14 ಜುಲೈ 2025
14 ಜುಲೈ 2025
1. ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿAದ (ISS) ಭೂಮಿಗೆ ಮರಳಿ ಕರೆತರಲು ಬಳಸಲಾಗುವ ಬಾಹ್ಯಾಕಾಶ ಕೋಶ ಯಾವುದು?
a) ಫಾಲ್ಕನ್-9
b) ಸ್ಟಾರ್‌ಲೈನರ್
c) ಡ್ರ್ಯಾಗನ್
d) ಓರಿಯನ್
2. ‘ಆಕ್ಸಿಯಂ–೪’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–೯’ ರಾಕೆಟ್ ಯಾವ ಕೇಂದ್ರದಿAದ ನಭಕ್ಕೆ ಚಿಮ್ಮಿತ್ತು?
a) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
b) ಬೈಕೊನೂರ್ ಕಾಸ್ಮೋಡ್ರೋಮ್
c) ಕೆನಡಿ ಬಾಹ್ಯಾಕಾಶ ಕೇಂದ್ರ
d) ಗಯಾನಾ ಬಾಹ್ಯಾಕಾಶ ಕೇಂದ್ರ
3. ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ, ಚುನಾವಣಾ ಆಯೋಗವು ಯಾವ ದಾಖಲೆಗಳನ್ನು ಕ್ರಮಬದ್ಧವೆಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ?
a) ಪಾಸ್‌ಪೋರ್ಟ್, ಚಾಲನಾ ಪರವಾನಗಿ ಮತ್ತು ಬ್ಯಾಂಕ್ ಪಾಸ್‌ಬುಕ್
b) ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿ
c) ಪ್ಯಾನ್ ಕಾರ್ಡ್, ಜನನ ಪ್ರಮಾಣಪತ್ರ ಮತ್ತು ನೀರಿನ ಬಿಲ್
d) ಶಾಲಾ ಗುರುತಿನ ಚೀಟಿ, ವಿದ್ಯುತ್ ಬಿಲ್ ಮತ್ತು ದೂರವಾಣಿ ಬಿಲ್
4. ಮತದಾರರ ಪಟ್ಟಿ ಪರಿಷ್ಕರಣೆಯು ಪ್ರಜಾ ಪ್ರಾತಿನಿಧ್ಯ ಕಾಯ್ದೆ-1950ರ ವಿವಿಧ ಅವಕಾಶಗಳು ಮತ್ತು ಮತದಾರರ ನೋಂದಣಿ ನಿಯಮಗಳು-1960ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ವಾದದ ಹಿಂದಿನ ಮುಖ್ಯ ಕಾಳಜಿ ಏನು?
a) ಪರಿಷ್ಕರಣೆಯು ಚುನಾವಣಾ ಆಯೋಗದ ಅಧಿಕಾರವನ್ನು ಹೆಚ್ಚಿಸುತ್ತದೆ.
b) ಪರಿಷ್ಕರಣೆಯ ಆದೇಶವನ್ನು ರದ್ದುಪಡಿಸದಿದ್ದರೆ ಲಕ್ಷಾಂತರ ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶದಿಂದ ವಂಚಿತರಾಗುತ್ತಾರೆ.
c) ಪರಿಷ್ಕರಣೆಯು ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುತ್ತದೆ.
d) ಪರಿಷ್ಕರಣೆಯು ಹೊಸ ಮತದಾರರ ನೋಂದಣಿಯನ್ನು ನಿಲ್ಲಿಸುತ್ತದೆ.
5.ಮತದಾರರ ಪಟ್ಟಿ ಪರಿಷ್ಕರಣೆಯು ಸಂವಿಧಾನದ ವಿವಿಧ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಕೆಳಗಿನ ಯಾವ ವಿಧಿಗಳು ಅವರ ವಾದದಲ್ಲಿ ಸೇರಿವೆ?
- 14 ನೇ ವಿಧಿ (ಸಮಾನತೆಯ ಹಕ್ಕು)
- 19 ನೇ ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)
- 21 ನೇ ವಿಧಿ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು)
- 326 ನೇ ವಿಧಿ (ವಯಸ್ಕ ಮತದಾನದ ಹಕ್ಕು)
a) 1 ಮತ್ತು 2 ಮಾತ್ರ
b) 2 ಮತ್ತು 3 ಮಾತ್ರ
c) 1, 3 ಮತ್ತು 4 ಮಾತ್ರ
d) 1, 2, 3, 4 ಮತ್ತು 325 ನೇ ವಿಧಿ
