“12 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಬಾಂಡ್
ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ್ದ ಜನಹಿತಾಸಕ್ತಿ ಅರ್ಜಿಯ ಕುರಿತ ತೀರ್ಪುನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
- ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಸ್ನಿಸಿ ಸರ್ಕಾರರೇತರ ಸಂಸ್ಥೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು.
- ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲನೆಯ ಖಾತರಿಗಾಗಿ ದೇಣಿಗೆದಾರರ ಹೆಸರುಗಳನ್ನು ಬಹಿರಂಗಪಡಿಸಭೇಕು ಅಥವಾ ಈ ಯೋಜನೆಗೆ ತಡೆ ಆದೇಶ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು
ಚುನಾವಣಾ ಬಾಂಡ್ ಎಂದರೇನು ?
- ಚುನಾವಣಾ ಬಾಂಡ್ ಪ್ರಾಮಿಸರಿ ನೋಟ್ನಂತಹ ಧಾರಕ ಸಲಕರಣೆಯಾಗಲು ವಿನ್ಯಾಸಗೊಳಿಸಲಾಗಿದೆ – ಪರಿಣಾಮವಾಗಿ, ಇದು ಬ್ಯಾಂಕ್ ಟಿಪ್ಪಣಿಯನ್ನು ಹೋಲುತ್ತದೆ, ಅದು ಬೇಡಿಕೆಯ ಮೇರೆಗೆ ಮತ್ತು ಬಡ್ಡಿಯ ಮೇರೆಗೆ ಧಾರಕನಿಗೆ ಪಾವತಿಸಲ್ಪಡುತ್ತದೆ. ಭಾರತದ ಯಾವುದೇ ನಾಗರಿಕನಿಂದ ಅಥವಾ ಭಾರತದಲ್ಲಿ ಸಂಘಟಿತವಾದ ಸಂಸ್ಥೆಯಿಂದ ಅದನ್ನು ಖರೀದಿಸಬಹುದು.
ಅದನ್ನು ಹೇಗೆ ಬಳಸುವುದು?
- ಈ ಬಾಂಡ್ಗಳನ್ನು ₹ 1,000, ₹ 10,000, ₹ 1 ಲಕ್ಷ, ₹ 10 ಲಕ್ಷ ಮತ್ತು ₹ 1 ಕೋಟಿ ಗಳಲ್ಲಿ ನೀಡಲಾಗುತ್ತದೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಲ್ಲಿ ಲಭ್ಯವಿರುತ್ತದೆ. KYC- ಕಂಪ್ಲೈಂಟ್ ಖಾತೆಯಿಂದ ದಾನಿ ಅವುಗಳನ್ನು ಖರೀದಿಸಬಹುದು. ದಾನಿಗಳು ತಮ್ಮ ಪಕ್ಷದ ಆಯ್ಕೆಗೆ ಬಾಂಡ್ಗಳನ್ನು ದಾನ ಮಾಡಬಹುದು, ನಂತರ ಅದನ್ನು 15 ದಿನಗಳ ಒಳಗೆ ಪಕ್ಷದ ಪರಿಶೀಲಿಸಿದ ಖಾತೆಯ ಮೂಲಕ ನಗದುಗೊಳಿಸಿಕೊಳ್ಳಬಹುದು.
ಇತರ ಷರತ್ತುಗಳು ಯಾವುವು?
- 1951 ರ ಪೀಪಲ್ಸ್ ಆಕ್ಟ್, 1951 (1951 ರ 43) ರ ಸೆಕ್ಷನ್ 29 ಎ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಪ್ರತಿಯೊಂದು ಪಕ್ಷ ಮತ್ತು ಇತ್ತೀಚಿನ ಲೋಕಸಭೆ ಅಥವಾ ರಾಜ್ಯ ಚುನಾವಣೆಯಲ್ಲಿ ಮತದಾನದಲ್ಲಿ ಕನಿಷ್ಠ ಶೇಕಡ ಒಂದರಷ್ಟು ಮತಗಳನ್ನು ಪಡೆದು ಕೊಂಡಿದ್ದರೆ ಅಂತಹ ಪಕ್ಷಗಳಿಗೆ ಭಾರತದ ಚುನಾವಣಾ ಆಯೋಗವು ಪರಿಶೀಲಿಸಿದ ಖಾತೆಯನ್ನು ನೀಡುತ್ತದೆ . ಚುನಾವಣಾ ಬಾಂಡ್ ವಹಿವಾಟುಗಳನ್ನು ಈ ಖಾತೆಯ ಮೂಲಕ ಮಾತ್ರ ಮಾಡಬಹುದಾಗಿದೆ.
- ಪ್ರತಿ ಕಾಲು ತಿಂಗಳುಗಳ ಆರಂಭದಲ್ಲಿ, ಅಂದರೆ, ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದಂತೆ 10 ದಿನಗಳವರೆಗೆ ಖರೀದಿಗೆ ಬಾಂಡ್ಗಳು ಲಭ್ಯವಿರುತ್ತವೆ. ಲೋಕಸಭಾ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರವು 30 ದಿನಗಳ ಹೆಚ್ಚುವರಿ ಅವಧಿಯನ್ನು ನಿರ್ದಿಷ್ಟಪಡಿಸಬೇಕು
ಈ ಯೋಜನೆ ಏಕೆ ಬಂದಿತು?
- ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣವನ್ನು ಕಪ್ಪು ಹಣ ಅಥವಾ ಶುದ್ಧ ಹಣವೊ ಎಂದು ಖಚಿತಪಡಿಸಿಕೊಳ್ಳಲು ಈ ಯೋಜನೆ ತರಲಾಯಿತು
- ಇದು ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುತ್ತದೆ
- ಎಡಿಆರ್ (ಅಸೋಸಿಯೇಷನ್ ಫಾರ್ ಡೆಮೋಕ್ರಾಟಿಕ್ ರೈಟ್ಸ್) ಹೇಳುವಂತೆ ಭಾರತದಲ್ಲಿ 69% ರಾಜಕೀಯ ಹಣವು ಅಪರಿಚಿತ ಮೂಲಗಳಿಂದ ಬರುತ್ತದೆ. ಈ ಸಂದರ್ಭದಲ್ಲಿ, ಚುನಾವಣಾ ಬಾಂಡ್ಗಳು ಹಣವನ್ನು ಸಂಗ್ರಹಿಸಲು ಪಕ್ಷಗಳಿಗೆ ಪರ್ಯಾಯ, ಪಾರದರ್ಶಕ ಮಾರ್ಗವನ್ನು ಒದಗಿಸುತ್ತವೆ.
- ರಾಜಕೀಯ ಪ್ರತಿಸ್ಪರ್ಧಿಗಳಿಂದ ಯಾವುದೇ ಮತದಾನ ನಂತರದ ಭೀತಿ ಅಥವಾ ಕಿರುಕುಳದಿಂದ ರಕ್ಷಿಸಬೇಕಾದ ಅವಶ್ಯಕತೆಯಿರುವುದರಿಂದ ದಾನಿಗಳ ಅನಾಮಧೇಯತೆಯನ್ನು ಅದು ಸಂರಕ್ಷಿಸುತ್ತದೆ.
- ಅಲ್ಲದೆ, ಈ ಬಾಂಡ್ಗಳ ಅವಧಿಯು ಕೇವಲ 15 ದಿನಗಳು ಮಾತ್ರ, ಇದು ದುರುಪಯೋಗದ ಉದ್ದೇಶವನ್ನು ಸೀಮಿತಗೊಳಿಸುತ್ತದೆ. ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ಗ ಳ ಮೂಲಕ ಪಡೆದ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು. ಆದ್ದರಿಂದ, ಭಾರತದಲ್ಲಿನ ಚುನಾವಣಾ ಹಣಕಾಸು ವ್ಯವಸ್ಥೆಯನ್ನು ಸ್ವಚ್ಛಗೊಳಿಸುವಲ್ಲಿ ಬಾಂಡ್ಗಳು ನೆರವಾಗುತ್ತವೆ.
- ಬಾಂಡ್ಗಳು ಸಹ ದಾನಿಗಳಿಗೆ ತೆರಿಗೆ ಪ್ರಯೋಜನವನ್ನು ನೀಡುತ್ತವೆ, ಹೀಗಾಗಿ ಅವರಿಗೆ ರಾಜಕೀಯ ದೇಣಿಗೆಗಳು ಆಕರ್ಷಕವಾದ ಸಾಧನವಾಗಿದೆ
ಯೋಚಿಸಿ :ರಾಜಕೀಯ ಧನಸಹಾಯದಲ್ಲಿ ಪಾರದರ್ಶಕತೆಯ ಅಪೇಕ್ಷಿತ ಉದ್ದೇಶವನ್ನು ಸಾಧಿಸುವಲ್ಲಿ ಚುನಾವಣಾ ಬಾಂಡ್ಗಳು ಯಶಸ್ವಿಯಾಗಬಹುದೆ? ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ
ತಂಬಾಕು ಮುಕ್ತ ಮತಗಟ್ಟೆ
ಸುದ್ಧಿಯಲ್ಲಿ ಏಕಿದೆ ?ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಹಾಗೂ ಆರೋಗ್ಯಕರ ಮತದಾನ ನಡೆಸುವ ಆಶಯದೊಂದಿಗೆ ತಂಬಾಕು ಮುಕ್ತ ಮತಗಟ್ಟೆ ನಿರ್ಮಾಣ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಮಾಡಿದೆ.
- ಹೊಸದಿಲ್ಲಿ, ಬಿಹಾರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಚುನಾವಣಾಧಿಕಾರಿಗಳು ಈಗಾಗಲೇ ತಂಬಾಕುರಹಿತ ಮತಗಟ್ಟೆ ಎಂದು ಘೋಷಿಸಿದ್ದಾರೆ.
- ರಾಜ್ಯದಲ್ಲೂ ಅದೇ ಮಾದರಿ ಅನುಸರಿಸುವ ಮೂಲಕ ಎಲ್ಲ ಮತಗಟ್ಟೆಗಳು ತಂಬಾಕು ಮುಕ್ತ ಮತಗಟ್ಟೆ ಎಂದು ಆದೇಶ ಹೊರಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ
ತಂಬಾಕಿನ ಪರಿಣಾಮ
- ತಂಬಾಕು ಹಾಗೂ ಅದರ ಉತ್ಪನ್ನಗಳು ಕ್ಯಾನ್ಸರ್ಗೆ ಆಹ್ವಾನ ನೀಡುತ್ತಿದ್ದು, ದೇಶದಲ್ಲಿ ಪ್ರತಿ ವರ್ಷ 12 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ರಾಜ್ಯದಲ್ಲಿ ಶೇ.8 ಮಂದಿ ತಂಬಾಕು ಉತ್ಪನ್ನವನ್ನು ಬಳಕೆ ಮಾಡುತ್ತಿದ್ದಾರೆ.
- ಇನ್ನು ಶೇ.3 ಜನತೆ ಜಗಿಯುವ ತಂಬಾಕಿನ ಗೀಳು ಹತ್ತಿಸಿಕೊಂಡಿದ್ದಾರೆ. ಶೇ.8.8ಮಂದಿ ಧೂಮಪಾನ ವ್ಯಸನಿಗಳಾಗಿದ್ದು, ಶೇ. 23.9ಸಾರ್ವಜನಿಕರು ಪರೋಕ್ಷವಾಗಿ ಧೂಮಪಾನ ಮಾಡುತ್ತಿದ್ದಾರೆ
ಧೂಮಪಾನಿಗಳಿಗೆ ದಂಡ
- ”ತಂಬಾಕುಮುಕ್ತ ಮತಗಟ್ಟೆ ಘೋಷಣೆ ಮಾಡಿರುವ ರಾಜ್ಯಗಳಲ್ಲಿ ಮತದಾನ ಮಾಡುವ ಸ್ಥಳ ಹಾಗೂ ಸುತ್ತಮುತ್ತ ಧೂಮಪಾನ ಹಾಗೂ ತಂಬಾಕು ಉತ್ಪನ್ನವನ್ನು ಬಳಕೆ ಮಾಡಿದಲ್ಲಿ ತಂಬಾಕು ನಿಯಂತ್ರಣ ಕಾನೂನಿನ (ಕೋಟ್ಪಾ ಕಾಯಿದೆ) ಸೆಕ್ಷನ್ 4ರ ಅಡಿಯಲ್ಲಿ 200ರೂ. ದಂಡ ವಿಧಿಸಲಿದ್ದು, ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.
- ರಾಜ್ಯ ಮುಖ್ಯ ಚುನಾವಣಾಧಿಕಾರಿ ಕೂಡ ತಂಬಾಕುರಹಿತ ಮತಗಟ್ಟೆ ಎಂದು ಘೋಷಿಸಿದಲ್ಲಿ ಕರ್ನಾಟಕ ರಾಜ್ಯ ತಂಬಾಕು ನಿಯಂತ್ರಣ ಘಟಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಜತೆಗೆ ಮತಗಟ್ಟೆಗಳ ಬಳಿ ತಂಬಾಕು ಉತ್ಪನ್ನದಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಚಿಂತನೆ ನಡೆಸಲಾಗಿದೆ.
ಡಬ್ಬಲ್ ಡೆಕ್ಕರ್ ಬಸ್
ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಮತ್ತು ಬೆಂಗಳೂರು ನಗರ ಸೌಂದರ್ಯವನ್ನು ಜನರಿಗೆ ವಿಭಿನ್ನವಾಗಿ ತೋರಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಮುಂದಾಗಿದೆ. ಈವರೆಗೆ ಹವಾನಿಯಂತ್ರಿತ ಬಸ್ಗಳಲ್ಲಿ ತಾಣಗಳ ಪರಿಚಯ ಮಾಡಿಸುತ್ತಿದ್ದ ನಿಗಮ ಇನ್ನು ಮುಂದೆ ತೆರೆದ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲಿದೆ.
- ರಾಜ್ಯದಲ್ಲಿ ಮೊದಲು: ಬೆಂಗಳೂರು ನಗರದಲ್ಲಿ ಜನರ ಸಂಚಾರಕ್ಕೆ ಡಬ್ಬಲ್ ಡೆಕ್ಕರ್ ಬಸ್ ಖರೀದಿಸುವುದಾಗಿ ಬಿಎಂಟಿಸಿ ತಿಳಿಸಿತ್ತು. ಆ ನಂತರ ನಗರದಲ್ಲಿ ಬಸ್ ಸಂಚರಿಸುವುದು ಕಷ್ಟ ಎಂಬ ಕಾರಣಕ್ಕಾಗಿ ಯೋಜನೆ ಕೈಬಿಡಲಾಗಿತ್ತು.
- ಆದರೀಗ ಕೆಎಸ್ಟಿಡಿಸಿ ಆ ಸಾಹಸಕ್ಕೆ ಕೈ ಹಾಕಿದ್ದು, ತೆರೆದ ಡಬ್ಬಲ್ ಡೆಕ್ಕರ್ ಬಸ್ ಮೂಲಕ ಬೆಂಗಳೂರು ಮತ್ತು ಮೈಸೂರು ದರ್ಶನ ಸೇವೆಗೆ ಚಾಲನೆ ನೀಡಲು ನಿರ್ಧರಿಸಿದೆ.
- ಮೈಸೂರಿಗೆ ಆದ್ಯತೆ: ಕಳೆದ ದಸರಾ ಸಂದರ್ಭದಲ್ಲಿ ಬಿಎಂಟಿಸಿಯಲ್ಲಿನ ತೆರೆದ ಡಬ್ಬಲ್ ಡೆಕ್ಕರ್ ಬಸ್ನ್ನು ಗುತ್ತಿಗೆ ಆಧಾರದಲ್ಲಿ ಪಡೆದಿದ್ದ ಕೆಎಸ್ಟಿಡಿಸಿ ಮೈಸೂರು ದರ್ಶನ ಸೇವೆ ನೀಡಿತ್ತು. ಆ ವೇಳೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಆ ಸೇವೆಯನ್ನು ಕಾಯಂಗೊಳಿಸಲು ಕೆಎಸ್ಟಿಡಿಸಿ ನಿರ್ಧರಿಸಿದೆ. ಅದರಂತೆ ದಸರಾ ಹಬ್ಬದ ಜತೆಗೆ ವರ್ಷವಿಡೀ ತೆರೆದ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಮೈಸೂರು ದರ್ಶನ ಸೇವೆ ನೀಡಲು ಚಿಂತಿಸಲಾಗಿದೆ.
- ಮೈಸೂರು ಜತೆಗೆ ಬೆಂಗಳೂರಿನ ಆಯ್ದ ಪ್ರವಾಸಿ ತಾಣಗಳಿಗೆ ಡಬ್ಬಲ್ ಡೆಕ್ಕರ್ ಬಸ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಮೊದಲ ಹಂತದಲ್ಲಿ ಒಟ್ಟು 6 ಬಸ್ಗಳನ್ನು ಖರೀದಿಸಲಾಗುತ್ತಿದ್ದು, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ 3 ಬಸ್ಗಳು ಸೇವೆ ನೀಡಲಿವೆ. ಈ ಸೇವೆ ಯಶಸ್ವಿಯಾದರೆ, ರಾಜ್ಯ ಪ್ರಮುಖ ಪ್ರವಾಸಿ ತಾಣಗಳಿರುವ ಜಿಲ್ಲೆಗಳಿಗೊಂದು ಬಸ್ ಆರಂಭಿಸುವ ಬಗ್ಗೆಯೂ ರ್ಚಚಿಸಲಾಗಿದೆ.
- ಪ್ಯಾನಿಕ್ ಬಟನ್: ಹೊಸ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪ್ಯಾನಿಕ್ ಬಟನ್ ಅಳವಡಿಸಲಿದೆ. ಅದನ್ನು ಒತ್ತಿದರೆ ಅದರ ಸಂದೇಶ ಕೆಎಸ್ಟಿಡಿಸಿ ಸಹಾಯವಾಣಿಗೆ ತಲುಪಲಿದೆ. ಆ ಮೂಲಕ ಪ್ರಯಾಣಿಕರ ನೆರವಿಗೆ ಬರಬಹುದಾಗಿದೆ. ಅದರ ಜತೆಗೆ ಜಿಪಿಎಸ್ ಆಧಾರದಲ್ಲಿ ಕೆಲಸ ಮಾಡುವ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ (ವಿಎಲ್ಟಿ) ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಆ ಮೂಲಕ ವಾಹನ ಎಲ್ಲಿದೆ ಎಂಬುದು ತಿಳಿಯಲು ಸುಲಭವಾಗಲಿದೆ.
ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಸಮೀಕ್ಷೆ
ಸುದ್ಧಿಯಲ್ಲಿ ಏಕಿದೆ ?ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಭಾರತದಲ್ಲಿ 2015 ನೇ ಸಾಲಿನಲ್ಲಿ ಬರೊಬ್ಬರಿ 350,000 ಮಕ್ಕಳು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.
- ವಿಶ್ವದ 194 ರಾಷ್ಟ್ರಗಳು 125 ಪ್ರಮುಖ ನಗರಗಳಲ್ಲಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಸಮೀಕ್ಷೆ ನಡೆಸಿದ್ದು, ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಆಸ್ತಮಾ ಸಮಸ್ಯೆಗೆ ತುತ್ತಾಗಿರುವವರ ಸಂಖ್ಯೆಯಲ್ಲಿ ಚೀನಾ ನಂ.1 ಸ್ಥಾನದಲ್ಲಿದ್ದರೆ ಭಾರತ 2 ನೇ ಸ್ಥಾನದಲ್ಲಿದೆ.
- ಪ್ರತಿ ವರ್ಷವೂ 10 ರಲ್ಲಿ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಜನರಿಗೆ ಬಾಲ್ಯದಲ್ಲೇ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಇದಕ್ಕೆ ವಾಹನ ದಟ್ಟಣೆಯಿಂದ ಉಂಟಾದ ಮಾಲಿನ್ಯ ಕಾರಣ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ವರದಿ ಮೂಲಕ ತಿಳಿದುಬಂದಿದೆ.
- ಅಭಿವೃದ್ಧಿಶೀಲ ಹಾಗೂ ಮಕ್ಕಳಲ್ಲಿ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ಅತ್ಯಂತ ಅಪಾಯಕಾರಿ ಅಂಶ ಎಂಬುದು ವರದಿಯ ಮೂಲಕ ತಿಳಿದುಬಂದಿದೆ.
- ಶೇ.92 ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಪ್ರದೇಶಗಳಲ್ಲಿ ವಿಶ್ವಸಂಸ್ಥೆ ಮಾರ್ಗಸೂಚಿ ಮಟ್ಟಕ್ಕಿಂತಲೂ ಸಂಚಾರ ಮಾಲಿನ್ಯದ ಮಟ್ಟ ಆತಂಕಕಾರಿಯಾಗಿದ್ದು, ಸಂಶೋಧಕರು ಮಾರ್ಗಸೂಚಿಯನ್ನು ಮರುಪರಿಶೀಲನೆ ನಡೆಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್
- ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಎಂಬುದು ಚಿನ್ನದ ಓಪನ್ ಆಕ್ಸೆಸ್ ಜರ್ನಲ್ ಆಗಿದ್ದು, ವೈಜ್ಞಾನಿಕ ವಿಚಾರಣೆಯ ಸಂಪೂರ್ಣ ಹೊಸ ಕ್ಷೇತ್ರವನ್ನು ಸ್ಥಾಪಿಸಲು ಮತ್ತು ಬೆಳೆಯಲು ಉದ್ದೇಶಿಸಿದೆ- ಆರೋಗ್ಯ, ಮಾನವ ನಾಗರಿಕತೆಗಳ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಪರಿಸರೀಯ ನಿರ್ಣಾಯಕರಿಗೆ ಪರಿಹಾರಗಳನ್ನು ಒದಗಿಸುವುದು ಮತ್ತು ನೈಸರ್ಗಿಕ ವ್ಯವಸ್ಥೆಗಳಿಗೆ ಅವು ಅವಲಂಬಿಸಿವೆ.
ಮಂಗಗಳಿಗೆ ಮಾನವ ಮಿದುಳಿನ ಜೀನ್!
ಸುದ್ಧಿಯಲ್ಲಿ ಏಕಿದೆ ?ಮಾನವನ ಬುದ್ಧಿಮತ್ತೆಯ ಬೆಳವಣಿಗೆ ಹೇಗಾಯಿತು ಎನ್ನುವುದನ್ನು ಅಧ್ಯಯನ ನಡೆಸುವ ಸಲುವಾಗಿ ಚೀನಾ ವಿಜ್ಞಾನಿಗಳು ಮಾನವ ಮಿದುಳಿನ ಜೀನ್ಗಳನ್ನು ಮಂಗಗಳಲ್ಲಿ ಅಳವಡಿಸಿದ್ದಾರೆ.
- ಮಿದುಳಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಎಂಸಿಪಿಎಚ್1 ಜೀನ್ ಅನ್ನು 11 ರೆಸಸ್ ಮಂಗಗಳಲ್ಲಿ ಅಳವಡಿಸಲಾಗಿದೆ. ಆದರೆ ಮಂಗಗಳ ಮಿದುಳು ಮಾನವನ ಮಿದುಳಿನಂತೆ ಅಭಿವೃದ್ಧಿಯಾಗಲು ದೀರ್ಘಕಾಲ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
- ಇಲ್ಲಿಯವರೆಗೆ ನಡೆಸಿರುವ ಪರೀಕ್ಷೆಗಳಲ್ಲಿ ಮಂಗಗಳಲ್ಲಿ ಅಲ್ಪಾವಧಿ ನೆನಪಿನ ಶಕ್ತಿ ಮತ್ತು ಶೀಘ್ರವಾದ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೆಚ್ಚಾಗಿರುವುದು ಕಂಡುಬಂದಿದೆ.
- ಆದರೆ ಮಂಗಗಳ ಮಿದುಳಿನ ಗಾತ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ.
- ಚೀನಾದ ಕುನ್ವಿುಂಗ್ ಇನ್ಸ್ಟಿಟ್ಯೂಟ್, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಉತ್ತರ ಕೆರೋಲಿನಾ ವಿವಿಯ ಸಂಶೋಧಕರು ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ.
- ಮಾನವ ಮಿದುಳಿನ ಜೀನ್ ಅಳವಡಿಸಿರುವ ಮಂಗಗಳಲ್ಲಿ 5 ಮಾತ್ರ ಬದುಕುಳಿದಿವೆ. ಇವುಗಳನ್ನು ನಿಯಮಿತವಾಗಿ ನೆನಪಿನ ಶಕ್ತಿಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಬಣ್ಣಗಳ ನೆನಪಿಡುವಿಕೆ, ಪರದೆಯಲ್ಲಿನ ಆಕಾರ ನೆನೆಪಿಡುವಿಕೆ ಮುಂತಾದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜತೆಗೆ ಮಂಗಗಳನ್ನು ನಿಯಮಿತ ಎಂಆರ್ಐ ಸ್ಕಾನಿಂಗ್ಗೆ ಒಳಪಡಿಸಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.