕದಿಂದ ಸ್ವಲ್ಪ ಭಿನ್ನವಾಗಿದೆ. ಲೇಖನ 217 ರ ಪ್ರಕಾರ, ರಾಜ್ಯದ ಮುಖ್ಯ ನ್ಯಾಯಾಧೀಶರನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ರಾಜ್ಯಪಾಲರ ಜೊತೆ ಸಮಾಲೋಚಿಸಿ ಅಧ್ಯಕ್ಷರಿಂದ ನೇಮಕ ಮಾಡಲಾಗುತ್ತದೆ. ನ್ಯಾಯಾಧೀಶರ ನೇಮಕಾತಿಗಾಗಿ ಸಿಜೆಐ ನೇತೃತ್ವದ ಕೊಲ್ಜಿಯಂ ಸರ್ಕಾರಕ್ಕೆ ಶಿಫಾರಸು ಮಾಡುವ ವ್ಯವಸ್ಥೆಯು ವಿಕಸನಗೊಂಡಿತು.
- ಕೋಲೆಜಿಯಮ್ ಕಾನೂನು ಸಚಿವಾಲಯಕ್ಕೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ ಮತ್ತು ಕಾಗದವನ್ನು ಪರಿಶೀಲನೆ ಮಾಡಿದ ನಂತರ ಅದನ್ನು ಅಧ್ಯಕ್ಷರಿಗೆ ಶಿಫಾರಸು ಮಾಡುತ್ತದೆ. ಅಧ್ಯಕ್ಷರು ಹೆಸರುಗಳನ್ನು ಅನುಮೋದಿಸುತ್ತಾರೆ ಅಥವಾ ಸುಪ್ರೀಂ ಕೋರ್ಟ್ನ ಮರುಪರಿಶೀಲನೆಗಾಗಿ ಹೆಸರುಗಳನ್ನು ಹಿಂದಿರುಗಿಸುತ್ತಾರೆ. ಸುಪ್ರೀಂ ಕೋರ್ಟ್ ಸಹ ಅದೇ ಹೆಸರನ್ನು ಕಳುಹಿಸಿದರೆ ,ಶಿಫಾರಸು ಮಾಡಿದ ವ್ಯಕ್ತಿಗಳನ್ನು ಅಧ್ಯಕ್ಷರು ನೇಮಕ ಮಾಡುತ್ತಾರೆ
ಹೈಕೋರ್ಟ್ ನ್ಯಾಯಾಧೀಶರಾಗಲು ಅರ್ಹತೆ
- ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ವ್ಯಕ್ತಿಯು ಭಾರತದ ನಾಗರಿಕನಾಗಿರಬೇಕು. ಇದಲ್ಲದೆ, ಅವರು ಹತ್ತು ವರ್ಷಗಳ ಕಾಲ ಭಾರತದಲ್ಲಿ ನ್ಯಾಯಾಂಗ ಕಚೇರಿಯನ್ನು ಹೊಂದಿರಬೇಕು ಅಥವಾ ಹತ್ತು ವರ್ಷಗಳ ಕಾಲ ಹೈಕೋರ್ಟ್ನ ವಕೀಲರಾಗಿರಬೇಕು .
- ಹೈಕೋರ್ಟ್ ನ್ಯಾಯಾಧೀಶರಿಗೆ ಕನಿಷ್ಠ ವಯಸ್ಸಿನ ಮಿತಿಯಿಲ್ಲ ಮತ್ತು ಸುಪ್ರೀಂ ಕೋರ್ಟ್ಗಿಂತ ಭಿನ್ನವಾಗಿ, ವಿಶೇಷ ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವುದಕ್ಕೆ ಯಾವುದೇ ನಿಬಂಧನೆ ಇಲ್ಲ.
ಸರ್ಟಿಫಿಕೇಟ್ ಆಫ್ ಆನರ್ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಸರಕಾರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಡೀಮ್ಡ್ ವಿಶ್ವವಿದ್ಯಾಲಯ ವತಿಯಿಂದ ”ಶಾಸ್ತ್ರೀಯ ಕನ್ನಡ ವಾಜ್ಞ್ಮಯದಲ್ಲಿ ನೈಪುಣ್ಯತೆ ಮತ್ತು ಪಾಂಡಿತ್ಯಕ್ಕಾಗಿ” ಕನ್ನಡದ ಡಾ. ಷ. ಶೆಟ್ಟರ್ (2016), ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ (2017), ಡಾ. ಎಂ. ಚಿದಾನಂದಮೂರ್ತಿ (2018) ಅವರಿಗೆ ‘ಸರ್ಟಿಫಿಕೇಟ್ ಆಫ್ ಆನರ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
- ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು.
- ಸಂಸ್ಕೃತ, ಅರೆಬಿಕ್, ಪರ್ಷಿಯನ್ ಮತ್ತು ಭಾರತೀಯ ಶಾಸ್ತ್ರೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಒಡಿಯಾ, ಮಲೆಯಾಳಂ ಭಾಷೆಗಳಿಗೆ ಗಣನೀಯ ಕೊಡುಗೆ ನೀಡಿರುವ ವಿದ್ವಾಂಸರನ್ನು ಗೌರವಿಸಲು ‘ಸರ್ಟಿಫಿಕೇಟ್ ಆಫ್ ಆನರ್ ಪ್ರಶಸ್ತಿ’ಯನ್ನು ಪ್ರತಿ ವರ್ಷ ನೀಡಲಾಗುವುದು.
- ಈ ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಕಾಮನ್ ಮೊಬಿಲಿಟಿ ಕಾರ್ಡ್
ಸುದ್ಧಿಯಲ್ಲಿ ಏಕಿದೆ ?‘ನಮ್ಮ ಮೆಟ್ರೊ’ ದಲ್ಲಿ ಪ್ರಯಾಣಿಕ ಸ್ನೇಹಿಯಲ್ಲದ ಸ್ಮಾರ್ಟ್ಕಾರ್ಡ್ ಇನ್ನು ಎರಡು ವರ್ಷಗಳೊಳಗೆ ಮೂಲೆ ಸೇರುವ ಸಾಧ್ಯತೆ ಇದೆ. ಏಕೆಂದರೆ ಸ್ಮಾರ್ಟ್ಕಾರ್ಡ್ ಜಾಗದಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬರಲಿದೆ.
- ‘ಒನ್ ನೇಷನ್ ಒನ್ ಕಾರ್ಡ್‘ ಘೋಷಣೆಯೊಂದಿಗೆ ಕೇಂದ್ರ ಸರಕಾರ ಎನ್ಸಿಎಂಸಿ ಕಾರ್ಡ್ ಬಿಡುಗಡೆಗೊಳಿಸಿದ್ದು, ಹೊಸದಿಲ್ಲಿಯಲ್ಲಿ ಮೆಟ್ರೊ, ಬಸ್ಗಳಲ್ಲಿ ಪ್ರಾಯೋಗಿಕವಾಗಿ ಬಳಕೆ ಆರಂಭವಾಗಿದೆ.
- ನಗರದಲ್ಲಿ ಬಿಎಂಆರ್ಸಿಎಲ್ ಹಾಗೂ ಬಿಎಂಟಿಸಿ ಜಂಟಿಯಾಗಿ ಈ ಕಾರ್ಡ್ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಎರಡೂ ಸಂಸ್ಥೆಗಳು ಅಳವಡಿಸಿಕೊಂಡಿಲ್ಲ. ಈಗ ಎನ್ಸಿಎಂಸಿ ಕಾರ್ಡ್ ಬಳಕೆಗೆ ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
- ಮೆಟ್ರೊದ ಪ್ರವೇಶದ್ವಾರದ ಎಎಫ್ಸಿ ಗೇಟ್ನಲ್ಲಿ (ಆಟೊಮೆಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್) ಕಾರ್ಡ್ ಬಳಸಲು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಮೆಟ್ರೊ 2 ನೇ ಹಂತದ ಯೋಜನೆಯಲ್ಲಿ ಎಲ್ಲ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಬರಲಿದೆ. ನಂತರ ಒಂದನೇ ಹಂತದಲ್ಲೂ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ.
ಒನ್ ನೇಷನ್, ಒನ್ ಕಾರ್ಡ್
- ಮಾರ್ಚ್ 4, 2019 ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಅಹಮದಾಬಾದ್ನಿಂದ ‘ಒನ್ ನೇಷನ್, ಒನ್ ಕಾರ್ಡ್’ ಮಾದರಿಯನ್ನು ಬಿಡುಗಡೆ ಮಾಡಿದರು.
- ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ) ಅನ್ನು ಪರಿಚಯಿಸಿದೆ. ಚಿಲ್ಲರೆ ಶಾಪಿಂಗ್ ಮತ್ತು ಖರೀದಿಗಳ ಜೊತೆಗೆ ದೇಶದ ವಿವಿಧ ಮೆಟ್ರೋಗಳು ಮತ್ತು ಇತರ ಸಾರಿಗೆ ವ್ಯವಸ್ಥೆಗಳಿಂದ ತಡೆರಹಿತ ಪ್ರಯಾಣವನ್ನು ಶಕ್ತಗೊಳಿಸುತ್ತದೆ.
ಸಾರಿಗೆ ಚಲನಶೀಲತೆಗಾಗಿ ಭಾರತದ ಮೊಟ್ಟಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ಪರಿಸರ ವ್ಯವಸ್ಥೆಯು ಈ ಕೆಳಕಂಡಂತಿದೆ:
- ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ)
- ಸ್ವಚಲಿತ್ ಕಿರಾಯಾ: ಸ್ವಯಂಚಾಲಿತ ದರ ಸಂಗ್ರಹ ವ್ಯವಸ್ಥೆ (ಸ್ವೀಕಾರ್)
- ಎನ್ಸಿಎಂಸಿ ಮಾನದಂಡಗಳನ್ನು ಆಧರಿಸಿ ಸ್ವಾಚಾಲಿತ್ ಗೇಟ್ (ಸ್ವಾಗತ್ )
- ‘ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್’ (ಎನ್ಸಿಎಂಸಿ), ಒನ್ ನೇಷನ್ ಒನ್ ಕಾರ್ಡ್ ಮಾದರಿಯನ್ನು ಆಧರಿಸಿದ ಸ್ಥಳೀಯ ಸ್ವಯಂಚಾಲಿತ ಶುಲ್ಕ ಸಂಗ್ರಹಣಾ ವ್ಯವಸ್ಥೆಯಾಗಿದೆ, ಇದು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿ ಹೊಂದಿದ ಪಾವತಿ ವೇದಿಕೆಯಾಗಿದೆ.
- ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಪ್ಲಾಟ್ಫಾರ್ಮ್ಗಳ ಆಧಾರದ ಮೇಲೆ ಬ್ಯಾಂಕ್ಗಳು ಕಾರ್ಡ್ಗಳನ್ನು ಬಿಡುಗಡೆ ಮಾಡುತ್ತವೆ
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ನ ಹಿಂದಿನ ಏಜೆನ್ಸಿಗಳು
- ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ), ಅಡ್ವಾನ್ಸ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (ಸಿ-ಡಿಎಸಿ), ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ಮತ್ತು ಹಣಕಾಸು ಸಚಿವಾಲಯದಿಂದ ಪ್ರತಿನಿಧಿಗಳು ಎನ್ಸಿಎಂಸಿ ಸಮಿತಿಯನ್ನು ರಚಿಸಿದ್ದಾರೆ.
- ಸಮಿತಿಯು ಎನ್ಎಂಎಂಸಿಯಂತೆ ಇಎಂವಿ ಆಧಾರಿತ ಓಪನ್ ಲೂಪ್ ಕಾರ್ಡ್ ಅನ್ನು ಸಂಗ್ರಹಿಸಿದ ಮೌಲ್ಯದೊಂದಿಗೆ ಶಿಫಾರಸು ಮಾಡಿದೆ.
- ಎನ್ಸಿಎಂಸಿ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಕಾರ್ಡ್ಗಾಗಿ ವಿಶೇಷಣಗಳನ್ನು ಅಭಿವೃದ್ಧಿಪಡಿಸಲು ಎನ್ಪಿಸಿಐಗೆ ಆದೇಶ ನೀಡಲಾಯಿತು.
- ಬ್ಯಾಂಕ್ ಸರ್ವರ್ನೊಂದಿಗಿನ ಇಂಟರ್ಫೇಸ್ ಸೇರಿದಂತೆ ಎಎಫ್ಸಿ ಸಿಸ್ಟಮ್ಗಾಗಿ ಸಿ-ಡಿಎಸಿ ಅಂತಿಮ ಎನ್ಸಿಎಂಸಿ ಸ್ಪೆಸಿಫಿಕೇಷನ್. ಈ ಚಟುವಟಿಕೆಯನ್ನು ಪೂರ್ಣಗೊಳಿಸಲು ಸಿಡಿಎಸಿ ಎನ್ಪಿಸಿಐ ಸಹಯೋಗದೊಂದಿಗೆ ಕೆಲಸ ಮಾಡಿದೆ.
- ಗೇಟ್ಸ್ ಮತ್ತು ರೀಡರ್ಗಳನ್ನು ತಯಾರಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅನ್ನು ಅಳವಡಿಸಲಾಯಿತು. ಇದು ಭಾರತೀಯ ಕಂಪೆನಿಯಿಂದ ತಯಾರಿಸಲ್ಪಟ್ಟ ಮೊದಲ ಗೇಟ್ ಮತ್ತು ರೀಡರ್ ಆಗಿದೆ.
ಡಿಜಿಟಲ್ ಇಂಡಿಯಾ
ಸುದ್ಧಿಯಲ್ಲಿ ಏಕಿದೆ ? ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಭಾರತಕ್ಕೆ ಪ್ರಯೋಜನವಾಗಿದ್ದು, ಮುಖ್ಯವಾಗಿ ಸಾಮಾಜಿಕ ಯೋಜನೆಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ನ ಇತ್ತೀಚಿನ ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.
- ”ಭಾರತದಲ್ಲಿ ಸರಕು ಮತ್ತು ಸೇವೆಗಳ ವಲಯದ ಇ-ಪ್ರೊಕ್ಯೂರ್ಮೆಂಟ್ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಸುಧಾರಿಸಿದೆ.
- ಗುಣಮಟ್ಟ ವೃದ್ಧಿಸುತ್ತಿದೆ ಹಾಗೂ ಭ್ರಷ್ಟಾಚಾರದ ಸಾಧ್ಯತೆಗಳು ಕಡಿಮೆಯಾಗುತ್ತಿವೆ ” ಎಂದು ಐಎಂಎಫ್ ವರದಿ ಹೇಳಿದೆ. ವಿಶ್ವಬ್ಯಾಂಕ್ ಜತೆಗಿನ ವಾರ್ಷಿಕ ಸಭೆಗೆ ಪೂರ್ವಭಾವಿಯಾಗಿ ಬಿಡುಗಡೆಗೊಳಿಸಿರುವ ವರದಿಯಿದು.
- ”ಉದಾಹರಣೆಗೆ ಭಾರತದಲ್ಲಿ ಸಾಮಾಜಿಕ ಮೂಲ ಸೌಕರ್ಯ ಯೋಜನೆಗಳಲ್ಲಿ ಡಿಜಿಟಲೀಕರಣದಿಂದ, ಯೋಜನೆಗೆ ತಗಲುತ್ತಿದ್ದ ವೆಚ್ಚದಲ್ಲಿ ಶೇ.17 ಇಳಿಕೆಯಾಗಿದೆ. ಇದೇ ವೇಳೆ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದು ಸೋರಿಕೆಗೆ ಬ್ರೇಕ್ ಬಿದ್ದಿರುವುದನ್ನು ಬಿಂಬಿಸಿದೆ
ಐಎಂಎಫ್ ಗಮನ ಸೆಳೆದ ಭಾರತದ ಡಿಜಿಟಲ್ ಯೋಜನೆ!
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ 2016ರಲ್ಲಿ ಸರಕಾರಿ ಇ-ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಾನಾ ಸರಕಾರಿ ಇಲಾಖೆಗಳು, ಸಚಿವಾಲಯಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಪಿಎಸ್ಯುಗಳಿಗೆ ಬೇಕಾಗುವ ಸರಕು ಮತ್ತು ಸೇವೆಗಳನ್ನು ಖರೀದಿಸಲು ಆನ್ಲೈನ್ ವ್ಯವಸ್ಥೆಯನ್ನು ಸಜ್ಜುಗೊಳಿಸಿತ್ತು. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಇದೀಗ ಐಎಂಎಫ್ನ ಮೆಚ್ಚುಗೆಗೆ ಪಾತ್ರವಾಗಿದೆ.
- ಕೇಂದ್ರ ಮತ್ತು ರಾಜ್ಯ ಮಟ್ಟದ ಸಾರ್ವಜನಿಕ ಉದ್ದಿಮೆಗೂ ಇದು ಸಹಕಾರಿಯಾಗಿದೆ.
- ಭಾರತ ತನ್ನ ಜಿಡಿಪಿಯ ಶೇ.20ರಷ್ಟು ಮೊತ್ತವನ್ನು ಸಾರ್ವಜನಿಕ ಖರೀದಿಗೆ (ಪ್ರೊಕ್ಯೂರ್ಮೆಂಟ್) ಬಳಸುತ್ತದೆ.
- ಈ ಬಿಸಿನೆಸ್ ಟು ಗವರ್ನಮೆಂಟ್ (ಬಿ2ಜಿ) ಯೋಜನೆಯಿಂದ ಹಲವು ಸ್ತರಗಳ ಮಾನ್ಯುವಲ್ ಪರಿಶಿಲನೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ರ¨್ದದ್ದವು. ಇದರಿಂದ ಸರಕಾರದ ಖರೀದಿ ಪ್ರಕ್ರಿಯೆಗಳಲ್ಲಿ ಗಣನೀಯ ದಕ್ಷತೆ ವೃದ್ಧಿಸಿತ್ತು. ಮಧ್ಯವತಿಗಳ ಹಾವಳಿ ತಪ್ಪಿತ್ತು.
- ಭಾರತದಲ್ಲಿ 2005ರಿಂದ ಸಾಮಾಜಿಕ ಆಡಿಟ್ ನಡೆಯುತ್ತಿದೆ. ಬೃಹತ್ ಉದ್ಯೋಗ ಖಾತರಿ ಯೋಜನೆಗಳ ಮೇಲೆ ಇದು ನಿಗಾ ವಹಿಸುತ್ತಿದೆ. ಭ್ರಷ್ಟಾಚಾರ ಕಡಿಮೆಯಾಗುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ ಎಂದಿದೆ.
ಡಿಜಿಟಲ್ ಇಂಡಿಯಾ
- ಆನ್ಲೈನ್ ಮೂಲಸೌಕರ್ಯ ಸುಧಾರಣೆ ಮತ್ತು ವಿದ್ಯುನ್ಮಾನ ಸಂಪರ್ಕವನ್ನು ಹೆಚ್ಚಿಸುವ ಮೂಲಕ ವಿದ್ಯುನ್ಮಾನವಾಗಿ ನಾಗರಿಕರಿಗೆ ಲಭ್ಯವಿರುವ ಸರ್ಕಾರಿ ಸೇವೆಗಳನ್ನು ಮಾಡಲು ಭಾರತೀಯ ಸರ್ಕಾರವು ಡಿಜಿಟಲ್ ಇಂಡಿಯಾ ಪ್ರಚಾರವನ್ನು ಪ್ರಾರಂಭಿಸಿತು.
- ಇದು ತಂತ್ರಜ್ಞಾನದ ಡೊಮೇನ್ನಲ್ಲಿ ದೇಶವನ್ನು ಡಿಜಿಟಲ್ವಾಗಿ ಬಲಪಡಿಸುವ ಗುರಿ ಹೊಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜುಲೈ 1, 2015 ರಂದು ಕಾರ್ಯಾಚರಣೆಯನ್ನು ಆರಂಭಿಸಿದರು.
- ಈ ಉಪಕ್ರಮವು ದೇಶದ ಗ್ರಾಮೀಣ ಪ್ರದೇಶಗಳನ್ನು ಹೈಸ್ಪೀಡ್ ಅಂತರ್ಜಾಲ ಜಾಲಗಳೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಒಳಗೊಂಡಿದೆ.
- ಡಿಜಿಟಲ್ ಇಂಡಿಯಾ ಉಪಕ್ರಮಕ್ಕೆ ಮೂರು ಪ್ರಮುಖ ಅಂಶಗಳಿವೆ. ಅವುಗಳು: ಡಿಜಿಟಲ್ ಮೂಲಭೂತ ರಚನೆ; ಸೇವೆಗಳ ಡಿಜಿಟಲ್ ವಿತರಣೆ; ಮತ್ತು ಡಿಜಿಟಲ್ ಸಾಕ್ಷರತೆ.
IMF
- ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಥವಾ ಐಎಮ್ಎಫ್ ವಾಷಿಂಗ್ಟನ್, ಡಿ.ಸಿ.ಯಲ್ಲಿ ಅದರ ಪ್ರಧಾನ ಕಾರ್ಯಾಲಯವನ್ನು ಅಂತಾರಾಷ್ಟ್ರೀಯ ಹಣಕಾಸು ಸಹಕಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ವ್ಯಾಪಾರವನ್ನು ಸಕ್ರಿಯಗೊಳಿಸಲು, ಆರ್ಥಿಕ ಸ್ಥಿರತೆಯನ್ನು ಸಾಧಿಸಲು, ಹೆಚ್ಚಿನ ಉದ್ಯೋಗಾವಕಾಶವನ್ನು ಉತ್ತೇಜಿಸುತ್ತದೆ, ವಿಶ್ವದಲ್ಲೇ ಬಡತನವನ್ನು ಕಡಿಮೆ ಮಾಡುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಜಾಗತಿಕ ಸಂಸ್ಥೆಯಾಗಿದೆ.
- 1944 ರಲ್ಲಿ ಬ್ರೆಟ್ಟನ್ ವುಡ್ಸ್ ಸಮ್ಮೇಳನದಲ್ಲಿ ಐಎಮ್ಎಫ್ ರಚನೆಯಾಯಿತು ಮತ್ತು ಇದು ಒಂದು ವರ್ಷದ ನಂತರ ಔಪಚಾರಿಕವಾಗಿ ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ, ಜಾಗತಿಕ ಪಾವತಿ ವ್ಯವಸ್ಥೆಯನ್ನು ಮರುಪಡೆದುಕೊಳ್ಳುವ ಗುರಿಯೊಂದಿಗೆ 29 ದೇಶಗಳು ಇದ್ದವು.
- ಇಂದು ಸಂಸ್ಥೆಯು 189 ಸದಸ್ಯರನ್ನು ಹೊಂದಿದೆ.
- ಬೃಹತ್ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಮತ್ತು ಬಡತನವನ್ನು ಮೀರಿಸುವುದರಲ್ಲಿ ಸಹಾಯ ಮಾಡಲು ಐಎಮ್ಎಫ್ ತನ್ನ ಸದಸ್ಯರಿಗೆ ನೀತಿ ಸಲಹೆ ಮತ್ತು ಹಣಕಾಸು ಒದಗಿಸುತ್ತಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ. ಇದಕ್ಕಾಗಿ ತರ್ಕ ಖಾಸಗಿ ಜಾಗತಿಕ ಬಂಡವಾಳ ಮಾರುಕಟ್ಟೆಗಳು ಅಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅನೇಕ ರಾಷ್ಟ್ರಗಳಿಗೆ ಹಣಕಾಸು ಮಾರುಕಟ್ಟೆಗಳಿಗೆ ಸಾಕಷ್ಟು ಪ್ರವೇಶವಿಲ್ಲ.
ಪಬ್ಲಿಕೇಷನ್ಸ್
- ವಿಶ್ವ ಆರ್ಥಿಕ ದೃಷ್ಟಿಕೋನ
- ಜಾಗತಿಕ ಹಣಕಾಸು ಸ್ಥಿರತೆ ವರದಿ
- ಹಣಕಾಸಿನ ಮಾನಿಟರ್
- ಪ್ರಾದೇಶಿಕ ಆರ್ಥಿಕ ಭವಿಷ್ಯ ಮತ್ತು ಹಣಕಾಸು ಮತ್ತು ಅಭಿವೃದ್ಧಿ
‘ಕಪ್ಪುಕುಳಿ’ ಮೊದಲ ಚಿತ್ರ ಬಿಡುಗಡೆ
ಸುದ್ಧಿಯಲ್ಲಿ ಏಕಿದೆ ?ಬಾಹ್ಯಾಕಾಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೈತ್ಯಾಕಾರದ ಕಪ್ಪುಕುಳಿಯ ಚಿತ್ರವನ್ನು ಖಗೋಳಶಾಸ್ತ್ರಜ್ಞರು ಬಿಡುಗಡೆ ಮಾಡಿದ್ದಾರೆ.
- ಭೂಮಿಯಿಂದ ಲಕ್ಷಾಂತರ ಕೋಟಿ ಕಿ.ಮೀ ದೂರದಲ್ಲಿರುವ, ‘ಎಂ87′ ಹೆಸರಿನ ನಕ್ಷತ್ರ ಪುಂಜದಲ್ಲಿ ಈ ದೈತ್ಯ ಗಾತ್ರದ ಕಪ್ಪುಕುಳಿ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ದೊರೆತಿದೆ.
- ವಿಶ್ವಾದ ಹಲವು ಭಾಗಗಳಲ್ಲಿ ಸ್ಥಾಪಿಸಲಾಗಿರುವ ಒಟ್ಟು 8 ಟೆಲಿಸ್ಕೋಪ್ಗಳನ್ನು ಒಟ್ಟಿಗೆ ಬಳಸಿ ಇದುವರೆಗೂ ಚಿದಂಬರ ರಹಸ್ಯವಾಗಿ ಉಳಿದಿದ್ದ ಮತ್ತು ಕೇವಲ ಕಾಲ್ಪನಿಕ ಚಿತ್ರಗಳಿಗಷ್ಟೇ ಸೀಮಿತವಾಗಿದ್ದ ಕಪ್ಪುಕುಳಿಯನ್ನು ನೈಜವಾಗಿ ಸೆರೆ ಹಿಡಿಯಲಾಗಿದೆ. ಬಾಹ್ಯಾಕಾಶ ವಿಜ್ಞಾನ ನಿಯತಕಾಲಿಕೆ ‘ಆಸ್ಟ್ರಾಫಿಸಿಕಲ್ ಜರ್ನಲ್ ಲೆಟರ್ಸ್‘ನಲ್ಲಿ ಈ ಐತಿಹಾಸಿಕ ಚಿತ್ರವನ್ನು ಪ್ರಕಟಿಸಲಾಗಿದೆ.
- ನೆದರ್ಲೆಂಡ್ಸ್ನ ರಾರಯಡ್ಬೌಂಡ್ ವಿಶ್ವವಿದ್ಯಾಲಯದ ಪ್ರೊ.ಹೀನೋ ಫ್ಯಾಕಲ್ ಅವರು ಈ ಸವಾಲಿನ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.
- ”ಕಪ್ಪು ಕುಳಿವೊಂದರ ಸುತ್ತಲೂ ಪ್ರಕಾಶಮಾನವಾಗಿ ಕೆಂಪು ಮಿಶ್ರಿತ ಕಿತ್ತಳೆ ಬಣ್ಣದಲ್ಲಿ ಹೊಳೆಯುವ ಬೃಹತ್ ಬೆಂಕಿಯ ಬಳೆ ಚಿತ್ರದಲ್ಲಿ ಕಂಡುಬಂದಿದೆ. ಅದರ ಪ್ರಕಾಶಮಾನತೆಯು ಎಂ87 ನಕ್ಷತ್ರಪುಂಜದಲ್ಲಿರುವ ಕೋಟ್ಯಂತರ ನಕ್ಷತ್ರಗಳನ್ನು ಒಟ್ಟಿಗೆ ಸೇರಿಸಿದರೂ ಮೀರುವಷ್ಟು ತೀವ್ರವಾಗಿದೆ ಹೀಗಾಗಿಯೇ ಇದು ಭೂಮಿಯಿಂದಲೂ ಗೋಚರಗೊಂಡಿದೆ,” ಎಂದು ವಿಜ್ಞಾನಿಗಳು ಹೇಳಿದ್ದಾರೆ.
- ಕಪ್ಪುಕುಳಿಯ ಸುತ್ತಲಿನ ಪ್ರಕಾಶಮಾನ ತೇಜೋಮಂಡಲ ಸೃಷ್ಟಿಯಾಗಲು ಅತ್ಯಂತ ಶಾಖದಿಂದ ಕೂಡಿದ ಅನಿಲವನ್ನು ಕಪ್ಪುಕುಳಿ ತನ್ನ ಕೇಂದ್ರ ಭಾಗದತ್ತ ಸೆಳೆದುಕೊಳ್ಳುವುದೇ ಕಾರಣ ಇರಬಹುದು. ಆದರೆ, ಕಪ್ಪುಕುಳಿಯ ಕೇಂದ್ರ ಭಾಗದಲ್ಲಿ ಬೆಳಕೂ ಸಹ ತಪ್ಪಿಸಿಕೊಳ್ಳಲಾರದಷ್ಟು ಅಗಾಧ ಗುರುತ್ವಾಕರ್ಷಣೆ ಸೆಳೆತ ಇರುವುದರಿಂದ ಆ ಭಾಗ ಕಡುಕಪ್ಪು ಬಣ್ಣದಿಂದ ಕೂಡಿದೆ.
- ವಿಶ್ವವನ್ನೇ ನುಂಗಿ ಹಾಕುವ ಸಾಮರ್ಥ್ಯವುಳ್ಳ ಕಪ್ಪುಕುಳಿಯ ಬಗ್ಗೆ ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಹತ್ವದ ಮಾಹಿತಿ ನೀಡಿದ್ದರು. ಆ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡರೂ ಕಪ್ಪುಕುಳಿಯ ಚಿತ್ರಣ ಬರೀ ಕಾಲ್ಪನಿಕವಾಗಿಯೇ ಉಳಿದಿತ್ತು. ವಿಶೇಷವೆಂದರೆ, ಕಾಲ್ಪನಿಕ ಅಥವಾ ಸಂಶೋಧನೆ ಆಧರಿತ ಚಿತ್ರಕ್ಕೂ ಈಗ ಸೆರೆ ಹಿಡಿದಿರುವ ನೈಜ ಚಿತ್ರಕ್ಕೂ ಬಹುತೇಕ ಸಾಮ್ಯತೆ ಇದೆ.
- ನೈಜ ಚಿತ್ರ ಆಧರಿಸಿ ಖಗೋಳ ವಿಜ್ಞಾನಿಗಳು ಕಪ್ಪುಕುಳಿಗಳ ಬಗ್ಗೆ ಮತ್ತಷ್ಟು ಆಳ ಅಧ್ಯಯನ ಮಾಡಲು ಅನುಕೂಲವಾಗಲಿದೆ.
ಕೆನಡಾದಿಂದ ವಿಶೇಷ ವೀಸಾ ಯೋಜನೆ
ಸುದ್ಧಿಯಲ್ಲಿ ಏಕಿದೆ ? ಕೆನಡಾ ಸರ್ಕಾರ ಗ್ಲೋಬಲ್ ಟ್ಯಾಲೆಂಟ್ ಸ್ಟ್ರೀಮ್ (ಜಿಟಿಎಸ್) ಎಂಬ ವಿಶೇಷ ವೀಸಾ ಯೋಜನೆ ಸಿದ್ಧಗೊಳಿಸುತ್ತಿದೆ.
- ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಮುಂತಾದ ವಿಷಯಗಳಲ್ಲಿ ಪರಿಣತರಾದ ಭಾರತೀಯರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ. ಸುಲಭ ವೀಸಾ ವಿತರಣೆ, ಉದ್ಯೋಗಕ್ಕಾಗಿ ಆಗಮಿಸುವವರಿಗೆ ಕಾಯಂ ನಿವಾಸಿ ಸ್ಥಾನಮಾನ ಕಲ್ಪಿಸಲು ನಿರ್ಧರಿಸಲಾಗಿದೆ.
- ಪ್ರಾಯೋಜಕತ್ವದಡಿ ಉದ್ಯೋಗಿಗಳ ಪರವಾಗಿ ಸಲ್ಲಿಸುವ ವೀಸಾ ಅರ್ಜಿ ಪರಿಶೀಲನೆಗೆ ಎರಡು ವಾರಗಳ ಗಡುವು ನಿಗದಿಗೊಳಿಸಲಾಗಿದೆ. ಜಿಟಿಎಸ್ ವೀಸಾದಡಿ ಬರುವವರಿಗೆ ಔದ್ಯೋಗಿಕ ಅನುಭವ ಹೆಚ್ಚಿದಷ್ಟು ಕೆನಡಾದ ಕಾಯಂ ನಿವಾಸಿಯಾಗುವ ಅವಕಾಶ ಅಧಿಕವಾಗುತ್ತದೆ.
- ಇಂಥವರು ಎಕ್ಸ್ಪ್ರೆಸ್ ಎಂಟ್ರಿ ಕಾರ್ಯಕ್ರಮದಡಿಯಲ್ಲಿ ಕಾಯಂ ನಿವಾಸಿ ಸ್ಥಾನಮಾನ ಪಡೆದುಕೊಳ್ಳಬಹುದಾಗಿದೆ. ಎಕ್ಸ್ಪ್ರೆಸ್ ಎಂಟ್ರಿ ಕಾರ್ಯಕ್ರಮದಡಿಯಲ್ಲಿ ಕಾಯಂ ನಿವಾಸಿ ಸ್ಥಾನಮಾನದ ಅರ್ಹತೆ ಪಡೆದುಕೊಂಡವರ ಪೈಕಿ ಭಾರತೀಯರ ಸಂಖ್ಯೆ ಅಧಿಕವಾಗಿದೆ.
ಜಲಿಯನ್ವಾಲಾ ಬಾಗ್ ನರಮೇಧ
ಸುದ್ಧಿಯಲ್ಲಿ ಏಕಿದೆ ? 1919ರಲ್ಲಿ ನಡೆದ ಜಲಿಯನ್ವಾಲಾ ಭಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಬ್ರಿಟನ್ ಸಂಸತ್ತಿನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
- ಜಲಿಯನ್ವಾಲಾ ಭಾಗ್ ಹತ್ಯಾಕಾಂಡಕ್ಕೆ ಏಪ್ರಿಲ್ 13ಕ್ಕೆ ನೂರು ವರ್ಷ ಆಗಲಿದೆ. ಸಂಸತ್ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಥೆರೆಸಾ ಮೇ ಈ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೇ ಘಟನೆ ಕುರಿತಂತೆ ತೀವ್ರ ವಿಷಾದ ವ್ಯಕ್ತಪಡಿಸಿದರು.
- ಜಲಿಯನ್ವಾಲಾ ಭಾಗ್ ಹತ್ಯಾಕಾಂಡ ವಿಶ್ವದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಘಟನೆ. ಇದಕ್ಕೆ ಕಾರಣವಾಗಿದ್ದು ಬ್ರಿಟಿಷ್ ಆಡಳಿತ.
- ಸ್ವಾತಂತ್ರ್ಯ ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡಕ್ಕೆ ಇಂದಿಗೂ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ.
ಏನಿದು ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ?
- ಅಮೃತಸರ ಸಮೀಪದ ಜಲಿಯನ್ವಾಲಾ ಭಾಗ್ನಲ್ಲಿ ಏಪ್ರಿಲ್ 13, 1919ರಂದು ಸ್ವಾತಂತ್ರ್ಯ ಹೋರಾಟಗಾರರು ಸೇರಿದ್ದ ಸಂದರ್ಭ ಬ್ರಿಟಿಷ್ ಯೋಧರು ಗುಂಡು ಹಾರಿಸಿ ಹಲವಾರು ಮಂದಿಯನ್ನು ಬಲಿ ತೆಗೆದುಕೊಂಡು. ಕೆಲವರು ಇಂಗ್ಲಿಷರ ಗುಂಡಿಗೆ ಬಲಿಯಾಗಲು ಇಷ್ಟವಿಲ್ಲದೇ ಅಲ್ಲೇ ಇದ್ದ ದೊಡ್ಡ ಬಾವಿಯೊಳಗೆ ಬಿದ್ದು ಪ್ರಾಣಾರ್ಪಣೆ ಮಾಡಿದ್ದರು.
- ಇಡೀ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಘಟನೆಯಾಗಿ ದಾಖಲಾಗಿದೆ.
- ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡೇವಿಡ್ ಕೆಮರಾನ್ ಕೂಡ ಘಟನೆ ಪ್ರಸ್ತಾಪಿಸಿದ್ದರು. ಇದೊಂದು ಅವಮಾನಕರ ಘಟನೆ ಎಂದಿದ್ದರೇ ಹೊರತು ಕ್ಷಮೆ ಯಾಚಿಸಿರಲಿಲ್ಲ.