“04 ಮೇ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ
ಸುದ್ಧಿಯಲ್ಲಿ ಏಕಿದೆ ? ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ರಾತ್ರಿ ಸಂಚಾರ ನಿರ್ಬಂಧವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದ್ದು ಕೇರಳ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಹಿನ್ನಲೆ
- ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಸರ ಮತ್ತು ಅರಣ್ಯ ಸಚಿವಾಲಯ ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿ-212ರಲ್ಲಿ ರಾತ್ರಿ ವೇಳೆ ಸಂಚಾರದ ನಿಷೇಧ ನಿರ್ಬಂಧದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾರ್ಯದರ್ಶಿಗಳ ಸಮಿತಿ ಮಾಡಿರುವ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ತನ್ನ ನಿಲುವನ್ನು ತಿಳಿಸಿದೆ.
- 2010ರಲ್ಲಿ ಕರ್ನಾಟಕ ಹೈಕೋರ್ಟ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳ ಜೀವರಕ್ಷಣೆ ದೃಷ್ಟಿಯಿಂದ ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಕೇರಳಕ್ಕೆ ಹೋಗುವ ಮತ್ತು ಅಲ್ಲಿಂದ ರಾತ್ರಿ 9 ಗಂಟೆ ಮೇಲೆ ಬರುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ನಿರ್ಬಂಧವನ್ನು ಕೇರಳ ಸರ್ಕಾರ ವಿರೋಧಿಸಿತ್ತು.
ಬಂಡೀಪುರ ರಾಷ್ಟ್ರೀಯ ಉದ್ಯಾನವನ
- ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಪ್ರಾಜೆಕ್ಟ್ ಟೈಗರ್ ಕ್ರಿಯೆಗೆ ಈ ಅಭಯಾರಣ್ಯ ಸಂಬಂಧವನ್ನು ಹೊಂದಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
- ಬಂಡೀಪುರ ರಾಷ್ಟ್ರೀಯ ಉದ್ಯಾನವು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿದೆ. ಇದು ಒಮ್ಮೆ ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಖಾಸಗಿ ಬೇಟೆಯಾಡಲು ಮೀಸಲಾಗಿತ್ತು, ಆದರೆ ಈಗ ಹುಲಿ ಸಂರಕ್ಷಣಾ ಪ್ರದೇಶವಾಗಿ ಮಾರ್ಪಾಡು ಮಾಡಲಾಗಿದೆ.ಬಂಡೀಪುರವು ತನ್ನ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಅನೇಕ ವಿಧದ ಬಯೋಮ್ಗಳನ್ನು ಹೊಂದಿದೆ, ಆದರೆ ಒಣಪತನಶೀಲ ಅರಣ್ಯವು ಪ್ರಬಲವಾಗಿದೆ.
- ಉದ್ಯಾನವು 874 ಚದರಕಿಲೋಮೀಟರ್ ಪ್ರದೇಶವನ್ನು ವ್ಯಾಪಿಸಿದೆ. ಇದು ಭಾರತದ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಹಲವಾರು ಜಾತಿಗಳನ್ನು ರಕ್ಷಿಸುತ್ತದೆ. ಸಮೀಪದ ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಮುದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ವಯನಾಡ್ವನ್ಯ ಜೀವಿ ಅಭಯಾರಣ್ಯ ಜೊತೆಗೆ ನೀಲಗಿರಿ ಜೀವಗೋಳ ರಿಸರ್ವ್ ಒಟ್ಟು 2,183 ಕಿಮಿ.2 ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ದೊಡ್ಡ ವಾಸಸ್ಥಾನವಾಗಿದೆ.
ನಾರಾಯಣಪುರ ಜಲಾಶಯ
ಸುದ್ಧಿಯಲ್ಲಿ ಏಕಿದೆ ?ಮೆಹಬೂಬ್ ನಗರ ಜಿಲ್ಲೆಯ ಜನರ ಕುಡಿಯುವ ನೀರಿನ ಅಗತ್ಯಕ್ಕಾಗಿ ತೆಲಂಗಾಣ ಕೋರಿಕೆಯ ಮೇರೆಗೆ, ನಾರಾಯಣಪುರ ಜಲಾಶಯದಿಂದ ಜುರಾಲ ಯೋಜನೆಗೆ ಎರಡೂವರೆ ಟಿಎಂಸಿ ನೀರು ಬಿಡುಗಡೆಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ.
- ಮೆಹಬೂಬ್ ನಗರ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ಮಟ್ಟಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ನಾರಾಯಣ ಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದರು
- ಜುರಾಲ ಯೋಜನೆಗೆ ಇಂದು ಸಂಜೆಯಿಂದ ನೀರು ಹರಿಯಲು ಆರಂಭಿಸಲಿದೆ ಎಂದು ತಿಳಿಸಲಾಗಿದೆ.
ನಾರಾಯಣಪುರ ಜಲಾಶಯ
- ನಾರಾಯಣಪುರ ಜಲಾಶಯ(ಬಸವ ಸಾಗರ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ.
- ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ.
- ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಜುರಾಲಾ ಪ್ರಾಜೆಕ್ಟ್
- ಪ್ರಿಯದರ್ಶಿನಿ ಜುರಾಲಾ ಪ್ರಾಜೆಕ್ಟ್ (ಪಿಜೆಪಿ) ಅಥವಾ ಜುರಾಲಾ ಪ್ರಾಜೆಕ್ಟ್, ಗಡ್ವಾಲ್, ಜೋಗುಲಂಬ ಗಡ್ವಾಲ್ ಜಿಲ್ಲೆ, ತೆಲಂಗಾಣ, ಭಾರತದಿಂದ 15 ಕಿ.ಮೀ ದೂರದಲ್ಲಿದೆ. ಕುರ್ವಾಪುರ್ ಕ್ಷೇತ್ರ ನದಿ ಜುರಲಾ ಪ್ರಾಜೆಕ್ಟ್ನ ನೀರಿನಿಂದ ವಿಲೀನಗೊಳ್ಳುತ್ತಿದೆ.
- ಕೃಷ್ಣ ನದಿಯ ಮೇಲೆ ಈ ಯೋಜನೆ ನಿರ್ಮಾಣವಾಗಿದೆ.
- ಜಿಲ್ಲೆಯ ಕಲ್ಯಾಣಕ್ಕಾಗಿ ಶ್ರೀಮತಿ ಇಂದಿರಾ ಗಾಂಧಿ ಸ್ಥಾಪಿಸಿದ ಯೋಜನೆ ಅಡಿಪಾಯ. ಜುರಾಲವು 1045 ಅಡಿಗಳಷ್ಟು ಪೂರ್ಣ ಜಲಾಶಯವನ್ನು ಹೊಂದಿದ್ದು 94 ಟಿಎಂಸಿ ಪೂರ್ಣ ಸಾಮರ್ಥ್ಯ ಹೊಂದಿದೆ
ಮ್ಯಾಕಿಂತೋಷ್ನಲ್ಲೂ ಕನ್ನಡ ನುಡಿಗಂಧ
ಸುದ್ಧಿಯಲ್ಲಿ ಏಕಿದೆ ?ವಿಂಡೋಸ್ ನಿರ್ವಹಣಾ ವ್ಯವಸ್ಥೆಯಲ್ಲಿ (ಒಎಸ್) ಮಾತ್ರ ಲಭ್ಯವಿದ್ದ ‘ನುಡಿ’ ಉಚಿತ ತಂತ್ರಾಂಶವನ್ನು ಮ್ಯಾಕಿಂತೋಷ್ (ಮ್ಯಾಕ್) ಕಂಪ್ಯೂಟರ್ಗಳಲ್ಲೂ ಬಳಕೆ ಅನುಕೂಲತೆ ಕಲ್ಪಿಸಲಾಗಿದ್ದು, ಕನ್ನಡ ಭಾಷೆಯನ್ನು ಆಧುನಿಕ ತಂತ್ರಾಂಶ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಪ್ರಮುಖ ಘಟ್ಟವೊಂದು ಸಾಧನೆಯಾದಂತಾಗಿದೆ.
- ನುಡಿ ತಂತ್ರಾಂಶ ಅಭಿವೃದ್ಧಿ ಪಡಿಸಿರುವ ಕನ್ನಡ ಗಣಕ ಪರಿಷತ್ ಈ ಮುಕ್ತ ತಂತ್ರಜ್ಞಾನ ರೂಪಿಸಿದೆ. ವಿಂಡೋಸ್ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದರೂ ವೃತ್ತಿಪರರು, ಸಂಶೋಧಕರ ಮಟ್ಟದಲ್ಲಿ ಹೆಚ್ಚು ಬಳಕೆಯಾಗುವ ಮ್ಯಾಕ್ನಲ್ಲಿ ಕನ್ನಡ ಅಳವಡಿಕೆಗೆ ತಂತ್ರಾಂಶ ಬೇಕೆಂಬ ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ.
- ಯೂನಿಕೋಡ್ ಫಾಂಟ್, ಮುಕ್ತ ತಂತ್ರಾಂಶ: ನುಡಿ ತಂತ್ರಾಂಶದ 6ನೇ ಆವೃತ್ತಿ (ನುಡಿ 0) ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಂಪೂರ್ಣ ಯುನಿಕೋಡ್ ಅಕ್ಷರ ಬಳಸಲಾಗಿದೆ. ವಿಶ್ವದ ಯಾವುದೇ ಕಂಪ್ಯೂಟರ್ನಲ್ಲಿ ಫಾಂಟ್ ಸಮಸ್ಯೆಯಿಲ್ಲದೆ ಓದಲು ಸಾಧ್ಯವಿದೆ. ಆದರೆ ಮ್ಯಾಕ್ನಲ್ಲಿ ಕನ್ನಡ ಬರೆಯಲು ಸಾಕಷ್ಟು ಅಡೆತಡೆಗಳಿದ್ದವು. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಗಣಕ ಪರಿಷತ್ತು ಕಳೆದ 3 ತಿಂಗಳು ಪಟ್ಟ ಶ್ರಮ ಫಲಿಸಿದೆ. ಯಾವುದೇ ಶುಲ್ಕವಿಲ್ಲದೆ ಮುಕ್ತವಾಗಿ ನುಡಿ ತಂತ್ರಾಂಶ ಬಳಸಬಹುದು. 10 ಫಾಂಟ್ಗಳನ್ನು ರೂಪಿಸಲಾಗಿದ್ದು, ಎಲ್ಲವೂ ಯೂನಿಕೋಡ್ನಲ್ಲಿವೆ. ಮ್ಯಾಕ್ ಕಂಪ್ಯೂಟರ್ ಜತೆಗೇ ಎಂಎಸ್ ವರ್ಡ್ ಸಹ ಲಭ್ಯವಿರುವ ಕಾರಣಕ್ಕೆ ವಿಂಡೋಸ್ ನುಡಿ ರೀತಿಯಲ್ಲಿ ಟೆಕ್ಸ್ ್ಟ ಎಡಿಟರ್ ರೂಪಿಸಿಲ್ಲ. ವರ್ಡ್ ಜತೆಗೆ ಮುಕ್ತ ತಂತ್ರಾಂಶವಾದ ಲಿಬ್ರೆ ಆಫೀಸ್ನಲ್ಲೂ ನುಡಿ ತಂತ್ರಾಂಶ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ
ಕೇರಳ ಪೊಲೀಸ್ ಕ್ಯಾಪ್!
ಸುದ್ಧಿಯಲ್ಲಿ ಏಕಿದೆ ?ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ದಶಕಗಳ ಹಳೆಯ ಕ್ಯಾಪ್ ಬದಲಾಗಿ ಇನ್ನು ಕೇರಳದ ಪೊಲೀಸರ ಕ್ಯಾಪ್ನ ವಿನ್ಯಾಸದಲ್ಲಿ ಬದಲಾವಣೆ ಬರಲಿದೆ.
- ಉನ್ನತ ಪೊಲೀಸ್ ಅಧಿಕಾರಿಗಳು ಮಾತ್ರ ಉಪಯೋಗಿಸಲು ಅನುಮತಿಯಿರುವ ಬೆರೆಟ್ಸ್ ಕ್ಯಾಪ್ಗಳ ಮಾದರಿಯಲ್ಲಿರುವ ಕ್ಯಾಪ್ಗಳನ್ನು ಎಲ್ಲಾ ಪೊಲೀಸರಿಗೆ ನೀಡಲು ತೀರ್ಮಾನಿಸ ಲಾಗಿದೆ. ಬೆರೆಟ್ಸ್ ಕ್ಯಾಪ್ಗಳು ಮಾವೋವಾದಿ ಕ್ರಾಂತಿಕಾರಿ ಚೇ ಗುವೆರ ಮೂಲಕ ಭಾರಿ ಖ್ಯಾತಿಗೊಂಡಿವೆ.
- ಕರ್ನಾಟಕದಲ್ಲಿ ಪೊಲೀಸರು ಧರಿಸುವ ದಶಕಗಳ ಹಳೆಯ ಸ್ಕೌಚ್ ಕ್ಯಾಪ್ ಬದಲು ಪಿ-ಕ್ಯಾಪ್ ಬಳಕೆ ಕುರಿತು ಈಗಷ್ಟೇ ಚಿಂತನೆ ನಡೆಸುತ್ತಿರುವಾಗಲೇ, ಕೇರಳ ಪೊಲೀಸರು ಈಗಾಗಲೇ ಉಪಯೋಗಿಸುತ್ತಿರುವ ಪಿ-ಕ್ಯಾಪ್ನಿಂದ ಬೆರೆಟ್ಸ್ ಕ್ಯಾಪ್ ಬಳಕೆಗೆ ಉತ್ಸುಕರಾಗಿದ್ದಾರೆ. ಕೇರಳ ಪೊಲೀಸರು ಪಿ-ಕ್ಯಾಪ್ ಉಪಯೋಗಿಸಲು ಉಂಟಾಗುವ ತೊಂದರೆಗಳ ಕುರಿತು ಪೊಲೀಸ್ ಸಂಘಟನೆಗಳ ಮೂಲಕ ಡಿಜಿಪಿಗೆ ಮನವರಿಕೆ ಮಾಡಲಾಗಿತ್ತು. ಈ ಬೇಡಿಕೆ ಪರಿಗಣಿಸಿ ಎಲ್ಲ ಪೊಲೀಸರಿಗೂ ಸುಲಭವಾಗಿ ಧರಿಸಲು ಅನುಕೂಲವಾಗುವ ಬೆರೆಟ್ಸ್ ಕ್ಯಾಪ್ಗಳನ್ನು ನೀಡಲು ತೀರ್ಮಾನಿಸಲಾಗಿದೆ.
- ಯಾಕೆ ಬದಲಾವಣೆ ?: ಪಿ-ಕ್ಯಾಪ್ ಧರಿಸಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅಡ್ಡಿಯಾಗುತ್ತಿದೆ. ಈಗ ಧರಿಸುವ ಪಿ-ಕ್ಯಾಪ್ ತಲೆಯಲ್ಲಿ ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ ಇಂತಹ ಕ್ಯಾಪ್ ಧರಿಸುವುದರಿಂದ ಪೊಲೀಸರ ಆರೋಗ್ಯದ ಮೇಲೂ ಪರಿ ಣಾಮ ಬೀರುತ್ತದೆ. ಬೇಸಿಗೆ ಸಂದರ್ಭ ದಲ್ಲೂ ಪಿ-ಕ್ಯಾಪ್ ಧರಿಸುವುದು ಸಮಸ್ಯೆ ಸೃಷ್ಟಿಸುತ್ತಿದೆ. ಪ್ರಯಾಣದ ಸಂದರ್ಭ ದಲ್ಲೂ, ವಾಹನ ಚಾಲನೆ ಸಂದರ್ಭದಲ್ಲೂ ಸಮಸ್ಯೆಯಾಧಿಗುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು
ಚೇ ಗುವಾರ
- ಅರ್ನೆಸ್ಟೊ ಗುವಾರ (ಜೂನ್ ೧೪, ೧೯೨೮ – ಅಕ್ಟೋಬರ್ ೯, ೧೯೬೭), ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.
- ಚೆ ಗುವೆರ 1928 ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಪಡೆದರು.
- ಟೈಮ್ ನಿಯತಕಾಲಿಕವು ಈತನನ್ನು ೨೦ನೇ ಶತಮಾನದ ೧೦೦ ಅತ್ತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. Guerrillero Heroico ಎಂಬ ಈತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ.
ಐಎನ್ಎಸ್ ರಂಜಿತ್ ಕಾರ್ಯಾಚರಣೆ ಸ್ಥಗಿತ
ಸುದ್ಧಿಯಲ್ಲಿ ಏಕಿದೆ ?ರಷ್ಯನ್ ಮೂಲದ ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ರಂಜಿತ್ ಇನ್ನು ಮುಂದೆ ಕಾರ್ಯಾಚರಣೆ ನಡೆಸಲ್ಲ.
- 36 ವರ್ಷಗಳ ಸುದೀರ್ಘ ಸೇವೆಯ ನಂತರ ಸೋಮವಾರದಿಂದ ಇದರ ಕಾರ್ಯಾಚರಣೆಗೆ ಸ್ಥಗಿತಗೊಳ್ಲಲಿದೆ.
- ಭಾರತೀಯ ನೌಕಾ ಇತಿಹಾಸದಲ್ಲಿ ಅತ್ಯುತ್ತಮವಾದ ಸಮರ ನೌಕೆಯೊಂದರ ಅಧ್ಯಾಯ ಇದರೊಡನೆ ಅಂತ್ಯವಾಗಲಿದೆ.ರಜಪೂತ್ ವರ್ಗದ ಅವಿಧ್ವಂಸಕ ನೌಕೆಗಳಲ್ಲಿ ಇದು ಮೊದಲನೆಯದಾಗಿದೆ.
- ರಂಜಿತ್ ಮೂಲತಃ ಕಾಶಿನ್ ವರ್ಗದ ವಿಧ್ವಂಸಕನಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದೇವೇಂದ್ರ ಕುಮಾರ್ ಜೋಶಿ ವಿಶಾಖಪಟ್ಟಣಂ ನ ನೌಕಾ ಡಾಕ್ ಯಾರ್ಡ್ ನಲ್ಲಿ ಇದನ್ನು ಕಡೆಯ ಬರಿಗೆ ಚಲಾಯಿಸುವವರಿದ್ದಾರೆ.
- ಈ ವಿಧ್ವಂಸಕ ನೌಕೆಯನ್ನು ಯಾರ್ಡ್ 2203 ನಂತೆ ಉಕ್ರೇನಿನ ನಿಕೋಲೇವ್ ಮ್ಯೂನಾರ್ಡ್ಸ್ ಶಿಪ್ ಯಾರ್ಡ್ ನಲ್ಲಿ 1970 ರ ಉತ್ತರಾರ್ಧದಲ್ಲಿ ನಿರ್ಮಿಸಲಾಗಿತ್ತು. “ಲವ್ಕಿ” ಎಂಬುದು ಇದರ ಮೂಲ ಹೆಸರಾಗಿದ್ದು ಈ ಪದ ಅಗೈಲ್ ಎಂಬ ಅರ್ಥವನ್ನು ಸೂಚಿಸುತ್ತದೆ.
- ಸೆಪ್ಟೆಂಬರ್ 1983 ರಲ್ಲಿ ಕ್ಯಾಪ್ಟನ್ ವಿಷ್ಣು ಭಾಗವತ್ ಅವರ ಸಮ್ಮುಖದಲ್ಲಿ ಭಾರತೀಯ ನೌಕಾಪಡೆಗೆ ಇದನ್ನು ನೇಮಕ ಮಾಡಲಾಯಿತು, ಇವರು 1996 ರಿಂದ 1998 ರವರೆಗೆ ನೌಕಾ ಮುಖ್ಯಸ್ಥರಾದರು.
- ರಜಪೂತ್ ವರ್ಗದ ವಿಧ್ವಂಸಕವನ್ನು ಈ ಮುನ್ನ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಉಡಾವಣೆಗಾಗಿ ಬಳಸಲಾಗುತ್ತಿತ್ತು.
ಕಮೋವಾ-31 ಹೆಲಿಕಾಪ್ಟರ್
ಸುದ್ಧಿಯಲ್ಲಿಏಕಿದೆ?ವಾಯುಮಾರ್ಗದ ಮೂಲಕ ಶತ್ರುರಾಷ್ಟ್ರಗಳು ದಾಳಿ ಮಾಡುವ ಆತಂಕವಿರುವುದರಿಂದ ನೌಕಾಪಡೆಯೂ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದ್ದು, ರಷ್ಯಾದಿಂದ 10 ಕಮೋವಾ -31 ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.
- ಇದಕ್ಕೆ ರೂ.3,500 ಕೋಟಿ ಮೊತ್ತ ತಗುಲಲಿದೆ. ಇದನ್ನು ಏರ್ಕ್ರಾಫ್ಟ್ ಹೊತ್ತೊಯ್ಯುವ ನೌಕೆಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.
- ಸದ್ಯ ನೌಕಾಪಡೆಯಲ್ಲಿ 12 ಕಮೋವಾ-31 ಹೆಲಿಕಾಪ್ಟರ್ಗಳಿವೆ. ಜಲಾಂತರ್ಗಾಮಿ ನಿರೋಧಕ ಕಾರ್ಯಚರಣೆಗಾಗಿ ಕಮೋವಾ-28 ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆ ಕೂಡ 6 ಸಿ-295 ಏರ್ಕ್ರಾಫ್ಟ್ಗೆ ಬೇಡಿಕೆ ಇರಿಸಿದೆ.