10th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾ ಗಡಿಯ ಸೈನಿಕರಿಗೂ ಪೂರ್ಣ ಪಿಂಚಣಿ
- ಭಾರತ–ಚೀನಾ ವಿವಾದಿತ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಕುಟುಂಬಗಳಿಗೆ ಪೂರ್ತಿ ಪಿಂಚಣಿ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
- ಕಳೆದ ವಾರ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು 3,488 ಕಿಲೋ ಮೀಟರ್ ಉದ್ದದ ಭಾರತ–ಚೀನಾ ಗಡಿಯಲ್ಲಿ ಕಾರ್ಯ ನಿರ್ವಹಿಸುವ ಸೈನಿಕರ ಕುಟುಂಬಗಳಿಗೆ ‘ಸಂಪೂರ್ಣ ಕೌಟುಂಬಿಕ ಪಿಂಚಣಿ’ ಆದೇಶ ಹೊರಡಿಸಿತ್ತು.
- ಇದುವರೆಗೆ ಭಾರತ–ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಮಾತ್ರ ಸಂಪೂರ್ಣ ಪಿಂಚಣಿ ದೊರಕುತ್ತಿತ್ತು. ಈ ಯೋಜನೆಯಡಿ ಮೃತಪಟ್ಟ ಸೈನಿಕರು ಕೊನೆಯದಾಗಿ ಪಡೆದ ಸಂಬಳದ ಶೇ 100ರಷ್ಟನ್ನು ಕೌಟುಂಬಿಕ ಪಿಂಚಣಿ ನೀಡಲಾಗುತ್ತದೆ.
- ಈ ಸೌಲಭ್ಯ ಎಲ್ಎಸಿಯಲ್ಲಿ ನಿಯೋಜಿತರಾಗುವ ಸೈನಿಕರಿಗೆ ದೊರಕುತ್ತಿರಲಿಲ್ಲ. ಈ ಸೌಲಭ್ಯ ಎಲ್ಎಸಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೂ ದೊರಕಬೇಕು ಎಂದು ಸೇನೆ ಮನವಿ ಮಾಡಿತ್ತು.
ದಯಾಮರಣಕ್ಕೆ ಅವಕಾಶ
- ಮನುಷ್ಯನಿಗೆ ಘನತೆಯಿಂದ ಸಾಯುವ ಹಕ್ಕು ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡುವ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.
- ಮಾರಣಾಂತಿಕ ರೋಗಗಳಿಂದ ಬಳಲುವ ವ್ಯಕ್ತಿಯು ‘ಮರಣ ಇಚ್ಛೆಯ ಉಯಿಲು’ ಬರೆಯುವುದಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಅವಕಾಶ ಕೊಟ್ಟಿದೆ.
- ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ರೀತಿಯ ಕೋಮಾ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ಚಿಕಿತ್ಸೆಗೆ ಮೊದಲು ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ರೋಗಿಯ ಕೃತಕ ಉಸಿರಾಟ ಅಥವಾ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಲು ವೈದ್ಯರಿಗೆ ಅವಕಾಶ ದೊರೆಯುತ್ತದೆ.
- ಈ ಉಯಿಲನ್ನು ಯಾರು ಜಾರಿಗೆ ತರಬಹುದು, ಯಾವ ರೀತಿ ಜಾರಿಗೆ ತರಬೇಕು ಮತ್ತು ವೈದ್ಯಕೀಯ ಮಂಡಳಿಯ ಅನುಮತಿ ಪಡೆದುಕೊಳ್ಳುವ ಪ್ರಕ್ರಿಯೆ ಏನು ಎಂಬ ಮಾರ್ಗದರ್ಶಿಯನ್ನು ಸಂವಿಧಾನ ಪೀಠ ಸಿದ್ಧಪಡಿಸಿದೆ
- ಮಾರಣಾಂತಿಕ ಕಾಯಿಲೆ ಇರುವ ರೋಗಿಯ ಪ್ರತಿನಿಧಿ ಮತ್ತು ಸಂಬಂಧಿಕರು ದಯಾಮರಣದ ಪ್ರಕ್ರಿಯೆ ಆರಂಭಿಸಬಹುದು. ವೈದ್ಯಕೀಯ ಮಂಡಳಿಯು ಬಳಿಕ ಅದನ್ನು ಪರಿಶೀಲಿಸಬೇಕು. ಸಂಸತ್ತು ಕಾನೂನು ರೂಪಿಸುವವರೆಗೆ ಪೀಠವು ನೀಡಿರುವ ನಿರ್ದೇಶನಗಳು ಮತ್ತು ಮಾರ್ಗದರ್ಶಿಸೂತ್ರಗಳು ಜಾರಿಯಲ್ಲಿರುತ್ತವೆ ಎಂದು ಪೀಠ ತಿಳಿಸಿದೆ.
- ಸಂವಿಧಾನ ಪೀಠವು ನಾಲ್ಕು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿತ್ತು. ಆದರೆ, ‘ಮರಣ ಇಚ್ಛೆಯ ಉಯಿಲು’ ಬರೆಯಲು ಅವಕಾಶ ಕೊಡುವ ವಿಚಾರದಲ್ಲಿ ಒಮ್ಮತ ಇತ್ತು ಎಂದು ದೀಪಕ್ ಮಿಶ್ರಾ ತಿಳಿಸಿದ್ದಾರೆ.
- ಮೊದಲ ದಯಾಮರಣ
ಅರುಣಾ ಶಾನುಬಾಗ್ ಅವರದ್ದು ಭಾರತದ ಮೊದಲ ದಯಾಮರಣ ಪ್ರಕರಣ. 1973ರಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ಅರುಣಾ ಅವರು 42 ವರ್ಷ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 2015ರಲ್ಲಿ ಅವರು ಮೃತಪಟ್ಟರು. - ಅರುಣಾ ಅವರಿಗೆ ಬಲವಂತವಾಗಿ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಬಳಿಕ ದಯಾಮರಣಕ್ಕೆ ಅವಕಾಶ ಕೊಟ್ಟಿತ್ತು. ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು ಎಂದು ಹೇಳಿತ್ತು.
- ಕಾಮನ್ ಕಾಸ್ ಅರ್ಜಿ
ಮಾರಣಾಂತಿಕ ಕಾಯಿಲೆಯ ರೋಗಿಗೆ ಒದಗಿಸಿರುವ ಕೃತಕ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವ ಸಂದರ್ಭದಲ್ಲಿ ಮಾರ್ಗದರ್ಶಿಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೋರಿ ಕಾಮನ್ ಕಾಸ್ ಎನ್ಜಿಒ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಆಧಾರದಲ್ಲಿ ದಯಾಮರಣದ ತೀರ್ಪು ನೀಡಲಾಗಿದೆ.ಸಾವಿನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನೋವು ಅನುಭವಿಸುವ ಅವಧಿಯನ್ನು ಕಡಿಮೆಗೊಳಿಸುವುದು ಘನತೆಯಿಂದ ಬದುಕುವ ಹಕ್ಕಿನ ಭಾಗವಾಗಿದೆ. - ದಯಾಮರಣದ ಬಗೆಗಳು
- ಸಕ್ರಿಯ ಮತ್ತು ನಿಷ್ಕ್ರಿಯ/ಪರೋಕ್ಷ ಎಂಬ ಎರಡು ವಿಧಗಳಿವೆ. ಈ ಎರಡೂ ಬಗೆಗಳು ಅಂತಿಮವಾಗಿ ವ್ಯಕ್ತಿಯೊಬ್ಬನನನ್ನು ಅಕಾಲಿಕ ಹಾಗೂ ಅಸ್ವಾಭಾವಿಕ ಮರಣಕ್ಕೆ ಈಡುಮಾಡುವುದರಿಂದ, ಇವುಗಳಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಇಲ್ಲ ಎಂಬುದು ಕೆಲವೊಂದು ಕ್ಷೇತ್ರತಜ್ಞರ ಅಭಿಪ್ರಾಯವಾಗಿದ್ದರೂ, ರೋಗಿಯನ್ನು ಉಳಿಸುವಂಥ ಎಂಥದೇ ಕ್ರಮವನ್ನು ವೈದ್ಯಕೀಯ ವೃತ್ತಿಪರಿಣತರು ಉದ್ದೇಶಪೂರ್ವಕವಾಗಿ ಕೈಗೊಳ್ಳದಿರುವುದು ಸಕ್ರಿಯ ದಯಾಮರಣ ಎನ್ನಲಾಗುತ್ತದೆ.
- ಮಾರಕ ಪದಾರ್ಥಗಳ ಮೂಲಕ, ಅಂದರೆ ಮಾರಕ ದ್ರವ್ಯವಿರುವ ಚುಚ್ಚುಮದ್ದು ನೀಡುವ ಮೂಲಕ ರೋಗಿಯ ಪ್ರಾಣ ಹೋಗುವಂತೆ ಮಾಡುವುದು ಈ ವರ್ಗದಲ್ಲಿ ಬರುತ್ತದೆ. ಸಕ್ರಿಯ ದಯಾಮರಣವು, ಸ್ವತಃ ರೋಗಿ ಅಥವಾ ಅವರ ಕುಟುಂಬಿಕರು ಇಂಥದೊಂದು ಸಾವಿಗೆ ಅವಕಾಶ ಕೋರಿ ನಿರ್ಣಯಿಸಿರುವುದನ್ನು ಒಳಗೊಂಡಿರಬಹುದು.
- ಇದಕ್ಕೆ ಪ್ರತಿಯಾಗಿ, ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸದೆ ಸಂಪೂರ್ಣ ನಿಲ್ಲಿಸುವ (ಉದಾಹರಣೆಗೆ, ಉಪಯುಕ್ತ ಔಷಧಗಳನ್ನು ಬಳಕೆಯನ್ನು ಕ್ರಮೇಣ/ನಿಧಾನವಾಗಿ ನಿಲ್ಲಿಸುವಿಕೆ ಅಥವಾ ರೋಗಿಗೆ ಅಳವಡಿಸಿರುವ ಜೀವರಕ್ಷಕ ವ್ಯವಸ್ಥೆ ತೆಗೆಯುವಿಕೆ) ಮತ್ತು ಆಹಾರ-ನೀರಿನಂಥ ಮೂಲಭೂತ ಅವಶ್ಯಕತೆಗಳ ಪೂರೈಕೆ ನಿಲ್ಲಿಸುವ, ತನ್ಮೂಲಕ ನಿರ್ಬಂಧದ ಪರಿಸ್ಥಿತಿ ರೂಪುಗೊಂಡು ರೋಗಿಯ ಸಹಜಸಾವಿಗೆ ಅನುವು ಮಾಡಿಕೊಡುವಂಥ ವಿಧಾನ ಪರೋಕ್ಷ ದಯಾಮರಣ ಎನಿಸಿಕೊಳ್ಳುತ್ತದೆ.
- ಅಂತಿಮವಾಗಿ ರೋಗಿಯ ಸಾವಿಗೆ ಕಾರಣವಾಗುವಂಥ ನೋವುಶಾಮಕಗಳನ್ನು (Painkillers) ರೋಗಿಗೆ ನೀಡುವುದು ಪರೋಕ್ಷ ದಯಾಮರಣ ಎನಿಸಿಕೊಳ್ಳುತ್ತದೆ.
ಸುಪ್ರೀಂ ಮಾರ್ಗ ಸೂಚಿಗಳು ಏನು?
- ಪರೋಕ್ಷ ದಯಾಮರಣ (ಪ್ಯಾಸಿವ್ ಯುಥನೇಸಿಯಾ) ಮತ್ತು ಲಿವಿಂಗ್ ವಿಲ್ ದುರುಪಯೋಗ ತಡೆಯಲು ಸುಪ್ರೀಂಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ವಿಧಿಸಿದೆ.
- ಯಾರು, ಹೇಗೆ ಲಿವಿಂಗ್ ವಿಲ್ನ್ನು ಜಾರಿಗೊಳಿಸಬೇಕು. ವೈದ್ಯಕೀಯ ಮಂಡಳಿಯೊಂದು ಯಾವಾಗ, ಹೇಗೆ ಪ್ಯಾಸಿವ್ ಯುಥನೇಸಿಯಾಗೆ ಅನುಮೋದನೆ ನೀಡಬೇಕು ಎಂಬ ಸ್ಪಷ್ಟನೆ ಇದರಲ್ಲಿದೆ.
- ಗುಣವಾಗದ ಕಾಯಿಲೆ/ಚೇತರಿಕೆ ಅಸಾಧ್ಯವಾದ ಪರಿಸ್ಥಿತಿ (ಕೋಮಾ)ಯಲ್ಲಿರುವ ಅಥವಾ ಪರಿಸ್ಥಿತಿ ಎದುರಾಗುವುದನ್ನು ವೈದ್ಯರಿಂದ ತಿಳಿದ ವ್ಯಕ್ತಿ ಮುಂಚಿತವಾಗಿಯೇ ಲಿವಿಂಗ್ ವಿಲ್ ರಚಿಸಬಹುದು.
- ವೈದ್ಯಕೀಯ ಮಂಡಳಿ ಪ್ರಮಾಣಿಕರಿಸಿದ ನಂತರ ಮಾತ್ರ ರೋಗಿಯ ಅಥವಾ ವ್ಯಕ್ತಿಗೆ ಒದಗಿಸಲಾಗಿರುವ ಜೀವರಕ್ಷಕ ವ್ಯವಸ್ಥೆ ತೆಗೆಯಬಹುದು.
ಏನಿದು ಯುಥನೇಸಿಯಾ?
- ‘ಯು’ ಮತ್ತು ‘ ಥನಟೋಸ್ ’ ಎಂಬ ಗ್ರೀಕ್ ಭಾಷೆಯ ಪದಗಳಿಂದ ಯುಥನೇಸಿಯಾ ಪದ ರಚನೆಯಾಗಿದೆ. ಇದರ ಅರ್ಥ ಸಹಜ ಸಾವು, ಸುಲಭ ಸಾವು ಎಂದಾಗುತ್ತದೆ. ಕಳೆದ 17ನೇ ಶತಮಾನದಿಂದಲೂ ವಿಶ್ವದ ವಿವಿಧ ದೇಶಗಳಲ್ಲಿ ಪದ ಬಳಕೆಯಲ್ಲಿದೆ. ದಯಾಮರಣ, ನಿರ್ದೇಶಿತ ಆತ್ಮಹತ್ಯೆ, ವೈದ್ಯರಿಂದ ನಿರ್ದೇಶಿತ ಆತ್ಮಹತ್ಯೆ, ದಯಾ ಬಿಡುಗಡೆ, ಸಂತಸದ ಬಿಡುಗಡೆ ಎಂಬ ಪದಗಳನ್ನು ಸಮನಾರ್ಥಕವಾಗಿ ಬಳಸಲಾಗುತ್ತದೆ.
ಏನಿದು ದಯಾಮರಣ?
- ಭಾಗಶಃ ಪ್ರಜ್ಞಾವಸ್ಥೆ/ಅರೆಜಾಗೃತ ಸ್ಥಿತಿಯಲ್ಲಿರುವ ಅಥವಾ ಗುಣಮುಖರಾಗಿ ಪೂರ್ವಸ್ಥಿತಿಗೆ ಮರಳಲಾಗದಂಥ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೊಬ್ಬರಿಗೆ ‘ಯಾತನಾರಹಿತ ಮರಣ’ವನ್ನುಂಟುಮಾಡುವ ಪ್ರಕ್ರಿಯೆಯೇ ದಯಾ ಮರಣ.
ಅನ್ಯದೇಶಗಳಲ್ಲಿ ದಯಾಮರಣ
- ರೋಗಿಯ ಕೋರಿಕೆ ಆಧರಿಸಿ ಅವರ ಜೀವನಕ್ಕೆ ಪೂರ್ಣವಿರಾಮ ಹಾಕುವ ಅಧಿಕಾರವನ್ನು ವೈದ್ಯರಿಗೆ ಕಲ್ಪಿಸಿರುವ ದೇಶ ನೆದರ್ಲೆಂಡ್.
- ಈ ಪರಿಪಾಠದಲ್ಲಿ, ಸ್ವಯಂಪ್ರೇರಿತ, ಸ್ವಯಂಪ್ರೇರಿತವಲ್ಲದ ಹಾಗೂ ಸ್ವಯಂಪ್ರೇರಣೆಗೆ ವಿರುದ್ಧವಾಗಿರುವ ಎಂಬ 3 ಪ್ರತ್ಯೇಕ ವಿಧಾನಗಳಿವೆ ಎಂಬುದು ಗಮನಿಸಬೇಕಾದ ಸಂಗತಿ. ಸಹಿಸಲಸಾಧ್ಯವಾದ ತೀವ್ರವೇದನೆಯಿಂದ ಬಳಲುತ್ತಿರುವ ರೋಗಿಯೊಬ್ಬರ ಇಚ್ಛೆಗೆ ಅನುಸಾರವಾಗಿ ಮಧ್ಯಪ್ರವೇಶಿಸಿ ಬಲವಂತವಾಗಿ ಸಾವು ತಂದೊಡ್ಡುವುದು ಬ್ರಿಟನ್ನಲ್ಲಿ ದಯಾಮರಣ ಎನಿಸಿಕೊಂಡಿದೆ.
- ಅಮೆರಿಕ ಮತ್ತು ಕೆನಡಾದ ಕೆಲ ಭಾಗಗಳಲ್ಲಿ, ಸ್ವಿಜರ್ಲೆಂಡ್, ಅಲ್ಬೇನಿಯಾ, ಲಕ್ಸಂಬರ್ಗ್, ಎಸ್ಟೋನಿಯಾ ಮೊದಲಾದ ದೇಶಗಳಲ್ಲಿ ದಯಾಮರಣಕ್ಕೆ ಕಾನೂನಿನ ಅಂಗೀಕಾರದ ಮುದ್ರೆಯಿದೆ. ಅಮೆರಿಕದ ಒರೆಗಾನ್ ಸಂಸ್ಥಾನದಲ್ಲಿ 1997ರಲ್ಲಿ ವಿಧ್ಯುಕ್ತ ಸ್ವರೂಪವನ್ನು ದಕ್ಕಿಸಿಕೊಂಡ ‘ಘನತೆಯೊಂದಿಗಿನ ಸಾವಿನ ಕಾಯ್ದೆ’ ಯ ಅನುಸಾರ, ಸಹಿಸಲಾಧ್ಯವಾದ ಕಡುವೇದನೆ ಅನುಭವಿಸುತ್ತಿರುವವರು, ಮಾರಣಾಂತಿಕ ಕಾಯಿಲೆಗೆ ತುತ್ತಾದವರು ವೈದ್ಯರಿಂದ ಮಾರಕ ಔಷಧ ಪಡೆದು ಸ್ವತಃ ಸೇವಿಸಿ ಸಾಯುವುದಕ್ಕೆ ಅನುಮತಿಯಿದೆ. ಇಂಥದೇ ಕಾಯ್ದೆ ವಾಷಿಂಗ್ಟನ್ನಲ್ಲೂ 2008ರಲ್ಲಿ ಅನುಷ್ಠಾನಗೊಂಡಿತು ಎಂಬುದು ಗಮನಾರ್ಹ.
ಕಾರು, ಬೈಕ್ಗಳಿಗೂ ವೇಗ ನಿಯಂತ್ರಕ!
- ಸ್ವಂತಕ್ಕಾಗಿ ಬಳಸುವ ಕಾರು ಮತ್ತು ದ್ವಿಚಕ್ರ ವಾಹನಗಳಿಗೂ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಕೆ ಕಡ್ಡಾಯವಾಗುವ ಸಾಧ್ಯತೆಯಿದೆ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಖಾಸಗಿ ವಾಹನಗಳಿಗೂ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಭಾರತ ಸಾರಿಗೆ ಮಂಡಳಿ (ಸಿಟ್ಕೋ) ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.
- ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 118ರಡಿ ಖಾಸಗಿ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ ಮಾಡಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ
- ಆಂಬುಲೆನ್ಸ್ಗಳಿಗೆ ತೆರಿಗೆ ವಿನಾಯಿತಿ: ಪ್ರವಾಸಿ ವಾಹನಗಳಿಗೆ ಅನುಕೂಲವಾಗುವಂತೆ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 88(9)ಗೆ ಸೂಕ್ತ ತಿದ್ದುಪಡಿ ತಂದು ರಾಷ್ಟ್ರಾದ್ಯಂತ ಏಕರೂಪ ತೆರಿಗೆ ಜಾರಿ ತರಲೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಟ್ಕೋ ನಿರ್ಧರಿಸಿದೆ. ಆಂಬುಲೆನ್ಸ್ಗಳಿಗೆ ತೆರಿಗೆ ಮತ್ತು ಪರ್ವಿುಟ್ ವಿನಾಯಿತಿ ನೀಡಲು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಚಿವರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಪ್ರಧಾನ್ ಮಂತ್ರಿ ರೋಜ್ಗರ್ ಪ್ರೋತ್ಸಾಹಾನ್ ಯೋಜನೆ (ಪಿಎಂಆರ್ಪಿವೈ)
- ಪ್ರಧಾನ್ ಮಂತ್ರಿ ರೋಜ್ಗರ್ ಪ್ರೋತ್ಸಾಹಾನ್ ಯೋಜನೆ (ಪಿಎಂಆರ್ಪಿವೈ) ಯೋಜನಾ ಯೋಜನೆ ಹೊಸ ಉದ್ಯೋಗದ ಉತ್ಪಾದನೆಗೆ ಉದ್ಯೋಗದಾತರನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಭಾರತ ಸರ್ಕಾರ 8.33% ಹೊಸ ಉದ್ಯೋಗಕ್ಕಾಗಿ ಉದ್ಯೋಗದಾತರಿಗೆ ಇಪಿಎಸ್ ಕೊಡುಗೆ ನೀಡುತ್ತಿದೆ.
- ಈ ಯೋಜನೆಯು ಒಂದು ದ್ವಿ ಪ್ರಯೋಜನವನ್ನು ಹೊಂದಿದೆ, ಅಲ್ಲಿ, ಒಂದೆಡೆ, ಉದ್ಯೋಗಿ ಉದ್ಯೋಗಿಗಳ ಉದ್ಯೋಗದ ಉದ್ಯೋಗವನ್ನು ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುತ್ತದೆ ಮತ್ತು ಮತ್ತೊಂದೆಡೆ, ಅಂತಹ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ನೌಕರರು ಉದ್ಯೋಗವನ್ನು ಹುಡುಕುತ್ತಾರೆ.
- ಸಂಘಟಿತ ಕ್ಷೇತ್ರದ ಸಾಮಾಜಿಕ ಭದ್ರತೆಗೆ ಈ ಕಾರ್ಮಿಕರು ಪ್ರವೇಶವನ್ನು ಪಡೆದುಕೊಳ್ಳುತ್ತಾರೆ ಎಂಬುದು ಒಂದು ನೇರ ಲಾಭ
ಯೋಜನೆಯ ಅವಧಿ
- ಈ ಯೋಜನೆಯು 3 ವರ್ಷಗಳ ಕಾಲ ಕಾರ್ಯಾಚರಣೆಯಲ್ಲಿದೆ ಮತ್ತು ಭಾರತ ಸರ್ಕಾರವು ಮುಂದಿನ 3 ವರ್ಷಗಳಲ್ಲಿ ಉದ್ಯೋಗದಾತರಿಂದ ಮಾಡಲ್ಪಟ್ಟ 8.33% ಇಪಿಎಸ್ ಕೊಡುಗೆಗಳನ್ನು ಪಾವತಿಸಲು ಮುಂದುವರಿಯುತ್ತದೆ.ಅಂದರೆ, 2019 ರಿಂದ 20 ರ ವರೆಗೆ ಎಲ್ಲಾ ಹೊಸ ಅರ್ಹ ಉದ್ಯೋಗಿಗಳು PMRPY ಯೋಜನೆಯಡಿಯಲ್ಲಿ ಒಳಗೊಳ್ಳಲಿದ್ದಾರೆ.
ರಸಪ್ರಶ್ನೆ
1. ಕೆಳಗೆ ಕೊಟ್ಟಿರುವ ದೇಶದ ಗಡಿರೇಖೆಗಳು ಮತ್ತು ದೇಶಗಳಲ್ಲಿ ಸರಿಯಾದ ಜೋಡಿಯನ್ನು ಗುರುತಿಸಿ
1.38 ಪ್ಯಾರಲಲ್ – ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
2.49 ಪ್ಯಾರಲಲ್ – ಯು .ಯಸ್ .ಎ ಮತ್ತು ಕೆನಡಾ
3.ದುರಾಂಡ್ ರೇಖೆ – ಭಾರತ ಮತ್ತು ಆಫ್ಘಾನಿಸ್ಥಾನ
4.ಮ್ಯಾಕ್ ಮೋಹನ್ ಲೈನ್ – ಭಾರತ ಮತ್ತು ಚೀನಾ.
A)1 &2 ಮಾತ್ರ
B)ಮಾತ್ರ
C)1,2,3 ಮಾತ್ರ
D)1,2,3,4
2.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆ ಯನ್ನು ಗುರುತಿಸಿ
1.ರೋಗಿಯನ್ನು ಉಳಿಸುವಂಥ ಎಂಥದೇ ಕ್ರಮವನ್ನು ವೈದ್ಯಕೀಯ ವೃತ್ತಿಪರಿಣತರು ಉದ್ದೇಶಪೂರ್ವಕವಾಗಿ ಕೈಗೊಳ್ಳದಿರುವುದು ಸಕ್ರಿಯ ದಯಾಮರಣ ಎನ್ನಲಾಗುತ್ತದೆ
2.ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸದೆ ಸಂಪೂರ್ಣ ನಿಲ್ಲಿಸುವ ಮತ್ತು ಆಹಾರ-ನೀರಿನಂಥ ಮೂಲಭೂತ ಅವಶ್ಯಕತೆಗಳ ಪೂರೈಕೆ ನಿಲ್ಲಿಸುವ, ತನ್ಮೂಲಕ ನಿರ್ಬಂಧದ ಪರಿಸ್ಥಿತಿ ರೂಪುಗೊಂಡು ರೋಗಿಯ ಸಹಜಸಾವಿಗೆ ಅನುವು ಮಾಡಿಕೊಡುವಂಥ ವಿಧಾನ ಪರೋಕ್ಷ ದಯಾಮರಣ ಎನಿಸಿಕೊಳ್ಳುತ್ತದೆ.
A)1 ಮಾತ್ರ
B)2 ಮಾತ್ರ
C)1 & 2
D)ಯಾವುದು ಅಲ್ಲ
3.ಪ್ರಧಾನ್ ಮಂತ್ರಿ ರೋಜ್ಗರ್ ಪ್ರೋತ್ಸಾಹಾನ್ ಯೋಜನೆ ಎಷ್ಟು ವರ್ಷಗಳ ಕಾರ್ಯಾಚರಣೆಯಲ್ಲಿದೆ?
A)2
B)3
C)4
D)5
4.ಪ್ರಸಿದ್ಧ “ಪುರಂದರ ಒಪ್ಪಂದ” 1665 ರಲ್ಲಿ ಶಿವಾಜಿ ಮತ್ತು ಯಾರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು?
(A) ಜಸ್ವಂತ್ ಸಿಂಗ್
(B) ಜೈ ಸಿಂಗ್
(C) ಷೈಸ್ತ್ ಖಾನ್
(D) ಔರಂಗಜೇಬ್
5.ಕೆಳಗಿನ ಯಾವ ವಿಟಮಿನನ್ನು ಟೋಕೋಫೆರೋಲ್ ಎಂದು ಕರೆಯುತ್ತಾರೆ?
[A] ವಿಟಮಿನ್ ಡಿ
[B] ವಿಟಮಿನ್ ಇ
[C] ವಿಟಮಿನ್ ಕೆ
[D] ವಿಟಮಿನ್ ಸಿ
6.ಭೂಮಿಯ ಮೇಲೆ ಅತ್ಯಂತ ತಾಪಮಾನ ಇರುವ ಸ್ಥಳ ‘ಅಲ್ ಆಜ಼ಿಜ಼ಿಯ ಯಾವ ದೇಶ ದಲ್ಲಿ ದೆ ?
(A) ಲಿಬಿಯಾ
(B) ಸುಡಾನ್
C) ಈಜಿಪ್ಟ್
(D) ನೈಜರ್
7.ಲೋಕಸಭೆಯ ಅವಧಿಯನ್ನು ವಿಸ್ತರಿಸುವ ಅಧಿಕಾರ ಯಾರಿಗಿದೆ……… ..?
[A] ಪ್ರಧಾನಿ
[B] ರಾಷ್ಟ್ರಪತಿ
[C] ಲೋಕಸಭಾ ಸ್ಪೀಕರ್
[D ಉಪ ರಾಷ್ಟ್ರಪತಿ
8.ಪ್ರಸಿದ್ಧ ಪುಲಿಟ್ಜರ್ ಪ್ರಶಸ್ತಿಯನ್ನು ನೀಡುವ ವಿಶ್ವವಿದ್ಯಾಲಯ ಯಾವುದು?
A) ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
B) ಕೊಲಂಬಿಯಾ ವಿಶ್ವವಿದ್ಯಾಲಯ
C) ಆಕ್ಸ್ಫರ್ಡ್ ವಿಶ್ವವಿದ್ಯಾಲಯ
D) ಹಾರ್ವಡ್ ವಿಶ್ವವಿದ್ಯಾಲಯ
9.ಒಂದು ಕೊಂಬಿನ ಪ್ಯಾಚಿಡರ್ನ ರಕ್ಷಣೆ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲು ಅಸ್ಸಾಂ ಸರ್ಕಾರವು ‘ರೈನೋ ಡೇ’ ಅನ್ನು ಯಾವ ದಿನದಲ್ಲಿ ವೀಕ್ಷಿಸುತ್ತದೆ?
A) ೧೯ ಸೆಪ್ಟೆಂಬರ್
B) ೨೦ ಸೆಪ್ಟೆಂಬರ್
C) ೨೧ ಸೆಪ್ಟೆಂಬರ್
D) ೨೨ ಸೆಪ್ಟೆಂಬರ್
10.ವಿಶೇಷ ಸಂದರ್ಭಗಳಲ್ಲಿ ರಾಜ್ಯಗಳ ಆಡಳಿತವನ್ನು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸಲು ಸಂವಿಧಾನದ ಯಾವ ಅಧಿನಿಯಮ (ವಿಧಿ) ಅವಕಾಶ ಕಲ್ಪಿಸಿದೆ?
A) 156ನೇ ಅಧಿನಿಯಮ
B) 256ನೇ ಅಧಿನಿಯಮ
C) 356ನೇ ಅಧಿನಿಯಮ
D) 456ನೇ ಅಧಿನಿಯಮ
ಉತ್ತರಗಳು
- D 2.C 3.B 4.B 5.B 6.A 7. B 8.D 9. D 10.C